ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 28
ಸಮಾಜದಲ್ಲಿನ ಕೋಮುವಾದಿ ಶಕ್ತಿಗಳೆಲ್ಲವು ಸಂವಿಧಾನ ವಿರುದ್ದವಿದ್ದು, ರಾಜಕಾರಣದಲ್ಲಿ ಕೊನೆ ಉಸಿರಿರುವವರೆಗೂ ನಾನು ಇಂತಹ ಕೋಮುವಾದಿ ಶಕ್ತಿಗಳ ವಿರುದ್ದ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದರು.
ಗುರುವಾರ ಅವರು ರಾಜ ಭವನಕ್ಕೆ ತೆರಳಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗಮನಿಸಿ: ಸೈದ್ದಾಂತಿಕ ರಾಜಕಾರಣಕ್ಕೆ ಕೊನೆಯ ಮೊಳೆ
ಸಂವಿಧಾನದಿಂದಲೇ ನಾನು ಅಧಿಕಾರಿ ಪಡೆದಿರುವುದು. ಸಂವಿಧಾನ ಇಲ್ಲದೆ ಹೋಗಿದ್ದರೆ ನಾನು ವಿದ್ಯಾವಂತನಾಗುತ್ತಿರಲಿಲ್ಲ. ಮುಖ್ಯಮಂತ್ರಿ ಗದ್ದುಗೆ ಏರುತ್ತಿರಲಿಲ್ಲ. ಹಾಗಾಗಿ ನನ್ನ ಉಸಿರಿರುವವರೆಗೂ ಸಂವಿಧಾನಕ್ಕೆ ಯಾರೇ ಧಕ್ಕೆ ತಂದರು. ಅವರ ವಿರುದ್ದ ಹೋರಾಟ ಮಾಡುತ್ತೇನೆ. ರಾಜ್ಯದ ಜನತೆಯ ಸಮಾನತೆಗಾಗಿ ಹೋರಾಟ ಮಾಡುತ್ತೇನೆ ಎಂದರು.
ರಾಜಕೀಯ ಮುಂದಿನ ನಡೆಯ ಕುರಿತು ಮಾಧ್ಯಮಗಾರರಿಗೆ ಉತ್ತರಿಸಿದ ಅವರು, ಹೈ ಕಮಾಂಡ್ ರಾಜ್ಯ ಸಭೆಗೆ ಬನ್ನಿ ಎಂದರು ಆದರೆ ನಾನು ವಿನಮ್ರವಾಗಿ ಆಗುವುದಿಲ್ಲ ಎಂದು ತಿಳಿಸಿದ್ದೇನೆ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲಿ ಇರುತ್ತೇನೆ. ಇನ್ನೂ ಎರಡು ವರ್ಷ ಅಧಿಕಾರ ಇದೆ ನನ್ನ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ಮುಂದಿನ ಮುಖ್ಯಮಂತ್ರಿಯ ಕುರಿತು ಮಾಧ್ಯಮಗಾರರಿಗೆ ಉತ್ತರಿಸಿ, ನಾನು ಸಕ್ರೀಯ ರಾಜಕಾರಣದಲ್ಲಿ ಇದ್ದೆ ಇರುತ್ತೇನೆ. ನನಗೆ ರಾಜೀನಾಮೆ ನೀಡಲು ಹೈ ಕಮಾಂಡ್ ಯಾವುದೇ ಒತ್ತಡ ಹಾಕಿಲ್ಲ. ನಾನೇ ಮನಪೂರ್ವಕವಾಗಿ ರಾಜೀನಾಮೆ ಕೊಟ್ಟಿದ್ದೇನೆ. ಶಾಸಕಾಂಗ ಸಭೆ ಮತ್ತು ಹೈ ಕಮಾಂಡ್ ನಿರ್ಧಾರ ಮಾಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ತಿಳಿಯುತ್ತದೆ ಎಂದರು.
