Homeಜಿಲ್ಲೆಕಲಿಕೆ ಎನ್ನುವುದೇ ಸೌಂದರ್ಯ: ಡಾ.ರಂಜನಾ

ಕಲಿಕೆ ಎನ್ನುವುದೇ ಸೌಂದರ್ಯ: ಡಾ.ರಂಜನಾ

Spread the love

ಶಿವಮೊಗ್ಗ ಏ.29 : ಕಲಿಕೆ ಎನ್ನುವುದು ಸೌಂದರ್ಯ. ವಿದ್ಯಾರ್ಥಿಗಳು ಸದಾ ಕಲಿಯುತ್ತಾ ಇರಬೇಕು. ಇದರಿಂದ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಹುಬ್ಬಳ್ಳಿಯ ಕೆಎಲ್‌ಜೆಜಿಎಂಎ ಮೆಡಿಕಲ್ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ರಂಜನಾ ಎಸ್. ರಾನಡೆಮಯ್ಯ ಹೇಳಿದರು.

ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜು, ಕಲಾ ಪರಿಷತ್ತು, ಐಕ್ಯೂಎಸಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಲೆ ನಮ್ಮ ಬದುಕನ್ನು ಅರಳಿಸುತ್ತದೆ. ಅದು ಸೌಂದರ್ಯವೂ ಹೌದು. ವಿದ್ಯಾರ್ಥಿಗಳು ಯಾವುದೇ ವಿಭಾಗವನ್ನು ಆರಿಸಿಕೊಂಡರೂ ಕೂಡ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವುದರಿಂದ ಅವರ ಅರಿವಿನ ವಿಸ್ತಾರ ಹೆಚ್ಚುತ್ತದೆ. ಕನಸುಗಳು ನನಸಾಗಿಸಲು ಪ್ರೇರಣೆ ನೀಡುತ್ತದೆ. ಆದರೆ ಆತ್ಮವಿಶ್ವಾಸವಿರಲಿ. ಕಲಿಕೆ ಮುಗಿಯುವುದಲ್ಲ, ಜೀವನದ ಕೊನೆಯ ಉಸಿರಿರುವವರೆಗೂ ನಾವು ಕಲಿಯತ್ತಲೇ ಇರುತ್ತೇವೆ. ವಿದ್ಯೆಎಂಬುದು ದೊಡ್ಡ ಸಾಗರ ಎಂದರು.

ವಿದ್ಯೆ ನಮ್ಮ ಮನೋವಿಕಾಸಕ್ಕೆ ಕಾರಣವಾಗುತ್ತದೆ. ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ. ಆದರೆ ಯಾವುದೇ ಓದು ಅಥವಾ ಚಟುವಟಿಕೆ ದ್ವೇಷದಿಂದ ಇರಬಾರದು. ಪ್ರೀತಿಯಿಂದಲೇ ಎಲ್ಲಾ ಗೆಲುವು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಇಂತಹ ಹವ್ಯಾಸಗಳಲ್ಲೂ ತೊಡಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಬೇಕು. ಕ್ರೀಯಾಶೀಲತೆ ಎಂಬುದು ನಿರಂತರವಾದುದು. ಯಾವುದೇ ಕೆಲಸವನ್ನು ತಕ್ಷಣವೇ ಮಾಡುವ ಸಾಮರ್ಥ್ಯವನ್ನು ಕ್ರೀಯಾಶೀಲತೆ ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಜಡತ್ವವನ್ನು ಕಳೆದುಕೊಂಡು ಹೊಸ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಂಜುನಾಥ್, ಡಾ.ಶಿವಮೂರ್ತಿ ., ಡಾ.ಶುಭ ಮರವಂತೆ, ಕೆ.ಎನ್., ಡಾ.ಮಂಜುನಾಥ್ ಹೆಚ್.ಪಿ., ಡಾ.ಬಿ.ಎಂ.ಚಂದ್ರಶೇಖರ್, ಡಾ.ಹಾಲಮ್ಮ ಎಂ., ಡಾ.ಶಶಿರಾಜ್ ಯು., ಶ್ವೇತಾಶ್ರೀ, ವಿ.ಹೆಚ್.ಕರಿಬಸಪ್ಪ, ದಿವ್ಯಾ ಟಿ.ವಿ., ಜಾಹ್ನವಿ, ಪ್ರಣತಿ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments