Homeಜಿಲ್ಲೆ40 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆ

40 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆ

Spread the love

ಶಿವಮೊಗ್ಗ, ಏ.11: ತಲೆ ಮರೆಸಿಕೊಂಡಿದ್ದ ಬೆಂಗಳೂರಿನ ಆರೋಪಿಯನ್ನು ಭದ್ರಾವತಿಯ ಪೊಲೀಸ್ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಪೇಪರ್ ಟೌನ್ ಠಾಣಾ ಗುನ್ನೆ ನಂ 05/1991 ಕಲಂ 447, 324 504, 506 ಸಹಿತ 34  ಐಪಿಸಿ ಪ್ರಕರಣದಲ್ಲಿನ ಆರೋಪಿಯಾದ ಬೆಂಗಳೂರಿನ ಪೀಣ್ಯದ ಮುಡ್ಲಾಗಿರಿ(65) ಕಳೆದ ಸುಮಾರು 40 ವರ್ಷಗಳಿಂದ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು.

ಗಮನಿಸಿ:ಮನುವಾದಿಗಳಿಗೆ ಸಮ ಸಮಾಜ ಬೇಕಿಲ್ಲ: ಸಿದ್ದರಾಮಯ್ಯ

ವಿಚಾರಣೆಗೆ ಸಂಬಂಧಿಸಿದಂತೆ ಭದ್ರಾವತಿಯ  PCJ & JMFC ನ್ಯಾಯಾಲಯವು  CC No 6264/1994 ರಲ್ಲಿ ಆರೋಪಿ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿರುತ್ತದೆ. ಪೇಪರ್ ಟೌನ್ ಠಾಣೆಯ ಪಿ.ಎಸ್. ಕುಮಾರ್ ರವರ ನೇತೃತ್ವದಲ್ಲಿ ASI-ಕುಮಾರ್, HC-ಯಲ್ಲಪ್ಪ, ಜಿಲ್ಲಾ ಪೊಲೀಸ್ ಕಛೇರಿಯ ANC ವಿಭಾಗದ HC-ಇಂದ್ರೇಶ್  & HC-ಗುರುರಾಜ್ ಇವರುಗಳು ಸದರಿ ಆಸಾಮಿಯನ್ನು ಪತ್ತೆ ಮಾಡಿದ್ದು, ದಿನಾಂಕ: 10/4/26ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments