Homeಜಿಲ್ಲೆಬಾಳೆಬರೆ ಘಾಟ್ : ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕ

ಬಾಳೆಬರೆ ಘಾಟ್ : ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕ

Spread the love

ಶಿವಮೊಗ್ಗ .15: ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಹಿಂದೆ ವಾಹನಸಂಚಾರವನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ (ಅದಲುಬದಲು) ಮೂಲಕ ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ತಾತ್ಕಾಲಿಕ ಅನುಮತಿ ನೀಡಿ ಆದೇಶಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದ್ದಾರೆ.

ಗಮನಿಸಿ: ರೈಲ್ವೆ ಹಳಿಯ ಮೇಲೆ ಯುವತಿ ಶವ ಪತ್ತೆ

ಸಂಚಾರ ನಿಯಮಗಳು ಮತ್ತು ಷರತ್ತುಗಳು :

ವ್ಯವಸ್ಥೆಯು ಕೇವಲ ಸಾರ್ವಜನಿಕ ಸಂಪರ್ಕ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇವಲ 35 ಆಸನವುಳ್ಳ (432 ಸೆಂ.ಮೀ ಚಕ್ರತಳ ಮೀರದ) ಬಸ್ಸುಗಳಿಗೆ ಮಾತ್ರ ತಿರುಗಲು ಅವಕಾಶವಿರುತ್ತದೆ.

ವಾಹನ ಬದಲಾವಣೆ ಮಾಡಲು ಪ್ರಯಾಣಿಕರು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕಾಗುತ್ತದೆ. ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢರಾಗಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.

ಭೂಕುಸಿತ ಸಂಭವಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಹತ್ತಿರವಿರುವುದರಿಂದ ಮೆಟ್ಟಿಲುಗಳಿಗೆ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಮತ್ತು ದುರಸ್ತಿ ಮಾಡಲು ಸೂಚಿಸಲಾಗಿದೆ.

ಸ್ಥಳದಲ್ಲಿ ತುರ್ತು ಉಪಚಾರಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ.

ಮಾರ್ಗ ಬದಲಾವಣೆ ವಿವರ: 

ಶಿವಮೊಗ್ಗಹೊಸನಗರನಗರಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ವಾಹನಗಳು ಚಂಡಿಕಾದೇವಸ್ಥಾನದವರೆಗೆ ಸಂಚರಿಸಬಹುದಾಗಿದ್ದು, ಅಲ್ಲಿ ಸೂಕ್ಷ್ಮ ಮತ್ತು ಜಾಗರೂಕತೆಯಿಂದ ತಿರುಗಿಸಲುಅವಕಾಶವಿರುತ್ತದೆ.

ಚಂಡಿಕ ದೇವಸ್ಥಾನದ ಒಂದನೇ ತಿರುವಿನಲ್ಲಿ ಭೂ ಕುಸಿತವಾದ ಜಾಗದ ಕೆಳಗಿನ ಮೊದಲನೇ ತಿರುವಿನಲ್ಲಿಹಾಲಿ ಇರುವ ಕಾಂಕ್ರಿಟ್ ರಸ್ತೆಯ ಕ್ಯಾರೇಜ್ವೇ-24 ಅಡಿ ಇದ್ದು ಅದಕ್ಕೆ ಹೊಂದಿಕೊಡಿರುವ ರಸ್ತೆಯಗ್ರಾವೆಲ್ ಶೋಲ್ಡರ್‌ನ್ನು ಸ್ಥಳೀಯ ಸಾರ್ವಜನಿಕರೇ ಕಾಂಕ್ರಿಟ್ ರಸ್ತೆಗೆ ಸಮನಾಗಿ 18 ಅಡಿ ಅಗಲಕ್ಕೆಅಗಲೀಕರಣ ಮಾಡಿ ಎತ್ತರಿಸಿ ಮಟ್ಟ ಮಾಡಿರುವುದು ಕಂಡುಬದಿದ್ದು, ವಾಹನಗಳನ್ನು ಸೂಕ್ಷ್ಮ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.

ಪ್ರಯಾಣಿಕರು ವಾಹನ ಬದಲಾವಣೆ ಮಾಡಲು ಕಾಲ್ನಡಿಗೆಯಲ್ಲಿ ಓಡಾಡಲು ಪ್ರಸ್ತಾಪಿಸಿರುವ ಮಟ್ಟಿಲುಗಳುಕಿರಿದಾಗಿದ್ದು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಗೊಂದಲವಿಲ್ಲದೇ ದೈಹಿಕವಾಗಿ ಸದೃಢವಾಗಿರುವಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಬಹುದಾಗಿರುತ್ತದೆ. ಆದೇಶವು ಏಪ್ರಿಲ್ 14 ರಿಂದಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments