Homeರಾಜಕೀಯಬುದ್ದ, ಬಸವ, ಅಂಬೇಡ್ಕರ್ ವಿಚಾರವೇ ನನಗೆ ಆದರ್ಶಪ್ರಾಯ: ಸಿದ್ದರಾಮಯ್ಯ

ಬುದ್ದ, ಬಸವ, ಅಂಬೇಡ್ಕರ್ ವಿಚಾರವೇ ನನಗೆ ಆದರ್ಶಪ್ರಾಯ: ಸಿದ್ದರಾಮಯ್ಯ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 28

ಬುದ್ದನ, ಬಸವ, ಗಾಂಧಿ, ಅಂಬೇಡ್ಕರ್ ಅವರ ವಿಚಾರಗಳು ನನಗೆ ಆದರ್ಶಪ್ರಾಯ. ಕುವೆಂಪು ಅವರು ಹೇಳಿದಂತೆ ಇಡೀ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಅಸಮಾನತೆ ತೊಲಗಿ, ಸಮಾನತೆ ನಿರ್ಮಾಣವಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಶಿಸಿದರು.

ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬುದ್ದ ಬಸವ ಅಂಬೇಡ್ಕರ್ ಗಾಂಧಿ ಆದರ್ಶದಲ್ಲಿ ನಂಬಿಕೆ ಹಾಗೂ ಸಂವಿಧಾನದ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಜಾತಿ, ಮತ, ಧರ್ಮವೆಂದು ಭೇದಭಾವವಿಲ್ಲದೆ ನಾವೆಲ್ಲಾ ಒಂದೇ ಕುಟುಂಬದಂತೆ ಬದುಕಬೇಕು. ಆರ್ಥಿಕವಾಗಿ ಈ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂದರು.

ಗಮನಿಸಿ: ಕೊನೆ ಉಸಿರಿರುವವರೆಗೂ ಕೋಮುವಾದಿಗಳ ವಿರುದ್ದ ಹೋರಾಟ ಮಾಡುತ್ತೇನೆ: ಸಿದ್ದರಾಮಯ್ಯ

ನಾನು ಯಾವತ್ತು ಅಧಿಕಾರಿ ಮತ್ತು ಹಣದ ಹಿಂದೆ ಹೋದವನಲ್ಲಾ, ಆಸ್ತಿ ಮಾಡಬೇಕೆಂದು ಯೋಚಿಸಿದವನೂ ಅಲ್ಲ. ಮತದಾರ ದೇವರುಗಳು ಅಧಿಕಾರಿ ಕೊಟ್ಟಿದ್ದಾರೆ. ನಾನು ರಾಜಕೀಯ ಜೀವನಕ್ಕೆ ಕಾಲಿಟ್ಟು ಸುಮಾರು 50 ವರ್ಷ ಆಗುತ್ತಾ ಬಂದಿದೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಇವತ್ತಿನ ರಾಜಕೀಯದಲ್ಲಿ ಜನಶಕ್ತಿ ಇದ್ದವರು ಮಾತ್ರ ರಾಜಕೀಯವಾಗಿ ಉಳಿಯಲು ಸಾಧ್ಯ. ಅಂತಹ ಅಧಿಕಾರ ಕೊಡುವುದು ಕೂಡ ಜನರೇ ಆಗಿದ್ದಾರೆ ಭಾವುಕರಾದರು.

ನಾನೆಂದು ಕೂಡ ನಾನು ನಂಬಿಕೊಂಡಿರುವಂತಹ ಮೌಲ್ಯಗಳು ಹಾಗೂ ಸಿದ್ದಾಂತಗಳ ಜೊತೆಗೆ ರಾಜೀ ಮಾಡಿಕೊಂಡಿಲ್ಲ. ಈ ದೇಶದ ನೆಲ, ಭಾಷೆ, ನೀರು ವಿಚಾರದಲ್ಲೂ ಯಾವತ್ತು ಕೂಡ ರಾಜಿ ಆಗಿಲ್ಲ. ಅದು ಜನರ ಹಕ್ಕು, ಕರ್ನಾಟಕದ ಹಕ್ಕು. ಪ್ರತಿಯೊಬ್ಬ ಕಟ್ಟಕಡೆಯ ಮನುಷ್ಯನಿಗೂ ಪ್ರಾಥಮಿಕ ಆದ್ಯತೆಯಾದ ಆಹಾರ, ವಸತಿ, ಶಿಕ್ಷಣ ಲಭಿಸಬೇಕು. ಅದಕೊಸ್ಕರನೇ ಸಮಾಜದಲ್ಲಿ ಎಲ್ಲಾ ಜಾತಿ ಧರ್ಮದ ಬಡವರಿಗೆ ಗ್ಯಾರಂಟಿ ಯೋಜನೆ ಮೂಲಕ ಉಚಿತ ಯೋಜನೆಯನ್ನು ಕಲ್ಪಿಸಲಾಗಿದೆ.

ರಾಜ್ಯದಲ್ಲಿ 8 ವರ್ಷಗಳು ಕಾಲ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ವಹಿಸಿಕೊಂಡು ಜನ ಸೇವೆ ಮಾಡಿದ್ದೇನೆ. ಅದಕ್ಕೆ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments