Homeಜಿಲ್ಲೆಮಂಗನ ಕಾಯಿಲೆಯ ಮುಂಜಾಗೃತೆ ಕ್ರಮಕ್ಕೆ ಸಮನ್ವಯ ಸಮಿತಿ ರಚನೆ: ಮಧು

ಮಂಗನ ಕಾಯಿಲೆಯ ಮುಂಜಾಗೃತೆ ಕ್ರಮಕ್ಕೆ ಸಮನ್ವಯ ಸಮಿತಿ ರಚನೆ: ಮಧು

Spread the love

ಶಿವಮೊಗ್ಗ , ಏ.22: ಜಿಲ್ಲೆಯಲ್ಲಿ ಕೆಎಫ್‌ಡಿ(ಮಂಗನ ಖಾಯಿಲೆ)ಗಾಗಿ ನಾಲ್ಕು ಜನರು ಬಲಿಯಾಗಿದ್ದು, ಈ ಕುರಿತು ಮುಂಜಾಗೃತೆ ಕೈಗೊಳ್ಳುವಂತೆ ತಾಲ್ಲೂಕು ಗಳಲ್ಲಿಯೂ ತಹಶೀಲ್ದಾರ್ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಫ್ ಡಿ ಯಿಂದ ಹೊಸನಗರ-ಸಾಗರದಲ್ಲಿ ತಲಾ ಒಂದು, ತೀರ್ಥಹಳ್ಳಿಯಲ್ಲಿ ಇಬ್ಬರು ಸಾವು ಕಂಡಿದ್ದಾರೆ. ಈಗಾಗಲೇ ಆರೋಗ್ಯ ಸಚಿವರು, ಜಿಲ್ಲೆಗೆ ಭೇಟಿ ನೀಡಿ ಕೆಎಫ್‌ಡಿ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಭೆ ಮಾಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಗಮನಿಸಿ:ಕಾಡುಗೊಲ್ಲ ಮಹಿಳೆಯರ ಸಮಗ್ರ ಅಧ್ಯಯನ: ಮಿನಿಮೋಳ್ ಅವರಿಗೆ PhD ಪದವಿ ಗೌರವ

ಮಂಗನ ಕಾಯಿಲೆ ಕುರಿತು ಜ್ವರ ಸಮೀಕ್ಷೆ ಮಾಡಲಾಗುತ್ತಿದೆ. ಮಂಗಗಳ ಅಸಹಜ ಸಾವಿನ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಔಷಧಿ ಇಲ್ಲ. ಆದರೂ ಕೂಡ ಕಾಡಿಗೆ ಮತ್ತು ತೋಟಗಳಿಗೆ ತೆರಳುವವರಿಗೆ ಡೇಪಾ ತೈಲ ವಿತರಿಸಲಾಗಿದೆ. ಇದರ ಜೊತೆಗೆ ಜ್ವರ ಪರೀಕ್ಷೆಯನ್ನು ಕೂಡ ಜಿಲ್ಲಾದ್ಯಂತ ಮಾಡಲಾಗಿದೆ ಎಂದರು.

ಹೊಸನಗರ ತಾಲ್ಲೂಕಿನಲ್ಲಿ 1488 ರಕ್ತ ಮಾದರಿಯನ್ನ, ಸಾಗರ ತಾಲ್ಲೂಕಿನಲ್ಲಿ 2640 ತೀರ್ಥಹಳ್ಳಿಯಲ್ಲಿ 2451 , ಶಿಕಾರಿಪುರದಲ್ಲಿ 266, ಭದ್ರಾವತಿಯಲ್ಲಿ 147, ಸೊರಬದಲ್ಲಿ 256, ಶಿವಮೊಗ್ಗ ತಾಲ್ಲೂಕಿನಲ್ಲಿ 110 ಪರೀಕ್ಷೆಯನ್ನು ಮಾಡಲಾಗಿದ್ದು, ಒಟ್ಟು 104 ಜನರಿಗೆ ಪಾಸಿಟಿವ್ ಎಂದು ಗೊತ್ತಾಗಿದೆ. 81 ಜನರು ಗುಣಮುಖರಾಗಿದ್ದಾರೆ. ಇನ್ನೂ 19 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ, ಸೊರಬ, ಭದ್ರಾವತಿ ತಾಲ್ಲೂಕುಗಳಲ್ಲಿ ಯಾರಿಗೂ ಪಾಸಿಟಿವ್ ಇಲ್ಲ ಎಂದು ವಿವರ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments