Homeಅಪರಾಧಚಾಕುವಿನಿಂದ ಎದೆಯ ಭಾಗಕ್ಕೆ ಚುಚ್ಚಿ ಕೊಲೆಗೆ ಯತ್ನ

ಚಾಕುವಿನಿಂದ ಎದೆಯ ಭಾಗಕ್ಕೆ ಚುಚ್ಚಿ ಕೊಲೆಗೆ ಯತ್ನ

Spread the love

ಶಿವಮೊಗ್ಗ, ಮೇ. 7: ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಸಾಮಾನ್ಯ ಸ್ವರೂಪದ ಗಾಯಪಡಿಸಿ ಕೊಲೆಮಾಡಲು ಪ್ರಯತ್ನಿಸಿದ ಆರೋಪಿಗಳಿಗೆ ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ .

ದಿ: 03-06-2021 ರಂದು ರಾತ್ರಿ ಭದ್ರಾವತಿಯ ಕೊಮರನಹಳ್ಳಿ ತಾಂಡದ ವಾಸಿಗಳಾದ 1 ಶರತ್ (24 ವರ್ಷ), 2 ವಿನಯ್ ಕುಮರ್ (21 ವರ್ಷ), 3 ಸರೋಜಾಬಾಯಿ (41 ವರ್ಷ), 4 ಜಯಾಬಾಯಿ (55 ವರ್ಷ) (ಮೃತ) ಆರೋಪಿತರೆಲ್ಲರು ಸೇರಿ ಅವಾಚ್ಯವಾಗಿ ಬೈದು,  ರವಿನಾಯ್ಕ ರವರನ್ನು ಕೊಲೆ ಮಾಡುವಉದ್ದೇಶದಿಂದ ಚಾಕುವಿನಿಂದ ರವಿನಾಯ್ಕ ರವರ ಬೆನ್ನಿಗೆ 2 ಬಾರಿ ಚುಚ್ಚಿ ರಕ್ತಗಾಯಪಡಿಸಿದ್ದು, ಎದೆಯಭಾಗಕ್ಕೆ ಇರಿದು ಸಾಮಾನ್ಯ ಸ್ವರೂಪದ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ

ಜಗಳ ಬಿಡಿಸಲು ಬಂದ ರಾಜಾನಾಯ್ಕ ರವರಿಗೆ 1 ಶರತ್ ಆರೋಪಿಯು ಚಾಕುವಿನಿಂದ ಹೊಟ್ಟೆಯಮೇಲ್ಭಾಗದಲ್ಲಿ ಹಿರಿದು ರಕ್ತಗಾಯಪಡಿಸಿದ್ದು, ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ ಠಾಣೆ ಅಪರಾಧಸಂಖ್ಯೆ 108/2021 ಕಲಂ 504, 323, 324, 307 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ನಿವೃತ್ತ ಎಎಸ್ಐ ಕೆ.ಕೆ ತ್ಯಾಗರಾಜ್ ಎಎಸ್ಐ ರವರು ಪ್ರಕರಣದತನಿಖೆ ಪೂರೈಸಿ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ವಾದಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:06-05-2026 ರಂದು 504, 323, 324, 307 ಸಹಿತ 34 ಐಪಿಸಿ ರೀತ್ಯಾ 1 ಶರತ್ 8 ವರ್ಷ ಕಾರಾಗೃಹವಾಸ ಹಾಗೂ 2,31,000/- ದಂಡ, 2 ವಿನಯ್, 3 ಸರೋಜಾಬಾಯಿ ಇವರಿಗೆ 3 ವರ್ಷ ಶಿಕ್ಷೆ ಹಾಗೂ 62000 ದಂಡ ವಿಧಿಸಿಆದೇಶಿಸಿರುತ್ತದೆ. ನೊಂದವರಾದ ರವಿನಾಯ್ಕ ರವರಿಗೆ ಪರಿಹಾರವಾಗಿ 1,00,000/- ರೂಗಳನ್ನು ಹಾಗೂರಾಜಾನಾಯ್ಕ ರವರಿಗೆ 50,000/- ನೀಡಲು ಆದೇಶಿಸಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments