Homeಕ್ರೀಡೆರಾಜ್ಯ ಮಟ್ಟದ ಪೆಂಕಾಕ್ ಸಿಲಾಟ್ ಕ್ರೀಡೆ-11 ಪದಕ ಮುಡಿಗೇರಿಸಿಕೊಂಡ ಪಟುಗಳು

ರಾಜ್ಯ ಮಟ್ಟದ ಪೆಂಕಾಕ್ ಸಿಲಾಟ್ ಕ್ರೀಡೆ-11 ಪದಕ ಮುಡಿಗೇರಿಸಿಕೊಂಡ ಪಟುಗಳು

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.9:

ರಾಜ್ಯ ಮಟ್ಟದ ಪೆಂಕಾಕ್ ಸಿಲಾಟ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಮೂರು ಚಿನ್ನದ ಪದಕ ಸೇರಿದಂತೆ 11 ಪದಕಗಳನ್ನು ಪಡೆದು ಕೀರ್ತಿ ತಂದಿದ್ದಾರೆ.

ಬೆಂಗಳೂರಿನ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪೆಂಕಾಕ್ ಸಿಲಾಟ್ ಅಸೊಸಿಯೆಷನ್, ದೊಡ್ಡವಾಡ ಸ್ಪೋರ್ಟ್ಸ್ ಇವರ ಸಂಯುಕ್ತಾ ಆಶ್ರಯದಲ್ಲಿ 12 ನೇ ಕರ್ನಾಟಕ ರಾಜ್ಯ ಪೆಂಕಾಕ್ ಸಿಲಾಟ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಾಗಿದ್ದು, ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಮಕ್ಕಳು ಮೂರು ಚಿನ್ನ, ಎರಡು ಬೆಳ್ಳಿ, ಆರು ಕಂಚು ಪದಕವನ್ನು ಪಡೆದು ಸಾಧನೆ ಮಾಡಿದ್ದಾರೆ.

ಗಮನಿಸಿ: ಸಚಿವ ಸಂಪುಟ ವಿಸ್ತರಣೆ-ಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಮಧು ಬಂಗಾರಪ್ಪ

ತ್ರಿಶಿಕಾ ಜಿ. ಭಾರ್ಗವ್, ಗೌರೀಶ್.ಸಿ, ಧನ್ವಿತ್.ಎ ಚಿನ್ನದ ಪದಕ ಪಡೆದರೆ. ಗೌತಮ್ ದಿನೇಶ್, ವೀನಿತ್.ಆರ್.ವಿ ಬೆಳ್ಳಿಯ ಪದಕ ಹಾಗೂ ಅರ್ಜುನ್.ಜಿ, ಜಿಶಾಂತ, ಕೆ.ಜೆ, ಪೃಥ್ವಿಕ್.ಜಿ, ಸಿ.ವಿರೇಶ್, ಶೇಕ್ ಕಮ್ರಾನ್, ಗುರು ರಾಘವೇಂದ್ರ ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಇವರೆಲ್ಲರೂ ಬೇರೆ ಬೇರೆ ವಿಭಾಗಗಳಲ್ಲಿ ಪದಕಗಳನ್ನು ಪಡೆದಿದ್ದು, ಪದಕ ಪಡೆದ ಕ್ರೀಡಾಪುಟುಗಳಿಗೆ ಶಿವಮೊಗ್ಗ ಜಿಲ್ಲಾ ಪೆಂಕಾಕ್ ಸಿಲಾಟ್ ಅಸೋಸಿಯೆಷನ್ ಅಧ್ಯಕ್ಷ ಕುಮಾರ್ ವಿ.ನಾಯ್ಡು, ಉಪಾಧ್ಯಕ್ಷ ಚಂದನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತುದಾರ ಚಂದ್ರಕಾತ್ ಜಿ.ಭಟ್ ಮತ್ತು ತರಬೇತುದಾರ ಜನಾರ್ಧನ್ ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments