Homeಜಿಲ್ಲೆಏ.13 ರಂದು ಉಂಬ್ಳೇಬೈಲು ಮೋಹನ್‌ರವರ ಬದುಕಿನ ಪಯಣ ಪುಸ್ತಕ ಬಿಡುಗಡೆ

ಏ.13 ರಂದು ಉಂಬ್ಳೇಬೈಲು ಮೋಹನ್‌ರವರ ಬದುಕಿನ ಪಯಣ ಪುಸ್ತಕ ಬಿಡುಗಡೆ

Spread the love

ಶಿವಮೊಗ್ಗ,.8:  ಉಂಬ್ಳೇಬೈಲು ಮೋಹನ್‌ರವರ ಅಭಿನಂದನಾ ಸಮಿತಿ ಹಾಗೂ ಅಸ್ಮಿತೆ ಫೌಂಡೇಶನ್, ಕರ್ನಾಟಕ ವತಿಯಿಂದ .13 ರ ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಉಂಬ್ಳೇಬೈಲು ಮೋಹನ್‌ರವರ ಬದುಕಿನ ಪಯಣ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿ..ರಮೇಶ್ ಹೆಗಡೆ ತಿಳಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಂಬ್ಳೇಬೈಲು ಮೋಹನ್‌ರವರು ಸಹಕಾರ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಇವರ ಸಾಧನೆಗಾಗಿ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಇವರ ಬದುಕಿನ ಪಯಣದ ಬಗ್ಗೆ ಅಭಿನಂದನಾ ಪುಸ್ತಕವನ್ನು ಹೊರತಂದಿದ್ದು, ಇದನ್ನು ಅಂದು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದು, ವಿಧಾನಪರಿಷತ್‌ನ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್  ಪುಸ್ತಕಗಳನ್ನು ಬಿಡುಗಡೆ ಮಾಡುವರು. ಮಾಜಿ ಹಣಕಾಸು, ಗೃಹ, ಸಾರಿಗೆ ಸಚಿವಡಾ. ಪಿ.ಜಿ.ಆರ್. ಸಿಂಧ್ಯಾ ಆಶಯ ನುಡಿಗಳನ್ನಾಡುವರು. ಇದೇ ಸಂದರ್ಭದಲ್ಲಿ ಉಂಬ್ಳೇಬೈಲು ಮೋಹನ್ ಅವರನ್ನು ಅಭಿನಂದಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಎಂಎಡಿಬಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಕರ್, ಮಾಜಿ ಶಾಸಕ ಮಹಿಮಾ ಪಟೇಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯ ದೇವ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ರಾಜ್ಯ ತೋಟಗಾರಿಕೆ ಮಹಾ ಮಂಡಲದ ಮಾಜಿ ಅಧ್ಯಕ್ಷ ಬಿ.ಡಿ.ಭೂಕಾಂತ್, ಉದ್ಯಮಿ ಕಡಿದಾಳ್ ಗೋಪಾಲ್, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಜೆ.ಎಲ್. ಪದ್ಮನಾಭ್, ಅಸ್ಮಿತೆ ಫೌಂಡೇಷನ್‌ನ ನಿರ್ದೇಶಕ ಡಾ. ಸಚಿನ್ಬಿ.ಎಸ್.,  ಸುವ್ವಿ ಪ್ರಕಾಶನದ ಸುನೀಲ್ ಕುಮಾರ್ ಬಿ.ಎನ್. ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸುಧಿಗೌಡ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ನಾಯ್ಕ್, ಉಮೇಶ್, ಡಿ.ಕಾಂತರಾಜ್, ಸುಧಾಕರ್, ಎಂ.ಹೆಚ್. ಕಾಳರಾಜು, ಹೆಚ್.ಎಂ.ಸಂಗಯ್ಯ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments