ಚಿತ್ರದುರ್ಗ, ಏ.21: ಒಳಮೀಸಲಾತಿ ಜಾರಿಗೊಳ್ಳದೆ ಯಾವುದೇ ಸರ್ಕಾರಿ ಹುದ್ದೆಗಳನ್ನು , ಬಡ್ತಿ ಮೀಸಲಾತಿಯನ್ನು ನಡೆಸಬಾರದು ಎಂದು ಮಾಜಿ ಸಚಿವ ಹೆಚ್. ಆಂಜನೇಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು , ಒಳಮೀಸಲಾತಿ ಜಾರಿಗೊಳ್ಳದೆ ಯಾವ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡುವಂತಿಲ್ಲ ಎಂದು ಹಿಂದಿನ ಸಭೆಗಳಲ್ಲಿ ತೀರ‍್ಮಾನ ಆಗಿದೆ. ಆದರೆ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ 900 ಹುದ್ದೆಗಳನ್ನು ನೇಮಕ ಮಾಡಲು ಪ್ರಕ್ರಿಯೆ ನಡೆದಿದೆ. ಇದು ಅಧಿಕಾರಿಗಳ ಮಾಡಿದ ತಪ್ಪು ಎಂದು ಕಾಣುತ್ತದೆ. ಈ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.
ಗಮನಿಸಿ:ಸಾವಿರಾರು ವರ್ಷಗಳಿಂದ ಮಹಿಳೆಯರಿಗೆ ಬಿಜೆಪಿ ಅನ್ಯಾಯ ಮಾಡುತ್ತಲೆ ಬಂದಿದೆ: ಕಿಮ್ಮನೆ ರತ್ನಾಕರ್
ಇದು ಸರಿಯಲ್ಲ, ಈ ಮೊದಲು 56434 ಹುದ್ದೆಗಳ ನೇಮಕಾತಿಯನ್ನು ಒಳಮೀಸಲಾತಿ ಅಳವಡಿಸಿ ನೇಮಕ ಮಾಡಿಕೊಳ್ಳಲು ತೀರ‍್ಮಾನಿಸಲಾಗಿದೆ . ಅದರಂತೆ ಕೃಷಿ ಇಲಾಖೆಯ ನೇಮಕಾತಿಗಳನ್ನು ಮಾಡಬೇಕು . ಯಾವುದೇ ಕಾರಣಕ್ಕೂ ಒಳಮೀಸಲಾತಿಇಲ್ಲದೆ ಒಂದು ಹುದ್ದೆಯನ್ನು ನೇಮಕ ಮಾಡಲು ಬಿಡುವುದಿಲ್ಲ. ಕೃಷಿ ಇಲಾಖೆಯಲ್ಲಿನ ನೇಮಕಾತಿ ತಡೆ ಹಿಡಿಯುವ ಬಗ್ಗೆ ಸಚಿವರಾದ ಕೆ, ಹೆಚ್ ಮುನಿಯಪ್ಪ, ಆರ್ ಬಿ ತಿಮ್ಮಾಪೂರ್ ಸೇರಿದಂತೆ ಮಾದಿಗ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು, ಒಳಮೀಸಲಾತಿ ಜಾರಿಯಾಗುವವರೆಗೂ ಅದನ್ನು ತಡೆ ಹಿಡಿಯುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
35 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟಗಳು ನಡೆದಿವೆ.ಸುಪ್ರಿಂ ಕೋರ್ಟು ಒಳಮೀಸಲಾತಿಯನ್ನು ಎತ್ತಿ ಹಿಡಿದು ಒಂದು ವರ್ಷವಾದರೂ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ಬದ್ದವಾಗಿರುವುದಾಗಿ ಭರವಸೆನೀಡಿದ್ದಾರೆ. ಅವರು ಮಾತಿಗೆ ತಪ್ಪುವುದಿಲ್ಲ. ಏ.24 ರಂದು ಕರೆದಿರುವ ಸಚಿವರ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.
