Homeಜಿಲ್ಲೆಬಿಜೆಪಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಲೆ ಬಂದಿದೆ: ಕಿಮ್ಮನೆ ರತ್ನಾಕರ್

ಬಿಜೆಪಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಲೆ ಬಂದಿದೆ: ಕಿಮ್ಮನೆ ರತ್ನಾಕರ್

Spread the love

ಶಿವಮೊಗ್ಗ, ಏ.21: ಬಿಜೆಪಿ ಮಹಿಳಾ ಮೀಸಲಾತಿಯ ಸೋಗಿನಲ್ಲಿ  ಕ್ಷೇತ್ರ ಮರು ವಿಂಗಡಣೆ ಮಾಡುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಲು ಮುಂದಾಗಿದ್ದು, ಮಹಿಳೆಯರಿಗೆ ಇವರು ಇಂತಹ ಅನ್ಯಾಯ ಮಾಡುತ್ತಲೆ ಬಂದಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಷೇತ್ರ ಪುನರ್ ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಒಂದೇ ಮತದಲ್ಲಿ ನಿರ್ಣಯಿಸಿ ಜಾರಿಗೆ ತರಲು ಮುಂದಾಗಿದ್ದರು. ಇದು ಮೂರ್ಖತನ ಪರಮಾವಧಿ ಆದರೂ ಬಿಜೆಪಿಗರು ಬುದ್ದಿವಂತರಂತೆ ನಡೆದುಕೊಳ್ಳುತ್ತಿದ್ದಾರೆ.

ಈ ಕುರಿತಂತೆ ಸಂಸದರು ಕಾಂಗ್ರೆಸ್ ಮಹಿಳೆಯರಿಗೆ ಅನ್ಯಾಯ ಮಾಡಿದೆ ಎನ್ನುತ್ತಿದ್ದಾರೆ. ಹಾಗಾಗಿ ಎರಡು ಮಸೂದೆಗಳಿಗೆ ಒಂದೇ ಮತವಂತೆ ಹೇಗೆ ವಿಭಾಗವನ್ನು ಮಾಡುತ್ತಾರೆಂದು ಅವರು ತಿಳಿಸಬೇಕು ಎಂದರು.

ಗಮನಿಸಿ:ವಿಶೇಷ ಪೊಲೀಸ್ ಠಾಣೆಗಳು ಸಂಪರ್ಕಕ್ಕೆ ಸಿಗುತ್ತಿಲ್ಲ !! ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯ ಸರ್ಕಾರದ ಆಶಯ ಮಣ್ಣುಪಾಲಾಯಿತಾ?!

ಮಹಿಳಾ ಮೀಸಲಾತಿಯನ್ನು ಪ್ರಪ್ರಥಮವಾಗಿ ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ. ನಾವು ಯಾವಾಗಲು ಮಹಿಳೆಯ ಪರವಾಗಿ ಇದ್ದೇವೆ. ಆದರೆ ಈಗ ಬಿಜೆಪಿ ಅದನ್ನು ನಾವೇ ಸಾಧಿಸಲು ಹೊರಟ್ಟಿದ್ದೇವೆ ಎನ್ನುತ್ತಿದ್ದಾರೆ. ಅಷ್ಟು ಮಹಿಳೆಯ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರಲು ಮತದಾನ ಮಾಡಬೇಕಿತ್ತು. ಇಲ್ಲದಿದ್ದೆ ಚುನಾವಣೆ ನಂತರ ಚರ್ಚಿಸಬಹುದಿತ್ತು. ಆದರೆ ಅಂತಹ ಯಾವುದೇ ಯೋಚನೆ ಮಾಡದೆ ದುರುದ್ದೇಶದಿಂದ ಜಾರಿ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಯವರ ಈ ಆಲೋಚನೆ ಹಿಂದೆ ಗೋಲ್ವಲ್ಕರ್ ಅವರ ಚಿಂತನಗಂಗಾದ ಉದ್ದೇಶ ಅಡಗಿದೆ ಎಂದು ಕಿಡಿಕಾರಿದರು.

ಇಲ್ಲಿನ ಸಂಸದರು, ಶಾಸಕರು ಕೂಡ ಚಿಂತನಗಂಗಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಹಿಂದು ಸಮಾಜ ವಿರುದ್ದವಾಗಿ ಇದ್ದಾರೆ. ಚಿಂತನ ಗಂಗಾ ದಲಿತರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳಿದೆ. ಒಕ್ಕೂಟ ವ್ಯವಸ್ಥೆ ವಿರುದ್ದವಾಗಿದೆ. ಇದನ್ನು ಬಿಜೆಪಿ ಒಪ್ಪುತ್ತಾರಾ. 1962 ರಲ್ಲಿ ಜನ ಸಂಘ ಮೀಸಲಾತಿಯನ್ನು ವಿರೋಧಿಸಿದ್ದರು. ಈ ಬಗ್ಗೆ ಚರ್ಚೆ ಮಾಡಲು ಶಾಸಕರು, ಸಂಸದು ಸಿದ್ದವಾಗಿದ್ದಾರ ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments