Homeಜಿಲ್ಲೆಅಡ್ಡ ಮತದಾನ, ತಾಯಿಗೆ ಮಾಡಿದ ದ್ರೋಹ: ಡಿ.ಎಸ್.ಅರುಣ್

ಅಡ್ಡ ಮತದಾನ, ತಾಯಿಗೆ ಮಾಡಿದ ದ್ರೋಹ: ಡಿ.ಎಸ್.ಅರುಣ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ. 19

ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಶಾಸಕರಿಂದ ಅಡ್ಡ ಮತದಾನ ನಡೆದಿದ್ದು, ಇದು ತಾಯಿಗೆ ಮಾಡಿದ ದ್ರೋಹವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಿಡಿಕಾರಿದರು.

ಶುಕ್ರವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನಕ್ಕೆ ನನ್ನ ವಿರೋಧವಿದೆ. ಆದರೆ ಕೆಲವು ಶಾಸಕರು ಪಕ್ಷದ ಮತ್ತು ತಮ್ಮ ಆತ್ಮಸಾಕ್ಷಿಯನ್ನು ಮೀರಿ ಮತದಾನ ಮಾಡಿದ್ದಾರೆ ಎಂದರು.

ಗಮನಿಸಿ: ಜುಲೈ 11 ರಂದು ಎರಡನೇ ರಾಷ್ಟ್ರೀಯ ಲೋಕ್ ಅದಾಲತ್

ರಾಜಕಾರಣದಲ್ಲಿ ಪಕ್ಷಗಳು ನಿಂತ ನೀರಲ್ಲ. ಬಿಜೆಪಿ ಪಕ್ಷವೂ ದೇಶದ 21 ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಮುಂದೆ ಕರ್ನಾಟಕದಲ್ಲೂ ಅಧಿಕಾರವನ್ನು ಪಡೆಯುತ್ತೇವೆ. ನಮ್ಮ ಪಕ್ಷದ ನಾಯಕತ್ವವನ್ನು ಒಪ್ಪದ ಶಾಸಕರು ಪಕ್ಷವನ್ನು ಬಿಟ್ಟು ಹೋಗಲಿ. ಇದನ್ನು ನಾನು ಯಾವುದೇ ಅಂಚಿಕೆ ಇಲ್ಲದೆ ಬಹಿರಂಗವಾಗಿ ಹೇಳುತ್ತೇನೆ. ಆದರೆ ಪಕ್ಷದಲ್ಲಿರುವ ಕಾರ್ಯಕರ್ತರನ್ನು ಆಳು ಮಾಡಬೇಡಿ. ನಮಗೆಲ್ಲಾ ಪಕ್ಷವನ್ನು ಕಟ್ಟಿ ಬೆಳೆಸುವ ತಾಕತ್ತು ಇನ್ನೂ ಇದೆ. ಈಗಾಗಲೇ 1 ಲಕ್ಷ ಕಾರ್ಯಕರ್ತರು ನಮ್ಮ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕಾಗಿ ದುಡಿಯಲು ಸಿದ್ದರಾಗಿದ್ದಾರೆ. ಆತ್ಮಾವಲೋಕನ ಇಲ್ಲದ ಶಾಸಕರು ನಮಗೆ ಅಗತ್ಯವಿಲ್ಲ ಎಂದು ಕುಟುಕಿದರು.

ಪಕ್ಷದ ರಾಜ್ಯಾಧ್ಯಕ್ಷರನ್ನು ನಮ್ಮ ಹೈಕಮಾಂಡ್ ನೇಮಕ ಮಾಡಿರುವುದು. ಅದರ ಬಗ್ಗೆ ತಕರಾರು ಇದ್ದರೆ ಹೈಕಮಾಂಡ್‌ಗೆ ತಿಳಿಸಲಿ. ಆದರೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಪಕ್ಷದ ಸಂಘಟನೆಗಾಗಿ ಉತ್ತಮ ಕಾರ್ಯ ಮಾಡುತ್ತಿದ್ದು, ರಾಜ್ಯಗಳನ್ನು ಸುತ್ತಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments