Homeಜಿಲ್ಲೆಸಂಘ ಪರಿವಾರಕ್ಕೆ ಮಹಿಳೆಯರ ಬಗ್ಗೆ ಯಾವ ಗೌರವವೂ ಇಲ್ಲ: ಪುಷ್ಪ ಶಿವಕುಮಾರ್

ಸಂಘ ಪರಿವಾರಕ್ಕೆ ಮಹಿಳೆಯರ ಬಗ್ಗೆ ಯಾವ ಗೌರವವೂ ಇಲ್ಲ: ಪುಷ್ಪ ಶಿವಕುಮಾರ್

Spread the love

ಶಿವಮೊಗ್ಗ, ಏ.26: ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಷಡ್ಯಂತ್ರ  ಎಂದು ಕೆ ಪಿಎಂ ಸಿ.(ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್) ಪ್ರಧಾನ ಕಾರ್ಯದರ್ಶಿ  ಶಿಕಾರಿಪುರದ  ಪುಷ್ಪ ಶಿವಕುಮಾರ್ ಹೇಳಿದ್ದರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಿಶಕ್ತಿ ವಂದನಾ ಅಧಿ ನಿಯಮ ಜಾರಿ ಆಗಬಾರದು ಎಂಬಉದ್ದೇಶವನ್ನೇ ಇಟ್ಟುಕೊಂಡು ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದರೂ ಕೂಡ ವಿಶೇಷ ಅಧಿವೇಶನ ಕರೆದು ಮಸೂದೆ ಸೋಲುವಂತೆ ಮಾಡಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ರಾಜಕೀಯ ಗೂಬೆ ಕೂರಿಸಿಈಗ ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ರಾಜಕೀಯ ಗಿಮಿಕ್ ಅಲ್ಲದೇ ಮತ್ತೇನೂಅಲ್ಲ .

2023 ರಲ್ಲಿಯೇ ಈಗಾಗಲೇ ಮಸೂದೆ ಅಂಗೀಕಾರ ಪಡೆದು ರಾಷ್ಟ್ರಪತಿಗಳ ಅಂಕಿತ ಪಡೆದಿದ್ದರೂ ಕೂಡ ಅದನ್ನು ಗೆಜೆಟ್ ನೋಟಿಫಿಕೇಷನ್ ಮಾಡದೇ ಈಗ ಮತ್ತೊಮ್ಮೆ ಅದನ್ನು ಮಂಡಿಸುವ ಅವಶ್ಯಕತೆ ಇರಲಿಲ್ಲ. ಈಗಾಗಲೇ ಅಂಗೀಕಾರವಾಗಿರುವ ಮಸೂದೆಯನ್ನೇ ಜಾರಿಗೊಳಿಸಲಿ. ಇದರ ಜೊತೆಗೆ ಕ್ಷೇತ್ರ ಮರು ವಿಂಗಡಣೆಯ ಪ್ರಶ್ನೆ ಏಕೆ? ಈಗಿರುವ ಲೋಕಸಭೆಯ 543 ಸ್ಥಾನಗಳಿಗೆ ಶೇ. 33ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲು ಇವರಿಗೇನು ತೊಂದರೆ? ಆದರೆ ಅದನ್ನು ಬಿಟ್ಟು ಪಂಚ ರಾಜ್ಯ ಚುನಾವಣೆಯ ಸಂದರ್ಭದಲ್ಲಿಯೇ ಮೀಸಲಾತಿ ಮಂಡಿಸುವ ಮೊಂಡುತನ ಒಂದು ರೀತಿಯ ರಾಜಕೀಯ ಷಡ್ಯಂತ್ರ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿ ಮತ್ತು  ಸಂಘ ಪರಿವಾರಕ್ಕೆ ಮಹಿಳೆಯರ ಬಗ್ಗೆ ಯಾವ ಗೌರವವೂ ಇಲ್ಲ.ಧರ್ಮವನ್ನು ಇಟ್ಟುಕೊಂಡು ರಾಜಕೀಯ ಆಟ ಆಡುತ್ತಿರುವ ಇವರು ಈಗ ಮಹಿಳೆಯರ ಬಗ್ಗೆ ಮೊಸಳೆ ಕಣ್ಣಿರು ಸುರಿಸುವಮೂಲಕ ಅನುಕಂಪ ಪಡೆಯುವ ಹುನ್ನಾರ ಮಾಡುತ್ತಿದೆ.

ಬಿಜೆಪಿಯವರ ನಾಟಕ ಸಾಕು, ಅವರಿಗೆ ಮಹಿಳೆಯರ ಮೇಲೆ ಯಾವ ಗೌರವವೂ ಇಲ್ಲ. ಮಹಿಳೆಯರು ರಾಜಕಾರಣಕ್ಕೆ ಬರುವುದು ಇಷ್ಟವೂ ಇಲ್ಲ. ಒಂದು ಪಕ್ಷ ಮಹಿಳಾ ಸಮಾನತೆಯ ಬಗ್ಗೆ ಅವರಿಗೆ ಗೌರವ ಇದ್ದಿದ್ದರೆ ಅವರ ಬಹುಮತದ ಆಡಳಿತದ  ಕಾಲವೊಂದಿತ್ತು. ಆಗ ಯಾವ ಮಸೂದೆಯಾದರೂ ಕೂಡ ಅವರು ಪಾಸ್ ಮಾಡಬಹುದಿತ್ತು. ಆದರೆ ಏಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಕೇವಲ ಕಾಂಗ್ರೆಸ್ ಪಕ್ಷದ ಮಹಿಳೆಯರು ಮಾತ್ರ ಅಲ್ಲ ಎಲ್ಲಾ ಪಕ್ಷದ ಮಹಿಳೆಯರು ಬಿಜಿಪಿಯ ತಂತ್ರವನ್ನುಅರ್ಥ ಮಾಡಿ ಕೊಳ್ಳಬೇಕಾಗಿದೆ ಎಂದು ಪುಷ್ಪ ಶಿವಕುಮಾರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments