ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.22
ಸಾಗರದ ಬೇಸೂರಿನಲ್ಲಿ ಅಣು ಸ್ಥಾವರ ಘಟಕ ನಿರ್ಮಾಣಕ್ಕೆ ನಮ್ಮ ಬೆಂಬಲವಿಲ್ಲವೆಂದು ಜಿಲ್ಲೆಯ ಶಾಸಕರುಗಳು ಶುಕ್ರವಾರ ಕೆಡಿಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಿದರು.
ಕೇಂದ್ರ ಸರ್ಕಾರದಿಂದ ಈ ಪ್ರಸ್ತಾವನೆ ಬಂದಿದೆ. ಈ ಯೋಜನೆಯಿಂದ ಆ ಭಾಗದ ಜನರು ಭಯ ಭೀತರಾಗಿದ್ದು, ಈ ಭಯದಿಂದಲೇ ಬದುಕು ನಡೆಸುವಂತಾಗಿದೆ.
ಹಿಂದಿನಂದಲೂ ಈ ಭಾಗದ ಜನ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಈಗಲೂ ಅದು ಮುಂದುವರೆದರೆ ಸರ್ಕಾರ ಅದೋಗತಿ ಸ್ಥಿತಿಗೆ ತಲುಪುತ್ತದೆ. ಹಾಗಾಗಿ ಈ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಗಮನಿಸಿ: ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಮೊದಲ ಆದ್ಯತೆಯಾಗಿದೆ: ಕೆವಿಪಿ
ಈಗಾಗಲೇ ಈ ಭಾಗದ ಜನರು ಸರ್ಕಾರಕ್ಕೆ ಯೋಜನೆಗೆ ಭೂಮಿ ನೀಡಿ ಮನೆಯನ್ನು ಕಳೆದುಕೊಂಡಿದ್ದಾರೆ. ಈಗ ಅಣು ಸ್ಥಾವಕ ಘಟಕದಿಂದ ಮತ್ತೇ ಅಂತಹ ಭಯ ಕಾಡುತ್ತಿದೆ. ಈ ನಿಟ್ಟಿನಲ್ಲಿ ಆ ಭಾಗದ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ನಾವೆಲ್ಲ ಸರ್ಕಾರದ ಗಮನಕ್ಕೆ ತಂದು ನಿಲ್ಲಿಸುವ ಪ್ರಯತ್ನ ಮಾಡೊಣ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಾಸಕರುಗಳಾದ ಆರಗ ಜ್ಞಾನೇಂದ್ರ, ಶಾರದಾ ಪೂರ್ಯನಾಯ್ಕ, ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರುಗಳಾದ ಧನಂಜಯ ಸರ್ಜಿ, ಬಲ್ಕೀಶ್ ಬಾನು , ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡರು ಈ ನಿರ್ಣಯಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
