Homeಜಿಲ್ಲೆರಾಜ ಕುಮಾರ್ ಸಿನಿಮಾಗಳು ಬದುಕಿಗೆ ದೊಡ್ಡ ಶಕ್ತಿ: ಚನ್ನಬಸಪ್ಪ

ರಾಜ ಕುಮಾರ್ ಸಿನಿಮಾಗಳು ಬದುಕಿಗೆ ದೊಡ್ಡ ಶಕ್ತಿ: ಚನ್ನಬಸಪ್ಪ

Spread the love

ಶಿವಮೊಗ್ಗ, ಏ.24: ಡಾ. ರಾಜ ಕುಮಾರ್ ಅವರ ಚಲಚಿತ್ರಗಳು ಬದುಕಿಗೆ ಶಕ್ತಿ ಕೊಡುತ್ತದೆ. ಅನಿಷ್ಟ ಪದ್ದತಿ, ವ್ಯಸನ ಮುಕ್ತ ಕುರಿತಂತೆ ಅವರ ಸಿನಿಮಾಗಳು ಜಾಗೃತಿ ಮೂಡಿಸುತ್ತದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಡಾ. ರಾಜ ಕುಮಾರ ಅವರ ಜನ್ಮ ದಿನಾಚರಣೆಯನ್ನು ಉದ್ಟಾಟಿಸಿ ಅವರು ಮಾತನಾಡಿದರು.

ರಾಜ್ ಕುಮಾರ್ ಎಂದರೆ ಒಂದು ಸಂಸ್ಕೃತಿ ಜೀವನ, ಸಾಹಿತ್ಯ ಎಲ್ಲವೂ ಒಳಗೊಂಡಿದ್ದು, ಅವರು ಕಲಾ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಹಂದರದಲ್ಲೂ ಅಭಿನಯಿಸಿದ್ದಾರೆ . ಸಮಾಜ ಅಂಕುಡೊಂಕನ್ನು ಕಲೆಯ ಮೂಲಕ ತಿದ್ದಿದ ವ್ಯಕ್ತಿಯಾರಾದರು ಇದ್ದರೆ ಅದು ರಾಜ್ ಕುಮಾರ್ ಮಾತ್ರ.

ರಾಜ ಕುಮಾರ್ ಅಂದರೆ ಕೇವಲ ಅವರು ಮಾತ್ರವಲ್ಲ ಅವರ ಜೊತೆ ಕೆಲಸ ಮಾಡಿದ ಅನೇಕ ವ್ಯಕಿತ್ವಗಳು ನಮ್ಮ ಕಣ್ಣು ಮುಂದೆ ಬರುತ್ತಾರೆ. ಹಿರಿಯರಿಗೆ ರಾಜ್ ಕುಮಾರ್ ಎಂದರೆ ಆರಾಧ್ಯ ದೇವರಾಗಿದ್ದಾರೆ. ಅವರು ಸಿನಿಮಾ ಹಾಡುಗಳೆಂದರೆ  ಅದು ಅರ್ಥ ಗರ್ಭಿತದಿಂದಲೇ ಕೂಡಿರುತ್ತಿತ್ತು. ವೀರಪ್ಪನ್ ಮನಸ್ಸ ಗೆದ್ದ ವ್ಯಕ್ತಿಯಾರದರು ಇದ್ದರೆ ಅದು ರಾಜ್ ಕುಮಾರ್  ಎಂದರು.

ಮನುಕುಲಕ್ಕೆ ಬೇಕಾದ ಎಲ್ಲಾ ಸಂಗತಿ ಅವರ ಸಿನಿಮಾದಲ್ಲಿ ಅಳವಡಿಸಿದ್ದರು. ಗೋಕಾಕ್ ಚಳುವಳಿಗೆ ರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿದ್ದರು. ಕನ್ನಡ ನೆಲ ಜಲ ಭಾಷೆಗೆ ಅಪಮಾನ ಆಗಬಾರದು ಅದನ್ನು ನಾನು ಸಹಿಸುವುದಿಲ್ಲ ಎನ್ನುತ್ತಿದ್ದರು.

ಶಿವಮೊಗ್ಗ ಬಂದಾಗ ಮೆರವಣಿಗೆ ಮಾಡಿದರು. ಇಡೀ ಭದ್ರಾವತಿ ಜನ ಪ್ರವಾಸಿ ಮಂದಿರಕ್ಕೆ ಬಂದಿದ್ದರು ರಾಜ ಕುಮಾರ್ ಅವರ ದರ್ಶನ ಮಾಡಲು.ರಾಜ್ ಕುಮಾರ್ ಅವರನ್ನು ಜೀವನದಲ್ಲಿ ವಿರೋಧ ಮಾಡಿದವರು ಇಲ್ಲ. ಅವರು ಕರ್ನಾಟಕ್ಕೆ ದೊಡ್ಡ ಆಸ್ತಿ. ಅವರು ಹಾಕಿಕೊಟ್ಟಿರುವ ಆದರ್ಶದಲ್ಲಿ ಜೀವನವನ್ನು ಸಾಗಿಸೊಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ದೂರಿಯಾಗಿ ಜನ್ಮ ದಿನವನ್ನು ಆಚರಣೆ ಮಾಡೊಣ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಕಟ್ಟಿ ಮಾತನಾಡಿ, 2006 ಏ 12 ರಂದು ರಾಜ ಕುಮಾರ್ ಆಗಲಿದ ದಿನ , ಅದರ ನಾಲ್ಕು ದಿನ ನಂತರ ನನ್ನ ಐಎಎಸ್ ಸಂದರ್ಶನ ಇತ್ತು. ಅಲ್ಲಿ ಒಬ್ಬ ನಟ ನಿಧನ ಆಗಿದ್ದಕ್ಕೆ ನಿಮ್ಮ ರಾಜ್ಯದಲ್ಲಿ ಅಷ್ಟು ಗಲಾಟೆ ಮಾಡಿದ್ದಾರೆ ನಿಮ್ಮಲ್ಲಿ ಪರಿಜ್ಞಾನ ಇಲ್ವ ಎಂದಿದ್ದರು. ಆಗ ನಾನು ರಾಜ ಕುಮಾರ್ ಅವರ ಕುರಿತು ಹೇಳಿದೆ . ರಾಜ ಕುಮಾರ್ ಅವರ ಕುರಿತು ಕೇಳಿ ಅವರ ಬಗ್ಗೆ ತಿಳಿದುಕೊಳ್ಳಲು ರಾಜ ಕುಮಾರ್ ಸಂಬಂಧಿಸಿದಂತ ಪುಸ್ತಕ ಓದುತ್ತೇನೆ ಎಂದಿದ್ದರು. ಈ ಘಟನೆ ನನ್ನ ಜೀವನದಲ್ಲಿ ಯಾವಾಗಲು ಸ್ಮರಣಿಯವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ .ವಿ, ಜಿ.ಪಂ ಕಾರ್ಯದರ್ಶಿ ಸುಜಾತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್‌ , ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ, ವಾರ್ತಾ ಇಲಾಖೆ ಸತೀಶ್ , ರಾಜ ಕುಮಾರ್ ಸಂಘಟನೆ, ಕಲಾವಿದರ ತಂಡಗಳು, ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments