ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.22
ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಲೆನಾಡಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಆಗುತ್ತಿದ್ದು, ಇದಕ್ಕೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಅವರು ಕೆಡಿಪಿ ಸಭೆಯಲ್ಲಿ ಮರುಳು ಅಕ್ರಮದ ಕುರಿತು ಮಾತನಾಡಿದರು.
ಅನೈತಿಕವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹಾಗಾಗಿ ಮರಳು ಅಕ್ರಮವನ್ನು ತಡೆಗಟ್ಟಲು ಇನ್ನು 5 ದಿನಗಳಲ್ಲಿ ಡಿಸಿ ಮತ್ತು ಎಸ್ ಪಿ ಇವರ ಜೊತೆಗೆ ಸಭೆ ನಡೆಸಿ ಅಕ್ರಮ ಮರಳು ಸಾಗಾಣಿಕೆದಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗಮನಿಸಿ: ಅಕ್ರಮ ಮದ್ಯ ಮಾರಾಟ- ತೀರ್ಥಹಳ್ಳಿಯಲ್ಲಿ 35 ವಯಸ್ಸಿನವರೇ ಹೆಚ್ಚು ಸಾವು
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಒಂದು ಟ್ರಕ್ ಮರಳಿಗೆ 28 ಸಾವಿರ ಇತ್ತು ಅದಕ್ಕೆ 70 ಟನ್ ಅಲೆನ್ ಮೆಂಟ್ ಗೆ 57 ಟನ್ ಬಿಲ್ ಮಾಡುತ್ತಿದ್ದರು. ನಾನು ಇದರ ಕುರಿತು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದಕ್ಕೆ 1.80 ಕೋಟಿ ಪೆಮೆಂಟ್ ಮಾಡಿದ್ದಾರೆ.
ಹಿಂದೆ 12 ಟನ್ ಮರಳಿಗೆ ಬಿಲ್ ಮಾಡುತ್ತಿದ್ದರು. ಆದರೆ ಈಗ 8 ಟನ್ ಗೆ ಬಿಲ್ ಮಾಡಿ ಅದರಲ್ಲಿ 20 ಟನ್ ಮರಳನ್ನು ಸಾಗಿಸುತ್ತಾರೆ. ಇದರಲ್ಲಿ ಎಷ್ಟು ಲಾರಿಗಳಿಗೆ ಪರ್ಮೀಟ್ ಇರುವುದಿಲ್ಲ. ಮರಳು ಸಾಗಾಣಿಕೆಗಾರಿಗೆ ಜಿಎಸ್ ಟಿ ನೋಂದಣಿ ಮಾಡಿಸಿರುವುದಿಲ್ಲ ಎಂದು ಮಾಹಿತಿ ನೀಡಿದರು.
