ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 27
ಬೇಸೂರು ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬುಧವಾರ ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆ ಸಾಗರ ಇವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲಿಸಿದರು.
ಬೇಸೂರು ಅಣುವಿದ್ಯುತ್ ಸ್ಥಾವರ ಯೋಜನೆಯಿಂದ ಆ ಭಾಗದ ಗ್ರಾಮಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಮನುಷ್ಯನ ಜೀವನ ಸಂಕುಲಗಳು ಸೇರಿದಂತೆ ಆತಂಕವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ತಿಳಿಸಿಲ್ಲ. ಈ ಯೋಜನೆಯಿಂದ ಆಗುವ ವಿಕಿರಣಗಳಿಂದಾಗಿ ಕ್ಯಾನ್ಸರ್‌ನಂತಹ ಕಾಯಿಲೆಗಳು ಕೂಡ ಉಂಟಾಗುತ್ತವೆ. ಕುಡಿಯುವ ನೀರು ಕೂಡ ವಿಷವಾಗುತ್ತದೆ. ಇದು ಮಲೆನಾಡಿನ ಜನರ ಪಾಲಿಗೆ ಮತ್ತೊಂದು ಮರಣ ಶಾಸನ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗಮನಿಸಿ: ಜನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು : ಡಾ.ಆರ್.ಸಿ.ಜಗದೀಶ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು. ಪಶ್ಚಿಮಘಟ್ಟವನ್ನು ಉಳಿಸಬೇಕು. ಮಲೆನಾಡು ಮಾರಾಟಕ್ಕಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಒಂದು ಪಕ್ಷ ಈ ಯೋಜನೆಯನ್ನು ಮುಂದುವರಿಸಿದರೆ ಪಕ್ಷಾತೀತವಾಗಿ ಬಹುದೊಡ್ಡ ಹೋರಾಟವನ್ನೇ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ನಾಗರೀಕ ಹಿತರಕ್ಷಣಾ ವೇದಿಕೆ, ರಾಷ್ಟ್ರಭಕ್ತರ ಬಳಗ, ಅಣ್ಣಾ ಹಜಾರೆ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಅರವಿಂದ ಪಾಟೀಲ್, ಡಾ.ಸತೀಶ್‌ಕುಮಾರ್‌ಶೆಟ್ಟಿ, ಕೆ.ವಿ.ವಂಸತ್‌ಕುಮಾರ್, ಗೋಪಿನಾಥ್, ಡಾ.ಶ್ರೀಪತಿ, ಡಾ.ಚಂದ್ರಶೇಖರ್, ತೀ.ನ.ಶ್ರೀನಿವಾಸ್, ಜನಮೇಜಿರಾವ್, ಶೇಖರ್‌ಗೌಳೇರ್, ಎಸ್.ಬಿ.ಅಶೋಕ್‌ಕುಮಾರ್‌ಗಾಂಧಿ, ಜಿ.ವಿಜಯಕುಮಾರ್, ಪ್ರೊ.ಚಂದ್ರಶೇಖರ್, ತ್ಯಾಗರಾಜ್ ಮಿತ್ಯಾಂತ, ಸುಶೀಲಾ ಷಣ್ಮುಗಂ, ಬಾಲುನಾಯ್ಡು, ಹೆಚ್.ಎಂ.ಸಂಗಯ್ಯ, ಕಲ್ಲೂರು ಮೇಘರಾಜ್ ಸೇರಿದಂತೆ ಹಲವರಿದ್ದರು.
