Homeಜಿಲ್ಲೆನ್ಯಾಯ ಪಡೆಯುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು: ಮಲ್ಲಿಕಾರ್ಜುನ ಮುರುಘರಾಜೇಂದ್ರರು

ನ್ಯಾಯ ಪಡೆಯುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು: ಮಲ್ಲಿಕಾರ್ಜುನ ಮುರುಘರಾಜೇಂದ್ರರು

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 27

ನ್ಯಾಯ ಪಡೆಯುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಆದರೆ ಅದಕ್ಕಾಗಿ ನ್ಯಾಯವಾದಿಗಳು ಸೇರಿದಂತೆ ಸಾರ್ವಜನಿಕರೇ ಹೋರಾಟಕ್ಕೆ ಇಳಿದಿರುವುದು ಬೇಸರದ ಸಂಗತಿಯಾಗಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹೇಳಿದರು.

ಬುಧವಾರ ವಕೀಲರ ಭವನದ ಮುಂಭಾಗ ಹೈಕೋರ್ಟ್ ಪೀಠಕ್ಕೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಧ್ಯ ಕರ್ನಾಟಕಕ್ಕೆ ಅಗತ್ಯವಾದ ಹೈಕೋರ್ಟ್ಪೀಠಕ್ಕೆ ಒತ್ತಾಯಿಸಿ ನಾವೆಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ. `ಸೋತುವನು ಗೆದ್ದ-ಗೆದ್ದವನು ಸೋತ’ ಎಂಬ ಮಾತಿದೆ. ಅದೇ ರೀತಿ ನ್ಯಾಯಪೀಠಕ್ಕಾಗಿ ನಾವು ಹೋರಾಡಬೇಕಾಗಿದೆ. ನ್ಯಾಯ ಪಡೆಯುವುದು ಅನಾಧಿಕಾಲದಿಂದಲೂ ಪ್ರತಿಯೊಬ್ಬರ ಪ್ರಜೆಯ ಹಕ್ಕಾಗಿದೆ. ಶಿವಮೊಗ್ಗ ಉತ್ತರ ಕನ್ನಡ ಮತ್ತು ದಕ್ಷಣ ಕನ್ನಡ ಹಾಗೂ ಮಧ್ಯ ಕರ್ನಾಟಕದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಜ್ಜನರ ಸಾಂಸ್ಕೃತಿಕ ಜಿಲ್ಲೆಯಾಗಿದೆ. ನಮ್ಮೆಲ್ಲರ ಆಗ್ರಹಪೂರ್ವಕ ಒತ್ತಾಯವಿದೆ. ಜನರ ಪರವಾಗಿ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಬೇಕು ಎಂದರು.

ಗಮನಿಸಿ: ಸೈದ್ದಾಂತಿಕ ರಾಜಕಾರಣಕ್ಕೆ ಕೊನೆಯ ಮೊಳೆ

ಸಮಾಜ ಬಿಟ್ಟು ಸನ್ಯಾಸಿಗಳು ಇರಲು ಸಾಧ್ಯವಿಲ್ಲ. ಒತ್ತಾಯಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮಲೆನಾಡಲ್ಲಿ ಅಣುಸ್ಥಾವರ, ಪಂಪ್ಡ್ ಸ್ಟೋರೇಜ್‌ನಂತಹ ಯೋಜನೆಗಳನ್ನು ತಂದು ಪರಿಸರ ನಾಶಕ್ಕೆ ಕಾರಣವಾಗಲಿದೆ. ಯೋಜನೆಗಳನ್ನು ರೂಪಿಸುವವರು ಕನಿಷ್ಠ ಜನರ ಅಭಿಪ್ರಾಯ ಪಡೆದು ರೂಪಿಸಬೇಕು. ಸರ್ವೇಮಾಡಿ ದೀರ್ಘಾವಧಿ ಪರಿಣಾಮಗಳನ್ನು ಅವಲೋಕಿಸಿ ದೂರದೃಷ್ಠಿಯುಳ್ಳ ಯೋಜನೆಯನ್ನು ರೂಪಿಸಬೇಕು. ಎ.ಸಿ. ರೂಮಿನಲ್ಲಿ ಕುಳಿತು ಕೆಲವು ನಿರ್ಧಾರಗಳನ್ನು ಸ್ಥಳೀಯರನ್ನು ಸಂಪರ್ಕಿಸದೆ ಮಾಡಿದಾಗ ಅನಾಹುತಗಳಾಗುತ್ತವೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ಸರ್ಕಾರಕ್ಕೆ ಮೊದಲಿನಿಂದಲೂ ಮಧ್ಯಕರ್ನಾಟಕ ಯಾವುದೇ ಯೋಜನೆ ಮಾಡುವಾಗ ನೆನಪಿಗೆ ಬರುವುದಿಲ್ಲ. ಇದು ಮಲೆನಾಡಿಗರ ಭಾವನಾತ್ಮಕ ಬೇಡಿಕೆಯಲ್ಲ, ಅಂಕಿಅAಶಗಳನ್ನೊಳಗೊAಡ ವಸ್ತುನಿಷ್ಠ ಬೇಡಿಕೆಯಾಗಿದೆ. ನಾವು ತಪಸ್ಸು ಮಾಡಿದ ತಕ್ಷಣ ವರನೀಡುವ ಸರ್ಕಾರವಲ್ಲ. ಆದರೆ ಮಂಗಳೂರಿಗೆ ಕೇಳಿದ ತಕ್ಷಣ ಹೈಕೋರ್ಟ್ಪೀಠ ನೀಡಲು ಬರುವುದಿಲ್ಲ. ಸಂಖ್ಯಾಬಲದಿಂದ ಮತ್ತು ಇನ್ನಿತರ ಎಲ್ಲಾ ಅಂಶಗಳಿಂದಲೂ ನ್ಯಾಯಯುತವಾಗಿ ಹೈಕೋರ್ಟ್ ಪೀಠ ಶಿವಮೊಗ್ಗಕ್ಕೆ ಬರಬೇಕು. ವಸ್ತುಸ್ಥಿತಿ ಅಧ್ಯಯನ ಮಾಡದೆ ಮಂಗಳೂರಿಗೆ ಹೈಕೋರ್ಟ್ ಪೀಠ ನೀಡಿದರೆ ಅದು ಸರಿಯಾದ ತೀರ್ಮಾನವಲ್ಲ. ಶಿವಮೊಗ್ಗವನ್ನು ನಿರಾಕರಿಸಲು ಯಾವ ಕಾರಣವೂ ಇಲ್ಲ ಎಂದರು.

ಈ ಸಂದರ್ಭದಲ್ಲಿ ಜಡೆ ಮಹಾಂತಸ್ವಾಮಿ, ತೊಗರ್ಸಿ ಶ್ರೀಗಳು ಮಾತನಾಡಿ, ತಮ್ಮ ಬೆಂಬಲ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments