Homeಜಿಲ್ಲೆಕೊಲೆ ಬೆದರಿಕೆ- ಜಾತಿ ನಿಂದನೆ: 5 ಆರೋಪಿಗೆ ಶಿಕ್ಷೆ

ಕೊಲೆ ಬೆದರಿಕೆ- ಜಾತಿ ನಿಂದನೆ: 5 ಆರೋಪಿಗೆ ಶಿಕ್ಷೆ

Spread the love

ಶಿವಮೊಗ್ಗ, ಏ.16: ಮನೆಗೆ ಅಕ್ರಮ ಪ್ರವೇಶ ಮಾಡಿ ಅವರಿಗೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ ಕೊಲೆಬೆದರಿಕೆ ಹಾಕಿದ ಆರೋಪಿಗಳಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾಸ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

2023 ಜೂನ್ 6 ರಂದು ರಾತ್ರಿ 11.45 ಗಂಟೆಗೆ ಆರೋಪಿತರಾದ ಭದ್ರಾವತಿಯ ಅಂತರಗಂಗೆ ಗ್ರಾಮ್ನವೀನ(25), ಮನು (31 ), ಸಂತೋಷ ಕೆ (31) , ಮಂಜುನಾಥ ವಿ (33) ಹಾಗೂ ಅಭಿಷೇಕ್ (24)  ಇವರುಗಳು ಅದೇ ಗ್ರಾಮದ ರಾಧ (35) ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರಿಗೆ ಹಲ್ಲೆ ಮಾಡಿದ್ದು, ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ.

ಗಮನಿಸಿ: ದೇವನೂರು ಮಹಾದೇವ ಅವರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ


ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0130/2023 ಕಲಂ: 448, 504, 354, 323, 427, 506 R/w  34  IPC ಹಾಗೂ ಕಲಂ 3(1) (r) (s),3(2)(va)  The SC & ST (Prevention of Atrocities) Amendment Act 2015 ಅಡಿಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿ  ಭದ್ರಾವತಿಯ ಎಎಸ್ ಪಿ ಹಾಗೂ ಚಿಕ್ಕಮಗಳೂರು ಎಸ್ ಪಿ ಜಿತೇಂದ್ರಕುಮಾರ ಅವರು ಪ್ರಕರಣದ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕಿ ರತ್ನಮ್ಮ. ಪಿ ವಾದ ಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿತರಿಗೆ  ತಲಾ 02  ವರ್ಷ ಕಾರಾವಾಸ ಶಿಕ್ಷೆ ಮತ್ತು ಒಟ್ಟು  ರೂ. 1,00,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments