ಶಿವಮೊಗ್ಗ,ಏ.8 : ಡಾ. ಹುಲಿಕಲ್ ನಟರಾಜ್‌ರವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ 2026 ನೇ ಸಾಲಿನ ಕಾಯಕಯೋಗಿ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಡಿ. ರವಿಕುಮಾರ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್‌ನ್ನು ರಾಜ್ಯಾದ್ಯಂತ ಸಂಘಟಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪರಿಷತ್‌ನಿಂದ ಕಾಯಕಯೋಗಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾಯಕಯೋಗಿ ಪ್ರಶಸ್ತಿಯನ್ನು ಈಗಾಗಲೇ ಜಿಲ್ಲೆಯ ಕಾಗೋಡು ತಿಮ್ಮಪ್ಪ, ಬಿ.ಡಿ. ಭೂಕಾಂತ್ ಇನ್ನಿತರರು ಪಡೆದಿದ್ದಾರೆ. ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಅರ್ಹರು ಇರುವ ವ್ಯಕ್ತಿಗಳು ತಮ್ಮ ಮಾಹಿತಿಯೊಂದಿಗೆ ಏ.11 ರೊಳಗೆ ಫೋಟೋ, ಖಾಯಂ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ವಿವರಗಳನ್ನು ಅರ್ಜಿ ಸಲ್ಲಿಸಬೇಕು ಎಂದರು.
ಪ್ರತೀ ವರ್ಷದಂತೆ ಈ ವರ್ಷವೂ ಸಹ ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವು ಮೇ1ರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಅಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಸೂಲಿಬೆಲೆಯಲ್ಲಿ ನಡೆಯಲಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ರವಿಕುಮಾರ್ ಬಿ.ಡಿ., ಮೊ.ನಂ. 9482449464, ಸಿ.ಮೂರ್ತಿ, ಮೊ.ನಂ. 7975750118, ವಿರೂಪಾಕ್ಷಪ್ಪ ಎಸ್.ಪಿ. 9945765065 ಗೆ ಸಂಪರ್ಕಿಸಬಹುದುಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಮೂರ್ತಿ, ಜಿಲ್ಲಾ ಸಂಚಾಲಕ ವಿರೂಪಾಕ್ಷಪ್ಪ ಎಸ್.ಪಿ., ಪ್ರಮುಖರಾದ ಎ.ಎಸ್.ನಾರಾಯಣ್, ಎಸ್.ಡಿ.ಮೋಹನ್ ಕುಮಾರ್, ವರಲಕ್ಷ್ಮಿ, ಸತೀಶ್, ಶಿವಮೂರ್ತಿ, ರಮೇಶ್ ಇನ್ನಿತರರು ಉಪಸ್ಥಿತರಿದ್ದರು.
