Homeಜಿಲ್ಲೆಜನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು : ಡಾ.ಆರ್.ಸಿ.ಜಗದೀಶ್

ಜನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು : ಡಾ.ಆರ್.ಸಿ.ಜಗದೀಶ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 27

ಜನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ. ಜಗದೀಶ್ ಹೇಳಿದರು.

ಕಣ್ಣೇಶ್ವರ ಜಾನಪದ ಕಳಸಂಘ ಕಣ್ಣೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಇರುವಕ್ಕಿಯ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಕಲಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಮನಿಸಿ: ರಸಗೊಬ್ಬರ-ತೈಲಬೆಲೆ ಏರಿಕೆಗೆ ವೈಎಚ್‌ಎನ್ ಖಂಡನೆ

ಜನರ ಜೀವನದ ಬದುಕಿನ ಸಂಸ್ಕ್ಕೃತಿಯ ಪ್ರತೀಕವಾಗಿರುವ ಜನಪದ ಕಲೆಗಳನ್ನು ಉಳಿಸಿ ಮುಂದಿನ ಜನಾಂಗಕ್ಕೆ ಕೊಂಡಯುವ ಕೆಲಸ ಆಗಬೇಕಾಗಿದೆ ಜನಪದಕ್ಕೆ ತನ್ನದೇ ಆದ ಇತಿಹಾಸವಿದೆ ಪ್ರಾಚೀನ ಕಾಲದಿಂದಲೂ ಜನರೊಂದಿಗೆ ಬಂದಿರುವ ಜನಪದ ಕಲೆ ಸಾಹಿತ್ಯವನ್ನು ಜೀವಂತಿಕೆಯಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ತುಂಬಾ ಅಗತ್ಯವಾಗಿದೆ ಇಂದಿನ ಯುವಪೀಳಿಗೆ ಜನಪದವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿ ಟಾಕಪ್ಪ ಕಣ್ಣೂರು ಮಾತನಾಡಿ ಜನಪದ ತಾಯಿ ಬೇರು ಇದ್ದಂತೆ ಅದಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ ಜನರ ಬದುಕಿನೊಂದಿಗೆ ರೂಢಿಗತವಾಗಿ ಬಂದಿರುವ ಜನಪದ ಕಲೆ ಸಾಹಿತ್ಯ ಸಂಗೀತ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ ಎಂದರು.

ಕಸಾಪ ತಾಲೂಕ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ನಮ್ಮ ದೇಶೀಯ ಕಲೆಗಳನ್ನು ಉಳಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಜೀವನದ ಜೊತೆಯಲ್ಲಿಯೇ ಕರಗತವಾಗಿರುವ ಜನಪದ ಕಲೆಗಳ ಸಾಹಿತ್ಯ ವಿಶೇಷ ಸಂಸ್ಕೃತಿಯನ್ನು ಹೊಂದಿದ್ದು ಜನರ ಜೀವನದ ನೋವು ನಲಿವುಗಳನ್ನು ಹಾಗೂ ಜನರ ಮನಸ್ಸುಗಳನ್ನು ಕಟ್ಟುವಲ್ಲಿ ಹೆಚ್ಚು ಪ್ರಭಾವಶಾಲಿಯಾಗಿವೆ ಎಂದರು.

ಕಣ್ಣೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಟಿಕಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ವೇದಿಕೆಯಲ್ಲಿ ಆನಂದಪುರ ಕಸಾಪ ಅಧ್ಯಕ್ಷ ಬಿ.ಡಿ. ರವಿಕುಮಾರ್, ಕಣ್ಣೂರು ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ನಾಗರಾಜ್ ಸಂಗೀ, ಪ್ರಮುಖರಾದ ಡಾ. ನಾರಾಯಣ ಮಾವರ್ಕರ್. ಶಶಿಧರ್ ಕೆ.ಸಿ., ರವಿಕುಮಾರ್, ಗಣಪತಿ, ಮಾನ್ಯ ಪಾಟೀಲ್ ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments