Homeಜಿಲ್ಲೆಬಲ್ಕಿಶ್ ಬಾನುಗೆ ಸಚಿವ ಸ್ಥಾನ ನೀಡಿ: ಸ್ಟೆಲ್ಲಾ ಮಾರ್ಟಿನ್ ಆಗ್ರಹ

ಬಲ್ಕಿಶ್ ಬಾನುಗೆ ಸಚಿವ ಸ್ಥಾನ ನೀಡಿ: ಸ್ಟೆಲ್ಲಾ ಮಾರ್ಟಿನ್ ಆಗ್ರಹ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.2

ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು ಅವರಿಗೆ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷೆ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಸ್ಟೆಲ್ಲಾ ಮಾರ್ಟಿನ್ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಬಲ್ಕಿಶ್ ಬಾನು ಅವರು ಕೇವಲ ರಾಜಕೀಯ ನಾಯಕಿಯಲ್ಲ. ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜನಸೇವೆ ಮಾಡಿದ ಅನುಭವಿ ಆಡಳಿತಗಾರ್ತಿ. ಮಹಿಳೆಯರ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಬಗ್ಗೆ ಅವರಿಗೆ ಅಪಾರ ಅನುಭವಿದೆ ಎಂದಿದ್ದರೆ.
ಮಲೆನಾಡು, ಮಧ್ಯ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅವರೊಬ್ಬರೇ ಮಹಿಳಾ ಶಾಸಕಿಯಾಗಿದ್ದು, ಅಂತಹ ಜವಾಬ್ದಾರಿಯುತ ಸ್ಥಾನ ನಿಭಾಯಿಸಿದ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಮಹಿಳಾ ಪ್ರಾತಿನಿಧ್ಯಕ್ಕೆ ಮಾಡಿದ ಅನ್ಯಾಯವಾಗುತ್ತದೆ” ಎಂದು ಸ್ಟೆಲ್ಲಾ ಮಾರ್ಟಿನ್ ಹೇಳಿದ್ದಾರೆ.

ಮಹಿಳೆಯರಿಗೆ ಸಮಾನ ಸ್ಥಾನ-ಮಾನ ಸಿಗಬೇಕು. 50% ಜನಸಂಖ್ಯೆ ಹೊಂದಿರುವ ಮಹಿಳಾ ಸಮುದಾಯಕ್ಕೆ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಪ್ರಾತಿನಿಧ್ಯ ಅತ್ಯವಶ್ಯ. ಬಲ್ಕಿಶ್ ಬಾನು ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ನಿಜವಾದ ಬದ್ಧತೆ ತೋರಿಸಲಿ ಎಂದರು.

ಬಲ್ಕಿಶ್ ಬಾನು ಅವರ ನಾಯಕತ್ವ, ಜನಪರ ನಿಲುವು, ಆಡಳಿತ ಅನುಭವ ಸರ್ಕಾರಕ್ಕೆ ಬಹಳಷ್ಟು ಶಕ್ತಿ ತುಂಬಲಿದೆ. ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸಮಸ್ಯೆಗಳನ್ನು ಸಚಿವ ಸಂಪುಟದ ಮುಂದೆ ದಿಟ್ಟವಾಗಿ ಮಂಡಿಸುವ ಸಾಮರ್ಥ್ಯ ಅವರಲ್ಲಿದೆ ಹಾಗಾಗಿ ಅವರಿಗೆ ಸಚಿವೆ ಸ್ಥಾನ ನೀಡಬೇಕು ಎಂದು ಅಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments