ಶಿವಮೊಗ್ಗ,ಏ.28 : ಹೊಳೆಹೊನ್ನೂರು ರಸ್ತೆಯಲ್ಲಿರುವ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಮತ್ತು ಯುಕೆ ಮೂಲದ ಚಿಯಾಕ್ ಎಎಸ್ಐ ಸಹಭಾಗಿತ್ವದಲ್ಲಿ ಭಾರತದ ಮೊದಲ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ ಎಂದು ಸ್ಕೂಲ್ನ ವ್ಯವಸ್ಥಾಪಕ ಟ್ರಸ್ಟಿ ಕಿರಣ್ಕುಮಾರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಕ ಬುದ್ದಿ ಮತ್ತೆ (ಎಐ) ಈಗ ಸೂಪರ್ ಇಂಟೆಲಿಜೆನ್ಸ್ ಹಂತದತ್ತ ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ ಭವಿಷ್ಯದ ತಂತ್ರಜ್ಞಾನಾಧರಿತ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಶಿಕ್ಷಣ ಸಂಸ್ಥೆಗಳ ಪ್ರಮುಖ ಹೊಣೆಗಾರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಲೆ ಮತ್ತೊಮ್ಮೆ ನವೀನ ಶಿಕ್ಷಣ ದಿಕ್ಕಿನಲ್ಲಿ ಮುಂಚೂಣಿಯ ಪಾತ್ರ ವಹಿಸಿದೆ ಎಂದರು.
ಈ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿ ಮತ್ತೆಯ ಮೂಲತತ್ವಗಳು, ಸೂಪರ್ ಇಂಟೆಲಿಜೆನ್ಸ್ ಮತ್ತು ಅದರ ಸಾಮಾಜಿಕ ಪರಿಣಾಮಗಳು, ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳು, ಬೌದ್ಧಿಕ ವ್ಯವಸ್ಥೆಗಳ ನೈತಿಕ ಪ್ರಶ್ನೆಗಳು, ಭವಿಷ್ಯದ ತಂತ್ರಜ್ಞಾನಗಳಿಗೆ ಅಗತ್ಯ ಕೌಶಲ್ಯಗಳು, ಭಾರತೀಯ ಪ್ರಾಚೀನ ಜ್ಞಾನ ಪರಂಪರೆಯಿಂದ ಆತ್ಮಜ್ಞಾನ ಹಾಗೂ ಚೇತನದ ಅರಿವು ಪರಿಚಯಿಸಲಾಗುತ್ತದೆ ಎಂದರು.
ಗಮನಿಸಿ:ಒಳಮೀಸಲಾತಿ ಜಾರಿ- ಜಿಲ್ಲಾ ಮಾದರ ಮಹಾಸಭಾ ಸ್ವಾಗತ
ಮೇ.3ರಂದು ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಹಲವಾರು ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದ ಅವರು, ಮೇ.2ನೇ ವಾರದಲ್ಲಿ ಸೂಪರ್ ಇಂಟೆಲಿಜೆನ್ಸ್ಇ ವಿಷಯ ಪರಿಚಯಿಸುವ ವಿಶೇಷ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಮೊ.9900015264ರಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಯುಕೆ ಮೂಲದ ಚಿಯಾಕ್ ಎಎಸ್ಐ ಸಂಸ್ಥೆಯ ಸಿಇಒ ಚಂದ್ರಶೇಖರ್ ನಾಗರಾಜ್ ಮಾತನಾಡಿ, ಸೂಪರ್ ಇಂಟೆಲಿಜೆನ್ಸ್ ಮಾನವ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ಪರಿವರ್ತನೆಗಳಲ್ಲಿ ಒಂದಾಗಿದೆ. ಇಂದಿನ ಎಐ ಮಟ್ಟಕ್ಕೆ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಸಾಕಾಗುವುದಿಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡ ಶಿಕ್ಷಣ ಇಂದು ಅಗತ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತೀಕ್, ಸೈಯದ್ ಶಾಹ್ ಅಜೀಮ್ ಉಪಸ್ಥಿತರಿದ್ದರು.
