Homeಜಿಲ್ಲೆಜಿ.ಪರಮೇಶ್ವರ್‌ಗೆ ಡಿಸಿಎಂ ಸ್ಥಾನ ನೀಡಿ: ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹ

ಜಿ.ಪರಮೇಶ್ವರ್‌ಗೆ ಡಿಸಿಎಂ ಸ್ಥಾನ ನೀಡಿ: ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹ

Spread the love

ಶಿವಮೊಗ್ಗ ಟೆಲೆಕ್ಸ್, ಜೂ.2

ಡಾ.ಜಿ.ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಶಿವಮೊಗ್ಗ ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹಿಸಿದರು.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಛಲವಾದಿ ಮಹಾಸಭಾದ ಉಪಾಧ್ಯಕ್ಷೆ ಲಲಿತಮ್ಮ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮಾಜದ ಸುಮಾರು 18 ಜನ ಶಾಸಕರಿದ್ದಾರೆ. ಇವರ ಪೈಕಿ ಕನಿಷ್ಠ ಐದರಿಂದ ಆರು ಶಾಸಕರುಗಳಿಗೆ ನೂತನ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಬೇಕು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ ಎಂದರು.

ಗಮನಿಸಿ: ಮೊದಲ ಹಂತದಲ್ಲಿ ಶಿವಮೊಗ್ಗಕ್ಕಿಲ್ಲ ಸಚಿವ ಸ್ಥಾನ?!

ಡಾ.ಜಿ.ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರ ಜೊತೆಗೆ ಡಾ. ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಇವರಿಗೆ ಉತ್ತಮ ಖಾತೆಗಳನ್ನ ನೀಡಬೇಕು ಹಾಗೆಯೇ ನಮ್ಮ ಸಮಾಜದ ಶಾಸಕರಾದ ಅಭಯ ಪ್ರಸಾದ್, ನರೇಂದ್ರ ಸ್ವಾಮಿ, ಎ.ಆರ್.ಕೃಷ್ಣಮೂರ್ತಿ, ಆನೇಕಲ್‌ಶಿವಣ್ಣ ಇವರುಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು  ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಎಸ್.ಕುಮಾರಸ್ವಾಮಿ, ಸಮಾಜದ ಪ್ರಮುಖರಾದ ಹೆಚ್.ಸಿದ್ದಪ್ಪ, ಕಾಂತರಾಜ್, ಹನುಮಂತಪ್ಪ, ರೇವಣ್ಣ, ಬಸವರಾಜ, ಗಣೇಶ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments