Homeಜಿಲ್ಲೆಫುಟ್ ಪಾತ್ ನ ತಿಂಡಿ ಗಾಡಿಗಳು ಹಠತ್ತಾಗಿ ತೆರವು

ಫುಟ್ ಪಾತ್ ನ ತಿಂಡಿ ಗಾಡಿಗಳು ಹಠತ್ತಾಗಿ ತೆರವು

Spread the love

ಶಿವಮೊಗ್ಗ, ಏ.7: ಸಂಚಾರಿ ಪೊಲೀಸರು ಇಂದು ಆರ್‌ಟಿಓ ಕಛೇರಿ ರಸ್ತೆಯಲ್ಲಿ ಫುಟ್‌ಪಾತ್‌ನಲ್ಲಿರುವ ತಿಂಡಿಗಾಡಿಗಳನ್ನು ಹಠಾತ್ತಾಗಿ ತೆರವುಗೊಳಿಸಿದ್ದಾರೆ.

ನಗರದ ಆರ್‌ಟಿಓ ಕಛೇರಿ, ಜಯನಗರ ಪೊಲೀಸ್ ಠಾಣೆ, ಪತ್ರಿಕಾ ಭವನ, ಅರಣ್ಯ ಅಧಿಕಾರಿಗಳ ಕಛೇರಿ, ಜಿಲ್ಲಾ ಅಬಕಾರಿ ಭವನ, ಸರ್ಕಾರಿ ನೌಕರರ ಭವನ ಸೇರಿದಂತೆ ಬಹುತೇಕ ಪ್ರಮುಖ ಕಛೇರಿಗಳು ರಸ್ತೆಯಲ್ಲಿದ್ದು, ಪ್ರತಿನಿತ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಸದಾ ಗಿಜಿಗುಡುವ ಜನಸಂದಣಿ ಇದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಸವಾರರು ಮನಬಂದ್ದಂತೆ ಪಾರ್ಕಿಂಗ್ ಮಾಡುತ್ತಾರೆ. ತಿಂಡಿಗಾಡಿಗಳು ಫುಟ್‌ಪಾತ್ ಅತಿಕ್ರಮಿಸಿದ್ದು, ಸಾರ್ವಜನಿಕರ ಓಡಾಡವೇ ದುಸ್ತರವಾಗಿತ್ತು. ಮೇಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಮತ್ತು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಇಂದು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಂದು ಫುಟ್‌ಪಾತ್‌ನಲ್ಲಿದ್ದ ತಿಂಡಿಗಾಡಿಗಳನ್ನು ತೆರವುಗೊಳಿಸಿ, ತಾತ್ಕಾಲಿಕವಾಗಿ ಆರ್‌ಟಿಓ ಕಛೇರಿ ಪಕ್ಕದಲ್ಲೇ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments