Homeಜಿಲ್ಲೆಅಕ್ರಮ ಮದ್ಯ ಮಾರಾಟ- ತೀರ್ಥಹಳ್ಳಿಯಲ್ಲಿ 35 ವಯಸ್ಸಿನವರೇ ಹೆಚ್ಚು ಸಾವು

ಅಕ್ರಮ ಮದ್ಯ ಮಾರಾಟ- ತೀರ್ಥಹಳ್ಳಿಯಲ್ಲಿ 35 ವಯಸ್ಸಿನವರೇ ಹೆಚ್ಚು ಸಾವು

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.22

ಅಕ್ರಮ ಮದ್ಯ ಮಾರಾಟದಿಂದ ತೀರ್ಥಹಳ್ಳಿಯಲ್ಲಿ 35 ವರ್ಷ ಮೇಲ್ಪಟ್ಟ ಯುವಕರೇ ಹೆಚ್ಚು ಸಾವನ್ನೊಪ್ಪುತ್ತಿದ್ದಾರೆ ಎಂದು ಶಾಸಕ ಅರಗ ಜ್ಞಾನೇಂದ್ರ ಆರೋಪಿಸಿದರು.

ಶುಕ್ರವಾರ ಅವರು ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆ ಸಂಬಂಧಿತ ವಿಷಯದ ಕುರಿತು ಮಾತನಾಡಿದರು.

ತೀರ್ಥಹಳ್ಳಿ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಾಗಿದ್ದು, ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ಬೀಟ್ ಪೊಲೀಸರೇ ಅಕ್ರಮ ಮದ್ಯ ಮಾರಾಟದವರ ಬಳಿ ಹಣ ಪಡೆಯುತ್ತಿದ್ದಾರೆ. ಪೊಲೀಸ್ ಇಲಾಖೆ ಇವೆಲ್ಲ ತಿಳಿದಿದ್ದರು ಕಂಡು ಕಾಣದಂತೆ ಇದ್ದರೇ ಎಂದು ಕಿಡಿಕಾರಿದರು.

ಗಮನಿಸಿ: ಅಣು ಸ್ಥಾವರಕ್ಕೆ ಘಟಕಕ್ಕೆ ಬೆಂಬಲ ಇಲ್ಲ: ಕೆಡಿಪಿಯಲ್ಲಿ ಸರ್ವಾನುಮತ

ಅಬಕಾರಿ ಅಧಿಕಾರಿ ಮುರುಳಿ ಮಾತನಾಡಿ, ಈಗಾಲೇ ಅಕ್ರಮ ಮದ್ಯ ಮಾರಾಟ ಸಂಬಂಧಿಸಿದಂತೆ 811 ಕೇಸ್ ದಾಖಲಾಗಿದ್ದು, 11,850 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ. ಇನ್ನು ಅಕ್ರಮ ಮದ್ಯ ಮಾರಾಟ ಮಾಡುವ ಸ್ಥಳವನ್ನು ಪರಿಶೀಲನೆ ಮಾಡುತ್ತೇವೆ ಎಂದರು.

ಲಿಕ್ಕರ್ ಶಾಪ್ ಅನ್ನು ಬೆಳಿಗ್ಗೆ 10 ಗಂಟೆಗೆ ತೆರೆಯಬೇಕು ಎಂಬ ಸೂಚನೆ ಇದೆ. ಆದರೆ 6 ಗಂಟೆಗೆ ತೆರೆಯುತ್ತಿದ್ದಾರೆ. ಇಂತಹದ್ದು ಕಂಡು ಬಂದಲ್ಲಿ ಕೂಡಲೇ ಆ ಅಂಗಡಿಗಳ ಲೈಸ್ಸೆನ್ಸ್ ರದ್ದು ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments