ಶಿವಮೊಗ್ಗ, ಏ.14 :ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯಗಳನ್ನು ಸೋಲಲು ಬಿಡಬಾರದು ,ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳ ಪಾತ್ರ ಬಹಳಿಷ್ಟಿದೆ ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರಡಿ ಮಲ್ಲಯ್ಯ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಪರಿಷತ್,ಎನ್ ಎಸ್ ಎಸ್, ಎನ್ ಸಿಸಿ,ರೆಡ್ ಕ್ರಾಸ್ ಸಂಸ್ಥೆ, ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಗಮನಿಸಿ:ಅಂಬೇಡ್ಕರ್ ಮಾತ್ರ ಜಗತ್ತಿಗೆ ತಾಯ್ತನ ಕೊಟ್ಟು ಕಾಪಾಡಲು ಸಾಧ್ಯ: ನಾಗೇಶ್ ಬಿದರುಗೋಡು
ಪ್ರಭುತ್ವ ಸೇರಿದಂತೆ ಶಿಕ್ಷಣ ಸಂಸ್ಥೆಗಳು ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಆಶಯಗಳನ್ನುಕರಗಿಸಲು ಹೊರಟಿರುವುದು ಅಪಾಯದ ಸಂಕೇತವಾಗಿದೆ ಅಥವಾ ತಪ್ಪಾಗಿ ದಾಟಿಸುವುದು ಕೂಡನಡೆಯುತ್ತಿದೆ ಇದು ನಿಲ್ಲಬೇಕು ಅವರ ತತ್ವ ಆದರ್ಶ ವಿಚಾರಧಾರೆ ಎಲ್ಲವೂ ವರ್ತಮಾನಗೊಳ್ಳಬೇಕುಎಂದರು ಜಾತಿ ವ್ಯವಸ್ಥೆಯನ್ನು ನಾಶಗೊಳಿಸಲು ಹೊರಟಾಗ ಭಾರತದಲ್ಲಿ ಅವರಿಗೆ ಉಳ್ಳವರು ಸಹಕರಿಸಲಿಲ್ಲ ಆಗ ಬ್ರಾಹ್ಮಣರುದ್ದೆ ವೇಲುಗೈಯಾಗಿ ಮೇಲುಗೈಯಾಗಿತ್ತು ಆದರೆ ಅನೇಕ ವಿದೇಶಿ ಜ್ಞಾನಿಗಳು ಅವರ ಸಹಾಯಕ್ಕೆ ಬಂದರು ಎಂದು ವಿವರಿಸಿದವರು ಇಂದು ಅನಿವಾರ್ಯಕ್ಕೆ ಕಾಟಾಚಾರಕ್ಕೆ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು ಒಳಮೀಸಲಾತಿ ಕೂಡ ಅವರನ್ನು ಎಳೆದು ತಂದು ಬಿಟ್ಟಿದೆ ವಲಯ ಮಾದಿಗರ ನಡುವೆಯೇ ಪೈಪೋಟಿ ತಂದಿದ್ದಾರೆ.
ನನ್ನ ಜನರಿಗೆ ನ್ಯಾಯ ಕೊಡಿಸಬೇಕು ಎಂಬ ಅಂಬೇಡ್ಕರ್ ಅವರ ಆಶಯ ಮಾತ್ರ ಈಗ ವ್ಯರ್ಥವಾಗುತ್ತಿರುವುದು ಎದ್ದು ಕಾಣುತ್ತಿದೆ ಎಂದವರು ನಮ್ಮ ಜನರೇ ಇದನ್ನ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು ಇಂದು ಶಿಕ್ಷಣ ಸಂಸ್ಥೆಗಳು ಕೂಡ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಸುವಲ್ಲಿ ವಿಫಲವಾಗಿವೆ ಕಾರಣ ಮೇಷುಗಳಿಗೆ ಅಧ್ಯಯನದ ಕೊರತೆ ಇದೆ ಅಧ್ಯಯನ ಅಧ್ಯಾಪನ ಸಂಶೋಧ ಸಂಶೋಧನೆ ಅಂಬೇಡ್ಕರ್ ಅವರ ಆಶಯವಾಗಿತ್ತು ಆದರೆ ಹಲವು ಮೇಷ್ಟ್ರುಗಳಿಗೆ ಇದುಗೊತ್ತೇ ಇಲ್ಲ ಇದಲ್ಲ ಮೇಷ್ಟ್ರುಗಳು ನಾಚಿಕೆ ಪಡುವಂತ ವಿಷಯವಾಗಿದೆ ಹಾಗಾಗಿ ಮೇಷಗಳಿಗೆ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಅಂಬೇಡ್ಕರ್ ಅವರನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ತಿಳಿಸಬೇಕಾಗಿದೆ ಎಂದರು.
ಪ್ರಾಂಶುಪಾಲ ಡಾ .ಸಿರಾಜ್ ಅಹಮದ್ ಮಾತನಾಡಿ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ, ಸಾಮಾಜಿಕ ನ್ಯಾಯ, ಮತ್ತು ಶೋಷಣೆ ಮುಕ್ತ ಸಮಾಜದ ಸಂಕೇತವಾಗಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿಚಾರಧಾರೆಗಳು ದಮನಿತರಿಗೆ ಆತ್ಮಗೌರವ ಹಾಗೂ ಶಕ್ತಿಯನ್ನು ಒದಗಿಸಿವೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯುವ ಅವರ ಮೂಲಮಂತ್ರವು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಕೆ ಎನ್ ಮಂಜುನಾಥ್ ಮಾತಾನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಅಡಿಪಾಯದೊಂದಿಗೆ ಭಾರತದ ಸಂವಿಧಾನವನ್ನು ರಚಿಸಿ, ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಖಾತರಿಪಡಿಸಿದರು ಎಂದರು.
ಪ್ರಾಸ್ತಾವಿಕ ವಾಗಿ ಮಾತಾನಾಡಿದ ಡಾ.ಬಿ ಎಮ್ ಚಂದ್ರಶೇಖರ್, ಶೋಷಣೆಯಿಂದ ಮುಕ್ತಿ ಪಡೆಯಲು ಶಿಕ್ಷಣವೇ ಪ್ರಬಲ ಅಸ್ತ್ರ, ಜಾತೀಯತೆ, ಅಸ್ಪೃಶ್ಯತೆ ನಿರ್ಮೂಲನೆ ಮತ್ತು ದಲಿತರ, ಮಹಿಳೆಯರ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದವರು ಅಂಬೇಡ್ಕರ್ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಡಾ.ಮೇಟಿ ಮಲ್ಲಿಕಾರ್ಜುನ್, ಡಾ ಶಂಭುಲಿಂಗ ಮೂರ್ತಿ.ಡಾ ಮಹದೇವಸ್ವಾಮಿ.ಡಾ.ಪ್ರಸನ್ನ ಕುಮಾರ್, ಡಾ ರೇಣುಕ,ಶೃಂಗಶ್ರೀ, ರಾಧ, ಡಾ. ರಮ್ಯ, ಡಾ.ಶೈಲಜ,ಪ್ರಿಯಂಕ, ಶ್ವೇತಶ್ರೀ, ಡಾ.ಶಬಾನ, ಡಾ.ಗಿರಿಜಮ್ಮ, ಸಂತೋಷ್,ಕುಮಾರಸ್ವಾಮಿ, ಹರೀಶ್,ಶಶಿಕುಮಾರ, ಸೇರಿದಂತೆ ಹಲವರಿದ್ದರು.
