ಶಿವಮೊಗ್ಗ , ಮೇ.7 : ಅಧ್ಯಾಪಕ ವೃತ್ತಿ ಅತೀ ಶ್ರೇಷ್ಠ ಕಾಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡರು ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಗುರುವಾರ “ಸಹ್ಯಾದ್ರಿ ವಿಜ್ಞಾನ ಪರಿಷತ್, ಕ್ರೀಡಾ ವಿಭಾಗದ ವಾರ್ಷಿಕ ಚಟುವಟಿಕೆಗಳ ಹಾಗೂ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ”ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಕಾಲೇಜಿನಲ್ಲಿ ಓದಿದವರು ರಾಜಕೀಯ ಮುತ್ಸದ್ದಿಗಳಾಗಿರುವುದು ವಿಜ್ಞಾನಿಗಳಾಗಿರುವುದು ದೇಶ ವಿದೇಶಗಳಲ್ಲಿ ಕಾಲೇಜಿನ ಕೀರ್ತಿಪತಾಕೆಯನ್ನು ಹೆಚ್ಚಿಸಿದ ಹಾಗಾಗಿ ಈ ಕಾಲೇಜಿಗೆ ಸಹ್ಯಾದ್ರಿ ಎಂದು ನಾಮಕರಣ ಮಾಡಿ ಎಂದು ಕುವೆಂಪು ಹೇಳಿದ್ದರು. ಆದರಿಂದ ಅಧ್ಯಾಪಕರ ವೃತ್ತಿ ಶ್ರೇಷ್ಠ ಮತ್ತು ಪವಿತ್ರವಾದೆಂದುದು ಅತಿಥಿ ಉಪನ್ಯಾಸಕರನ್ನು ಶ್ಲಾಘಿಸಿದರು.
ಗುರು-ಶಿಷ್ಯರ ಸಂಬಂಧ ಬಹಳ ಪ್ರದಾನವಾದದ್ದು, ಮುಖ್ಯ ಅತಿಥಿಗಳಾದ ಲೆಪ್ಟಿನೆಂಟ್ ಕರ್ನಲ್ ಬಿ.ಎಸ್.ರಾಜು ಅವರು ಸೇವಾನುಭವದಲ್ಲಿ ಅನುಭವಿಸಿದ ಕಠಿಣವಾದ ಎಲಿಕಾಪ್ಟರ್ ಪ್ಲೈಯ್ ಮಾಡುವ ದೇಶದಲ್ಲೇ ಪ್ರಥಮವಾಗಿ ಆಫ್ರಿಕಾದಲ್ಲಿ ಒಬ್ಬರಾಗಿ ಲಂಡನಲ್ಲಿ ಉನ್ನತ ಅಧ್ಯಯನ ಆರ್ಮಿಯಿಂದ ಮಾತ್ರ ಸಾಧ್ಯವಾಯಿತು. ವಿದ್ಯಾರ್ಥಿಗಳು ಉತ್ತಮ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವುದು ನಿಮ್ಮ ಭಾಗ್ಯ ಇದೆಲ್ಲವನ್ನು ಸಾಧಿಸಲು ಮೂಲಭೂತವಾಗಿ ಶಿಸ್ತು, ಸಂಯಮ ಅಗತ್ಯ ಅದು ಎನ್‌ಸಿಸಿ ಘಟಕದಿಂದ ಸಾಧ್ಯವೆಂದು ಕಿವಿಮಾತು ಹೇಳಿದರು.
ಡಾ.ಪವಿತ್ರ ಅವರು ಮಾತನಾಡುತ್ತಾ, ಪಠ್ಯದಷ್ಟೇ ಸಾಂಸ್ಕೃತಿಕ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಉತ್ತಮವಾದುದೆಂದರು. ಸರಿಗಮಪ ಲಿಟ್ಲ್ ಚಾಂಪ್, ಸನಾತನ ಪರಂಪರೆಯುಳ್ಳ ಇಂಟರ್ ಮಿಡಿಯಟ್ ಕಾಲೇಜು,ಕುವೆಂಪು ಅವರಿಂದ ಸಹ್ಯಾದ್ರಿ ಕಾಲೇಜು ಎಂಬ ನಾಮಕರಣ ಪಡೆಯಿತು ಎಂದರು.
ಗಮನಿಸಿ:ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನರಸಿಂಹ ಗಂಧದಮನೆ ನೇಮಕ
ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಅಡಿಗಲ್ಲನ್ನು ಕಂಡು ಇಂದಿಗೆ 85 ಸಂವತ್ಸರಗಳನ್ನು ಕಳೆದು ಶತಮಾನದತ್ತ ದಾಪುಗಾಲಿಡುತ್ತಿರುವ ಕಾಲೇಜಿಗೆ ತನ್ನ ಪ್ರತಿಷ್ಠೆಯನ್ನು ಪ್ರೊ.ಸಿ.ಎನ್.ರಾವ್ ವಿಜ್ಞಾನಿಯನ್ನು ಶಿವಮೊಗ್ಗ ಸುಬ್ಬಣ್ಣನಂತಹ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮುತ್ಸದ್ದಿಗಳನ್ನು ದೇಶ ವಿದೇಶಗಳಲ್ಲಿ ಪಸರಿಸಿದೆ ಎಂದು ಪ್ರೊ ಹಾ.ಮ.ನಾಗಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್.ರಾಜೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಐಕ್ಯೂಎಸಿ ಸಂಚಾಲಕರಾದ ಪ್ರೊ.ಕೃಷ್ಣಮೂರ್ತಿ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪಾಚಾರ್ಯರಾದ ಪ್ರೊ ಅವಿನಾಶ್ ಹಾಗು ಪ್ರೊ.ಸಿರಾಜ್ ಅಹಮದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿದಿಗಳಾದ ಕುಮಾರಿ ನಿವೇದಿತ, ನಂದಿನಿ ನಾಯಕ್, ಸಹನ, ಗೋಪಿ ಇವರುಗಳು ಉಪಾಧ್ಯಕ್ಷರು, ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳಾಗಿ ಉಪಸ್ಥಿತರಿದ್ದರು. 2025-26 ನೇ ಶೈಕ್ಷಣಿಕ ಅವಧಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
