ಶಿವಮೊಗ್ಗ, ಏ.21: ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಜೆಪಿ ಅವರು ಅವಹೇಳನ ಮಾಡುತ್ತಿರುವುದು ಖಂಡನೀಯವಾಗಿದ್ದು, ಚಿಂತನಗಂಗಾದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಬಿಜೆಪಿಗರಿಂದ ಇದರ ಹೊರತಾಗಿ ಬೇರೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಸೈದ್ದಾಂತಿಕವಾಗಿ ಬಿಜೆಪಿ, ಆರ್‌ಎಸ್‌ಎಸ್ ಅವರು ವಿಷಜಂತು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಇದು ಭಾಗಶಃ ನೂರಕ್ಕೂ ನೂರು ಸತ್ಯ.
ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ಸಿದ್ದಾಂತದ ಬಗ್ಗೆ ಟೀಕೆ ಮಾಡಿದ್ದಾರೆ. ಸೈದ್ದಾಂತಿಕ ದೃಷ್ಟಿಕೋನದಿಂದ ಸರಿಯಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಅವರು ಖರ್ಗೆ ಬಗ್ಗೆ ಅವಹೇಳನ ಮಾತನಾಡುತ್ತಿದ್ದಾರೆ. ಖರ್ಗೆ ಅವರು ಶಾಸಕರಾಗಿ, ಸಂಸದರಾಗಿ, ವಿರೋಧ ಪಕ್ಷದ ನಾಯಕರಾಗಿ ರಾಜಕೀಯದಲ್ಲಿ ಅನೇಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಅದನ್ನು ಗೌರವಿಸದೆ ಮಾತನಾಡುತ್ತಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ದಲಿತರಾಗಿ ಹುಟ್ಟಿ ಬದುಕಿನಲ್ಲಿ, ರಾಜಕೀಯದಲ್ಲಿ ಅನೇಕ ಹೋರಾಟ ಮಾಡಿಕೊಂಡು ಉನ್ನತ ಸ್ಥಾನಕ್ಕೆ ಬಂದಿದ್ದಾರೆ. ಇಂತಹವರು ಪ್ರಶ್ನೆಸಿರುವುದಕ್ಕೆ ಬಿಜೆಪಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗಲೂ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿರುವುದು ಕಾಣುತ್ತಿದೆ.
ಗಮನಿಸಿ:ಒಳಮೀಸಲಾತಿ ಇಲ್ಲದೆ ಒಂದು ಹುದ್ದೆಯನ್ನು ನೇಮಕ ಮಾಡಲು ಬಿಡುವುದಿಲ್ಲ: ಅಂಜನೇಯ
ಚಿಂತನಗಂಗಾದಲ್ಲಿ ಪುಟ 36 ಮತ್ತು 37 ರಲ್ಲಿ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಉಚ್ಛ ಸ್ಥಾನದಿಂದ ಅಂದರೆ ತಲೆಯಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರೀಯ, ತೊಡಯಿಂದ ವೈಶ್ಯ ಹುಟ್ಟತ್ತಾನೆ ಎಂದು ಹೇಳುತ್ತದೆ. ಕೇಳಸ್ತರದಲ್ಲಿರುವ ಪಾದದಿಂದ ದಲಿತರು ಹುಟ್ಟತ್ತಾರೆ ಎಂದು ಹೇಳುತ್ತದೆ. ಈ ನಿಟ್ಟಿನಲ್ಲಿ ಸಾವಿರಾರುವ ವರ್ಷಗಳಿಂದ ಮನುವಾದಿಗಳಿಂದ ದಲಿತರು ತುಳಿತಕ್ಕೆ ಒಳಗಾಗುತ್ತಿದ್ದಾರೆ. ಆದರೂ ಕೂಡ ಈ ವರ್ಗದ ಜನರು ತಾಳ್ಮೆ ಕಳೆದುಕೊಂಡಿಲ್ಲ. ಈ ವರ್ಗಕ್ಕೆ ಇರುವ ತಾಳ್ಮೆ ಪ್ರಪಂಚದ ಯಾವ ವರ್ಗಕ್ಕೂ ಇಲ್ಲ. ಖರ್ಗೆ ಅವರ ವಿಚಾರಕ್ರಾಂತಿ ಸರಿ ಇದೆ. ಇಂತಹ ಸಮುದಾಯ ನಾಯಕನ್ನು ಅವಹೇಳನ ಮಾಡುತ್ತಿರುವ ಬಿಜೆಪಿ ಮುಖಂಡರ ನಡೆಯನ್ನು ಖಂಡಿಸುತ್ತೇವೆ ಎಂದರು.
ಮೀಸಲಾತಿ ಕುರಿತು ಮಾತನಾಡುವ ನಾರಾಯಣ ಸ್ವಾಮಿ ಅವರು ಮೀಸಲಾತಿ ವಿಚಾರವಾಗಿ ಮಂಡಲ್ ಕಮಿಷ್ ನನ್ನು ಎಬಿವಿಪಿ ವಿರೋಧ ಮಾಡಿದಾಗ ಎಲ್ಲಿ ಹೋಗಿದರು. ಮೀಸಲಾತಿ ಇಲ್ಲದೆ ಇದ್ದಿದ್ದರೆ ನಾರಾಯಣ ಸ್ವಾಮಿ ಸದನದ ಒಳಗೆ ಹೊಗುತ್ತಿರಲ್ಲಿ ಎಂದು ಟೀಕಿಸಿದರು.
