Homeರಾಜ್ಯಕಸ್ತೂರಿ ರಂಗನ್ ವರದಿ-ಕೇಂದ್ರಕ್ಕೆ ಮನವಿ ಮಾಡಲು ಸರ್ವಾನುಮತದ ಅಂಗೀಕಾರ

ಕಸ್ತೂರಿ ರಂಗನ್ ವರದಿ-ಕೇಂದ್ರಕ್ಕೆ ಮನವಿ ಮಾಡಲು ಸರ್ವಾನುಮತದ ಅಂಗೀಕಾರ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.22

ಪಶ್ಚಿಮ ಘಟ್ಟ ಅರಣ್ಯ ಭೌತಿಕ ಸಮೀಕ್ಷೆ ನಡೆಸುವಂತೆ ಮತ್ತು ಜನವಸತಿ, ಕೃಷಿ ಪ್ರದೇಶಗಳನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಳ್ಳಲು ಇಂದು( ಮಂಗಳವಾರ) ವಿಶೇಷ ಅಧಿವೇಶದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿದ ಕಸ್ತೂರಿ ರಂಗನ್ ವರದಿ 7 ನೇ ಅಧಿಸೂಚನೆ ವಿರೋಧಿಸಿ ಮಲೆನಾಡು ಭಾಗದಲ್ಲಿ ತೀವ್ರವಾದ ಹೋರಾಟ ರೂಪಗೊಂಡಿದ್ದು, ಈಗ ಆ ಹೋರಾಟಕ್ಕೆ ಪ್ರತಿಫಲ ದೊರಕಿದೆ.

ಗಮನಿಸಿ: ಗರ್ಭಕಂಠ ಕ್ಯಾನ್ಸರ್ ಬಗ್ಗೆ ಆತಂಕ ಬೇಡ ತಡೆಗಟ್ಟಬಹುದು: ಡಾ. ಚಿನ್ಮಯಿ

ಕಸ್ತೂರಿ ರಂಗನ್ ವರದಿ ಜಾರಿ ಹಿನ್ನಲೆಯಲ್ಲಿ ಪಶ್ಚಿಮ ಘಟ್ಟದ ಜನರು ಆತಂಕಕ್ಕೆ ಒಳಾಗಿದ್ದರು. ಅದರಂತೆ ಅನೇಕ ಸಭೆಗಳು, ಹೋರಾಟಗಳು, ಪಾದಯಾತ್ರೆಗಳನ್ನು ಪರಿಸರವಾದಿಗಳು, ರೈತರು ಆರಂಭಿಸಿದ್ದರು. ಮಲೆನಾಡು ಭಾಗದಲ್ಲಿ ಇದು ಪಕ್ಷಾತೀತವಾಗಿ ತೀವ್ರ ಸ್ವರೂಪವು ಪಡೆದಿತ್ತು. ಈ ವರದಿ ಕುರಿತು ರೈತರು, ಪರಿಸರವಾದಿಗಳು ಹಾಗೂ ಮಲೆನಾಡು ಜನರ ಆತಂಕ ಆಲಿಸಲು ಸೆ.19( ಶನಿವಾರ)ದಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀರ್ಥಹಳ್ಳಿಯಲ್ಲಿ ರೈತರೊಂದಿಗೆ ಸಂವಾದವನ್ನು ಕೂಡ ನಡೆಸಿದ್ದು, ಸೆ.21,22,23 ರಂದು ನಡೆಯುವ ವಿಶೇಷ ಅಧಿವೇಶದಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

ಅದರಂತೆ ಈಗ ವಿಶೇಷ ಅಧಿವೇಶದ ಈ ಎರಡನೇ ದಿನದಲ್ಲಿ ವಿಪಕ್ಷ ಬಿಜೆಪಿ, ಜೆಡಿಎಸ್ ಕೂಡ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದು, ಪಕ್ಷಾತೀತವಾಗಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ವೇಳೆ ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ಕೇರಳ ಮಾದರಿ ಅನುಸರಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೇಂದ್ರದ ಮನವೊಲಿಸಲು ಸರ್ವಪಕ್ಷಗಳ ನಿಯೋಗ ತೆರಳುವುದಾಗಿ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments