ನಮ್ಮ ಸಮಾಜ ಇಂದಿಗೂ ಮಾನವೀಯ ಮೌಲ್ಯಗಳೊಂದಿಗೆ ಉಳಿದುಕೊಂಡಿರುವುದಕ್ಕೆ ಸ್ತ್ರೀ ಯರ ಪಾತ್ರ ಅತಿ ಮಹತ್ತರವಾದದ್ದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಆ ಶಕ್ತಿ ಬಹುಪಾಲು ಸಂದರ್ಭಗಳಲ್ಲಿ ಪ್ರಚಾರದ ಬೆಳಕಿಗೆ ಬಾರದೆ, ಮೌನವಾಗಿ, ಅದೃಶ್ಯವಾಗಿ ಈ ಸಮಾಜದಲ್ಲಿ ಉಳಿದುಕೊಳ್ಳುತ್ತಿದೆ.
ಸ್ತ್ರೀ ಇಂದು ಕೇವಲ ಮನೆತನದ ಸೀಮೆಯೊಳಗೆ ಸೀಮಿತಳಾಗದೆ ಶಿಕ್ಷಣ ತಜ್ಞಳಾಗಿ, ಸಮಾಜ ಪರಿವರ್ತನೆಯ ಹರಿಕಾರಳಾಗಿ, ಆವಿಷ್ಕಾರಗಳ ಮುಂಚೂಣಿಯಲ್ಲಿರುವ ನಾಯಕಿಯಾಗಿ, ನ್ಯಾಯಕ್ಕಾಗಿ ಹೋರಾಡುವಳಾಗಿ, ಭವಿಷ್ಯದ ಪೋಷಕಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾಳೆ. ಇಂತಹ ಅಸಾಮಾನ್ಯ ಮಹಿಳೆಯರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆ ಕೆಲವು ಸಾಧಕಿಯರನ್ನು ಗುರುತಿಸಿ ಗೌರವಿಸಿದೆ.
ಈ ಪ್ರಶಸ್ತಿ ನೀಡುವ ಮೂಲಕ ಎಲೆ ಮರೆಯ ಕಾಯಿಯಂತೆ ಮೌನವಾಗಿ ದುಡಿಯುತ್ತಿರುವ ಅಸಾಮಾನ್ಯ ಮಹಿಳೆಯರ ಸಾಧನೆಯ ಯಶೋಗಾಥೆಯನ್ನು ಪ್ರಪಂಚಕ್ಕೆ ತಿಳಿಸಿದ್ದಾರೆ. ಕಸ ಮುಕ್ತ ಗ್ರಾಮ ನಿರ್ಮಾಣದಿಂದ ಹಿಡಿದು ಅಳಿವಿನಂಚಿನಲ್ಲಿರುವ ಸಮುದಾಯಗಳಲ್ಲಿ ಶಿಕ್ಷಣದ ಬೆಳಕು ಹರಡುವುದರವರೆಗೆ, ಕಡಲ ತೀರದಲ್ಲಿ ದೋಣಿ ಮೀನುಗಾರಿಕೆ ಮಾಡುವುದರಿಂದ ಹಿಡಿದು ಲಾರಿ ಕವಚ ತಯಾರಿಸುವವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಕಿಯರನ್ನು ಸಮಾಜದ ಮುಖ್ಯಭೂಮಿಕೆ ತಂದು ಮಹಿಳೆಯರಿಗೆ ಮತ್ತಷ್ಟು ಹುರುಪು ಹೆಚ್ಚಿಸಿದಂತಾಗಿದೆ.
ಅಂಗವಿಕಲತೆಯನ್ನು ಮೆಟ್ಟಿನಿಟ್ಟು ಸ್ವಾವಲಂಬಿ ಬದುಕು ನಡೆಸುತ್ತಿರುವ ಬೆಂಗಳೂರಿನ 32 ವರ್ಷದ ಸವಿತಾರ ವ್ಯಕ್ತಿತ್ವ ನಮ್ಮೆಲರಿಗೂ ಪ್ರೇರಣೆಯಾದರೆ. ಕಮಲಮ್ಮ, ಶಂಕರವ್ವ ಲಂಬಾಣಿ, ಎಸ್. ಆಶ್ ಜಾನು, ಎಂ. ಗೌಸಿಯ ಖಾನ್, ಗಿರಿಜಮ್ಮ ಸಾರಂಗ, ರಾಗಿಣಿ, ದೀಪಿಕಾ ರಂತಹ ಸಾಧಕಿಯರು ಮಾರ್ಗದರ್ಶಕರ ಸ್ಥಾನದಲ್ಲಿದ್ದಾರೆ. ಮಹಿಳೆಯರು ಇಷ್ಟೆಲ್ಲಾ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದರು. ಈ ಸಮಾಜ ಮಾತ್ರ ಹೆಣ್ಣನ್ನು ನೋಡುವ ದೃಷ್ಟಿ, ಆಕೆಯನ್ನು ನಡೆಸಿಕೊಳ್ಳುವ ರೀತಿ ಮನಗಾಣಬೇಕಿದೆ.
ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯನ್ನು ವೈಭವೀಕರಿಸುವುದು ಸುಂದರವಾಗಿ ಕಂಡರು. ಆಕೆಯ ಜೀವನದ ವಾಸ್ತವತೆ ಭಿನ್ನವೇ ಆಗಿದೆ. ಕವಿ, ಕಾವ್ಯ, ಕಾದಂಬರಿಯಲ್ಲಿ ಇರುವ ಹೆಣ್ಣಿನ ಬದುಕು ಅಷ್ಟು ಸುಲಭವಲ್ಲ. ವೇದಗಳ ಕಾಲದಿಂದಲೂ, ರಾಮಾಯಣ ಮತ್ತು ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿ ಸಹ ಹೆಣ್ಣು ಪ್ರಮುಖ ಪಾತ್ರಧಾರಿಣಿಯಾಗಿ ಕಾಣಿಸಿಕೊಂಡಿದ್ದು, ಹೆಣ್ಣಿಗಾಗಿಯೇ ಯುದ್ಧಗಳೇ ನಡೆದಿವೆ ಎನ್ನುವುದು ದಾಖಲಿಸಲಾಗಿದೆ. ಆದರೆ ವಾಸ್ತವದಲ್ಲಿ ಆಕೆ ಚಿತ್ರಣವೇ ಬೇರೆಯಾಗಿದೆ.
“ಹೆಣ್ಣು ಜಗದ ಕಣ್ಣು”, “ಮನೆಯ ಮಹಾಲಕ್ಷ್ಮಿ”, “ಪ್ರಕೃತಿಯ ಮಾತೆ”, “ಮಮತೆಯ ರೂಪ” ಎಂಬ ಸುಂದರ ಪದಗಳು ಕೇವಲ ಪದಗಳಾಗಿಯೇ ಉಳಿಯುತ್ತಿವೆ ಹೊರತು ಅದನ್ನು ಪಾಲಿಸುವಲ್ಲಿ , ಆ ಸ್ಥಾನ ಸಮರ್ಪಕವಾಗಿ ಹೆಣ್ಣಿಗೆ ಕೊಡುವಲ್ಲಿ ಸೋಲುತ್ತಿದೆ. ಅದPಕ್ಕೆ ಕಾರಣ ಹುಡುಕುತ್ತಾ ಹೋದರೆ ನಮಗೆ ಕಾಣಸಿಗುವುದು ಈ ಪುರುಷ ಪ್ರಧಾನ.ಹೆಣ್ಣು ಮುಂದೆ ಬರುವುದನ್ನು, ಬಲಿಷ್ಠಳಾಗಿ ಬದುಕುವುದನ್ನು ಸಹಿಸಲಾಗದ ಮನೋಭಾವನೆ ಇರುವವ ಪ್ರಧಾನದಲ್ಲಿ ಮದುವೆಯ ನಂತರ ವರದಕ್ಷಿಣೆ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆಗಳು ಅನೇಕ ಮನೆಗಳಲ್ಲಿ ನಡೆಯುತ್ತಿವೆ. “ಎಲ್ಲರ ಮನೆಯಲ್ಲೂ ಹೀಗೇ ಇರುತ್ತದೆ, ಹೊಂದಿಕೊಂಡು ಹೋಗು” ಎನ್ನುತ್ತಾರೆ ಹಪರತು ಅದನ್ನು ಎದುರಿಸಿದ ಬೇಕು ಎನ್ನುವ ಮಾತುಗಳು ವಿರಳ. ಇದು ಮತ್ತಷ್ಟು ಅವರ ಮನಸ್ಸಿನ ಮೇಲಿನ ಪರಿಣಾಮಗಳನ್ನು ಬೀರುತ್ತದೆ.
ಗಮನಿಸಿ:ಪೊಲೀಸ್ ದಾಳಿ- 1 ಕೆಜಿ 67 ಗ್ರಾಂ ತೂಕದ ಗಾಂಜಾ ವಶ
ಗಂಡು-ಹೆಣ್ಣು ಸಮಾನತೆಯ ನೆಲೆಯಲ್ಲಿರಬೇಕು:
ಗಂಡು-ಹೆಣ್ಣು ಸಮಾನತೆಯ ನೆಲೆಯಲ್ಲಿ ನಿರ್ಮಿತವಾದ ಕುಟುಂಬಗಳು ಮಾತ್ರ ಸುಖ ಮತ್ತು ಸಂತೋಷದ ನೆಲೆಗಳಾಗುತ್ತವೆ. ಅಹಂಕಾರ, ವ್ಯಾಮೋಹ ಮತ್ತು ಸ್ಪರ್ಧಾತ್ಮಕ ಮನೋಭಾವನೆಗಳು ಹೆಚ್ಚಾದಲ್ಲಿ ಸಂಘರ್ಷಗಳು ಹೆಚ್ಚಾಗುತ್ತವೆ. ಸಕಾರಾತ್ಮಕ ಚಿಂತನೆಗಳು ಮಾತ್ರ ಶಾಂತಿಯುತ ಜೀವನಕ್ಕೆ ದಾರಿ ತೋರಿಸುತ್ತವೆ.
ಸಮಾಜದಲ್ಲಿ ಸಾಧಕಿಯಾಗಿರುವ ಮಹಿಳೆಯರು ಸುಲಭವಾದ ಬದುಕನ್ನು ನಡೆಸಿಲ್ಲ. ಅವರು ಪ್ರತಿಕ್ಷಣವೂ ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಡುತ್ತಲೇ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಅವರ ಈ ಹಠ ಮತ್ತು ಧೈರ್ಯ ಮುಂದಿನ ತಲೆಮಾರಿಗೆ ಆಶಾಕಿರಣವಾಗಿದೆ.
ಸ್ತ್ರೀ ಎಂದರೆ ಕೇವಲ ಸಂಬಂಧವಲ್ಲ:
ಸ್ತ್ರೀ ಎಂದರೆ ಕೇವಲ ಒಂದು ಸಂಬಂಧವಲ್ಲ, ಒಂದು ಶಕ್ತಿ. ಅವಳನ್ನು ಕೇವಲ ಮಾತುಗಳಲ್ಲಿ ಕೊಂಡಾಡುವುದು ಸಾಕಾಗುವುದಿಲ್ಲ. ಅವಳಿಗೆ ಸಮಾನ ಅವಕಾಶಗಳು, ಗೌರವ ಮತ್ತು ಸುರಕ್ಷತೆ ನೀಡುವ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಸ್ತ್ರೀಯ ಸಾಧನೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವಳ ಸ್ವಾಭಿಮಾನವನ್ನು ಉಳಿಸುವುದೇ ನಿಜವಾದ ಗೌರವ.
ಗೌರವನ್ನು ಪರಸ್ಪರ ಹಂಚಿ ಹೋದಾಗ ಮಾತ್ರ ಆ ಕುಟುಂಬಗಳು ಸುಂದರವಾಗಿ, ಸಂತೋಷವಾಗಿ ಇರುತ್ತವೆ. ಆದರೆ ವ್ಯಾಮೋಹ, ಅಹಂಕಾರ ಮತ್ತು ಪ್ರತಿಸ್ಪರ್ಧಿ ಎಂಬ ಭಾವನೆಗಳು ಮನೆ ಮಾಡಿದರೆ ಕುಟುಂಬಗಳಲ್ಲಿ ಸದಾ ಸಂಘರ್ಷಗಳು ಇದ್ದೇ ಇರುತ್ತವೆ. ಸಕರಾತ್ಮಕ ಚಿಂತನೆ ಸುಖದ ಜೀವನಕ್ಕೆ ದಾರಿಗಳನ್ನು ಕಲ್ಪಿಸಿಕೊಡುತ್ತದೆ. ಪ್ರತಿಕ್ಷಣವೂ ಶೋಷಣೆಯಿಂದಲೇ ದೌರ್ಜನ್ಯಗಳಿಂದಲೇ ಬೆಸತ್ತಿದ್ದ ಜೀವಗಳು ಬದುಕಿನಲಗಲಿ ಹೋರಾಡಿ ಗೆದ್ದು ತನ್ನ ಗುರಿಗಳನ್ನು ಸಾಧಿಸಿಕೊಂಡಿದ್ದಾರೆ ಮುನ್ನುಗುತ್ತಿದ್ದಾರೆ. ಆ ಮೂಲಕ ಸಮಾಜಕ್ಕೆ ದಾರಿ ದೀಪವಾಗಿ ಮುಂದಿನ ತಲೆಮಾರಿಗೆ ಆಶಾಭಾವನೆಯನ್ನು ಹುಟ್ಟಿಸುವಂತಾಗುತ್ತಿದ್ದಾರೆ.
ನಂದನ. ಎನ್ ಗೌಡ
ಕುವೆಂಪು ವಿಶ್ವವಿದ್ಯಾಲಯ
