Homeಜಿಲ್ಲೆರಸಗೊಬ್ಬರ-ತೈಲಬೆಲೆ ಏರಿಕೆಗೆ ವೈಎಚ್‌ಎನ್ ಖಂಡನೆ

ರಸಗೊಬ್ಬರ-ತೈಲಬೆಲೆ ಏರಿಕೆಗೆ ವೈಎಚ್‌ಎನ್ ಖಂಡನೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 27

ಮುಂಗಾರು ಕಾಲಿಟ್ಟಿದ್ದು ರಾಜ್ಯದ ರೈತರಿಗೆ ರಸಗೊಬ್ಬರ ಸಮಸ್ಯೆ ಎದುರಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್ ಆರೋಪಿಸಿದ್ದಾರೆ.

ದೇಶದ ಕೋಟ್ಯಂತರ ರೈತರು ಬಳಸುತ್ತಿರುವ ರಸಗೊಬ್ಬರದ ಮೇಲಿನ ಬೆಲೆ ಏರಿಕೆ ಹಾಗೂ ಸಬ್ಸಿಡಿ ಕಡಿತ ಮತ್ತು ಕೆಲವು ನೀತಿಗಳಿಂದಾಗಿ ಗೊಬ್ಬರದ ಕೊರತೆ ಹಾಗೂ ಬೆಲೆ ಏರಿಕೆಯಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಸರ್ಕಾರ ರಸಗೊಬ್ಬರವನ್ನು ಪೂರೈಕೆ ಮಾಡುತ್ತಿಲ್ಲ. ಇದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಗಮನಿಸಿ: ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಅವನತಿಗೆ ಮುನ್ಸೂಚನೆ: ಬಿ.ವೈ.ವಿಜಯೇಂದ್ರ

ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ತೀವ್ರವಾಗಿ ಹೆಚ್ಚಳ ಮಾಡಿದೆ. ಒಂದು ಚೀಲಕ್ಕೆ 400 ರಿಂದ 600 ರೂ.ವರೆಗೆ ದರ ಏರಿಕೆ ಮಾಡಲಾಗಿದೆ. ಡಿಎಪಿ, ಯೂರಿಯಾ ಸೇರಿದಂತೆ ಬೆಲೆಯಲ್ಲಿ ಅತಿ ಹೆಚ್ಚಳವಾಗಿದೆ. ರಸಗೊಬ್ಬರ ಮೇಲಿನ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.“ಪ್ರಧಾನಿ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ರಸಗೊಬ್ಬರಗಳ ಬೆಲೆಯನ್ನು ಹೀಗೆ ಏರಿಕೆ ಮಾಡಿದರೆ ರೈತರ ಆದಾಯ ಹೇಗೆ ದ್ವಿಗುಣಗೊಳ್ಳಲು ಸಾಧ್ಯ? ಇದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ ಎಂದಿದ್ದಾರೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಇಂಧನ ಬೆಲೆಗಳನ್ನು ಕೂಡ ಏರಿಸುತ್ತಿದೆ. ಒಂದು ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 4 ಬಾರಿ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ಪಾರದರ್ಶಕತೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ವಕೀಲರ ಸಂಘ ಹಲವು ದಿನಗಳಿಂದ ಹೋರಾಟ ನಡೆಸುತ್ತಿದೆ. ಅವರ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ವೈ.ಹೆಚ್.ನಾಗರಾಜ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments