Homeಜಿಲ್ಲೆತನಿಖೆಯಿಂದ ಘಟನೆ ಹಿಂದಿರುವವರು ಯಾರೆಂದು ತಿಳಿಯುತ್ತದೆ : ಶರತ್ ಅನಂತಮೂರ್ತಿ

ತನಿಖೆಯಿಂದ ಘಟನೆ ಹಿಂದಿರುವವರು ಯಾರೆಂದು ತಿಳಿಯುತ್ತದೆ : ಶರತ್ ಅನಂತಮೂರ್ತಿ

Spread the love

ಶಿವಮೊಗ್ಗ,ಮೇ.4: ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಈ ವೇಳೆ ಘಟನೆಗಳ ಹಿಂದಿರುವ ಕೈಗಳ ಬಗ್ಗೆ ಬಹಿರಂಗವಾಗಿ ಹೇಳಲು ಇಚ್ಛಿಸುವುದಿಲ್ಲ ಎಂದು ಕುವೆಂಪು ವಿವಿಯ ಕುಲಪತಿ ಶರತ್ ಅನಂತಮೂರ್ತಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ಹಿಂದಿರುವ ವ್ಯಕ್ತಿ ಕುರಿತು ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಇಂತಹ ಅಹಿತಕರ ಘಟನೆ ಯಾವತ್ತು ನಡೆದಿಲ್ಲ. ಇದರಲ್ಲಿ ವಿದ್ಯಾರ್ಥಿಗಳ ತಪ್ಪೆನೀಲ್ಲಾ. ಪ್ರಜಾಪ್ರಭುತ್ವದಲ್ಲಿ ಪತ್ರಿಭಟನೆ ತಪ್ಪಲ್ಲ. ಆದರೆ ಅವರಿಗೆ ಈ ರೀತಿ ಮಾಡುವಂತೆ ಸಲಹೆ ನೀಡಿದವರ ಬಗ್ಗೆ ಅಸಮಾಧಾನವಿದೆ. ಈ ಕೃತ್ಯ ಮಾಡುವಂತೆ ಅಧಿಕಾರದ ವಲಯದ ಯಾರೋ ಸಲಹೆ ನೀಡಿದ್ದಾರೆ ಎಂಬುದು ಕೊಂಚ ಅನುಮಾನವಿದೆ. ಆದರೆ ಈ ಪ್ರಕರಣ ಪೊಲೀಸ್ ತನಿಖೆಯಲ್ಲಿರುವುದರಿಂದ ಬಹಿರಂಗವಾಗಿ ಏನನ್ನು ಹೇಳ ಆಗುವುದಿಲ್ಲ. ಯಾಕೆಂದರೆ ಇದರಿಂದ ತನಿಖೆಗೆ ಅಡಚಣೆಯಾಗುತ್ತದೆ, ತನಿಖೆ ನಂತರ ಯಾರೆಂದು ತಿಳಿದು ಬರುತ್ತದೆ ಎಂದರು.

ಡಿಜಿಟಲ್ ಮೌಲ್ಯಮಾಪನ ಅಕ್ರಮ ಕುರಿತು ಮಾತನಾಡಿ, ಡಿಜಿಟಲ್ ಮೌಲ್ಯ ಮಾಪನದಲ್ಲಿ ಅಕ್ರಮವಾಗಿದೆ ಎಂದು ನಾನು ಒಪ್ಪುವುದಿಲ್ಲ. ಈ ಮೌಲ್ಯಮಾಪನವನ್ನು ಸರ್ಕಾರ ಅನುಮೋದನೆ ಮಾಡಿ ಕಳಿಸಿದೆ ಅದನ್ನು ನಾವು ಅನುಸರಿಸುತ್ತಿದ್ದೇವೆ. ಈ ಡಿಜಿಟಲ್ ಮೌಲ್ಯಮಾಪನದ ಉದ್ದೇಶ ಪಾರದರ್ಶಕತೆ ಕಾಪಾಡಲು, ಬೇಗ ಫಲಿತಾಂಶ ನೀಡಲು ಹಾಗೂ ಖರ್ಚು ಕಡಿಮೆ ಮಾಡುವುದಾಗಿದೆ. ಯುಯುಸಿಎಂ ಒಳ್ಳೆ ಉದ್ದೇಶದಿಂದ ಇದನ್ನು ಆರಂಭಿಸಿದೆ. ಆದರೆ ಕೆಲವೊಂದು ಕಡೆ ತಪ್ಪಾಗಿದೆ ಅದರಿಂದ ಫಲಿತಾಂಶ ವಿಳಂಬವೂ ಆಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೌಲ್ಯಮಾಪನದಲ್ಲಿ ತಪ್ಪಾಗಿರುವುದನ್ನು ತನಿಖೆಗೆ ಒಳಪಡಿಸಲಾಗಿದೆ ಎಂದರು.

ಕುಲಸಚಿವರಾದ ಎನ್. ಹೇಮಂತ್ ಮಾತನಾಡಿ, ನಕಲಿ ಪದವಿ, ಸ್ನಾತಕೊತ್ತರ ಪದವಿ ಹಾಗೂ ಪಿಹೆಚ್‌ಡಿ ಗಳು ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಪಾರದರ್ಶಕ ತರುವ ಉದ್ದೇಶದಿಂದ ಸರ್ಕಾರವು ನ್ಯಾಷನಲ್ ಅಕಾಡೆಮಿ ಡೆಪಾಸಿಟ್(ಎನ್‌ಎಡಿ) ಯ ಮೂಲಕ ಡಿಜಿಟಲ್ ಲಾಕರ್ ಜಾರಿ ತಂದರು. ಇದರಿಂದ ವಿದ್ಯಾರ್ಥಿಗಳು ಡಿಜಿಟಲ್ ಅಂಕ ಪಟ್ಟಿಯನ್ನು ಪಡೆಯಬಹುದಾಗಿದೆ ಎಂದರು.

ಇನ್ನೂ ಮುಂದೆ ಫಲಿತಾಂಶ ಯಾವುದೇ ರೀತಿ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಪ್ರತಿ ಮೌಲ್ಯಮಾಪನ ನಂತರ ಫಲಿತಾಂಶದ ಬುಲೆಟಿನ್ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷದಿಂದ ಇದು ಆರಂಭವಾಗಲಿದ್ದು, ಯುಟ್ಯೂಟ್ ಮೂಲಕ ಬಿಡುಗಡೆ ಮಾಡಲಾಗುತ್ತದೆ ಎಂದರು.

ನ್ಯಾಕ್ ನಲ್ಲಿ ವಿಶ್ವವಿದ್ಯಾಲಯ ಎ ಮಾನ್ಯತೆ ಪಡೆದಿದೆ. ಅನುದಾನ ಕಡಿಮೆ ಇದ್ದರೂ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯದಲ್ಲಿ ಯಾವುದೇ ಕೊರತೆ ಇಲ್ಲ. ಖಾಯಂ ಉಪನ್ಯಾಸರಿಂದ ಸಂಶೋಧನೆ ಕುಂಠಿತವಾಗಿದೆ, ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವವ ತಿಮ್ಮರಾಯಪ್ಪ, ವಿವಿ ಯ ಪಿಆರ್‌ಓ ಸತ್ಯಪ್ರಕಾಶ ಹಾಗೂ ವಿವಿಯ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments