ಶಿವಮೊಗ್ಗ, ಮೇ.7 : ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ಬಿ. ಕಾಂ ಪದವಿಯಲ್ಲಿ ಕುವೆಂಪು ವಿವಿಗೆ ಪ್ರಥಮ ರ್ಯಾಂಕ್ ಪಡೆದ ಸಾಗರದ ಎಲ್.ಬಿ. ಕಾಲೇಜಿನ ಅಕ್ಷಯ ಎ.ಎಲ್ ಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಅವರು ನಾಲ್ಕು ಸ್ವರ್ಣ ಪದಕಗಳನ್ನು ಪ್ರಧಾನ ಮಾಡಿದ್ದಾರೆ.
ಗಮನಿಸಿ:ಆಕರ್ಷ್ ಎಸ್.ಗೆ ಡಾಕ್ಟರೇಟ್ ಪದವಿ
ಭಾರತೀಯ ಸ್ಟೇಟ್ ಬ್ಯಾಂಕ್ ಸ್ವರ್ಣ ಪದಕ, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ಸ್ವರ್ಣ ಪದಕ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಜತ ಮಹೋತ್ಸವ ಸ್ವರ್ಣ ಪದಕ ಮತ್ತು ದಿ. ಗುರುಮೂರ್ತಿ ಶೆಟ್ಟಿ ಸ್ಮರಣಾರ್ಥ ಸ್ವರ್ಣ ಪದಕಗಳನ್ನು ಪಡೆಯುವುದರ ಮೂಲಕ ಸ್ನಾತಕ ಪದವಿ ವಿಭಾಗದಲ್ಲಿ ಅತಿ ಹೆಚ್ಚು ಸ್ವರ್ಣ ಪದಕಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .
ಸಾಗರ ತಾಲ್ಲೂಕಿನ ಹಂಸಗಾರಿನವರಾದ ಅಕ್ಷಯ, ಬಿ ಕಾಂ ಪದವಿಯ ಜೊತೆಗೆ ಸಿಎ ಫೌಂಡೇಷನ್ ಮತ್ತು ಇಂಟರ್ ಪರೀಕ್ಷೆಗಳಲ್ಲೂ ಉತ್ತಿರ್ಣನಾಗಿರುತ್ತಾರೆ.
