Homeಜಿಲ್ಲೆಹೆಚ್ ಕೆವಿ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ: ಚನ್ನಬಸಪ್ಪ

ಹೆಚ್ ಕೆವಿ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ: ಚನ್ನಬಸಪ್ಪ

Spread the love

ಶಿವಮೊಗ್ಗ, ಮೇ.10 : ಹೆಚ್ .ಕೆ. ವೆಂಕಟರಾಮ್ ಅವರು ನೂರಾರು ಸಂಗೀತಗಾರರನ್ನು ತಯಾರಿ ಮಾಡುವ ಮೂಲಕ ರಾಜ್ಯದ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ಕೊಟ್ಟಿದ್ದಾರೆ  ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.

ಹೆಚ್.  ಕೆ. ವೆಂಕಟರಾಮ್ ಅವರ 80 ವರ್ಷ ಅಂಗವಾಗಿ ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಗರೀಕ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ ಕೆ ವೆಂಕಟರಾಮ್ ಅವರ ನಾದವಂದನೆ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ಅವರಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಅಭಿನಂದಿಸಿದರು.

ಗಮನಿಸಿ:ಭಕ್ತಿ ಮತ್ತು ತಾಳ್ಮೆಯ ಪ್ರತೀಕ ಹೇಮರೆಡ್ಡಿ ಮಲ್ಲಮ್ಮ: ಎಸ್ ಎನ್ ಚನ್ನಬಸಪ್ಪ

ಇದೊಂದು ವಿಶೇಷವಾದ ಕಾರ್ಯಕ್ರಮವಾಗಿದೆ. ಸಾಂಸ್ಕೃತಿಕ ಕಾರ್ಯದಲ್ಲಿ ಅವರ ಉತ್ಸಾಹನ್ನು ಶಕ್ತಿ ಮೀರಿದ್ದು. ಸಂಗೀತಕ್ಕೆ ಕ್ಷೇತ್ರಕ್ಕೆ ಹೊಸಹಳ್ಳಿ ಗ್ರಾಮ ವಿಶೇಷ ಕೊಡುಗೆ ನೀಡಿದೆ. ಗಮಕ ಸಾಹಿತ್ಯಕ್ಕೆ ಶಕ್ತಿ ತುಂಬಿದೆ.  ಹಾಗಾಗಿಯೇ ಪದ್ಮಶ್ರೀ ಆ ಗ್ರಾಮಕ್ಕೆ ಒಲಿದು ಬಂದಿರುವುದು ಎಂದರು.

ಕಾರ್ಯಕ್ರಮದಲ್ಲಿ ಎಂಎಲ್ ಸಿ ಡಿ ಎಸ್ ಅರುಣ್ , ಖ್ಯಾತ ಮೃದಂಗ ವಿದ್ವಾಂಸರು, ಅನೂರು ಅನಂತಕೃಷ್ಣಮೂರ್ತಿ, ಮಧ್ವಿರೂಪ ಬಾಲಸುಬ್ರಮಣ್ಯ , ಹೆಚ್ ಕೆ ನರಸಿಂಹಮೂರ್ತಿ ಶ್ರೀಮತಿ ಉಷಾ ವೆಂಟಕರಾಮ್ , ಹೆಚ್ ಕೆ ವೆಂಕಟರಾಮ್ ,ಹೆಚ್ ಎಸ್ ನಾಗರಾಜ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments