Homeಜಿಲ್ಲೆಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!

ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 27

ಸಾಗರದ  ಸಮೀಪದ ಸಿಗಂದೂರು ಸೇತುವೆ ಹೊಳೆಬಾಗಿಲು ಭಾಗದಲ್ಲಿ ಬುಧವಾರ ಮಧ್ಯಾಹ್ನ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಓರ್ವ ಮೃತಪಟ್ಟಿದ್ದಾರೆ.

ಈತ ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಗಲಗಲಿ ಗ್ರಾಮದ  ಉಮೇಶ್(35) ಎಂದು ಗುರುತಿಸಲಾಗಿದೆ.

ಸಿಗಂದೂರು ಚೌಡೇಶ್ವರಿ ದೇವಿ ದರ್ಶನ ಮುಗಿಸಿ, ಸೇತುವೆ ವೀಕ್ಷಣೆಯ ಬಳಿಕ ಸೇತುವೆ ಕೆಳಭಾಗದಲ್ಲಿ ಈಜಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಕಾರ್ಗಲ್ ಪೊಲೀಸ್  ಠಾಣೆ ಸಿಬ್ಬಂದಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹ ಪತ್ತೆ ಹಚ್ಚಲಾಯಿತು. ಸಂಬಂಧ ಕಾರ್ಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments