Homeರಾಜ್ಯರಾಜ್ಯ ಪತ್ರಕರ್ತೆ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ರಾಜ್ಯ ಪತ್ರಕರ್ತೆ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ. 24

ಪ್ರತಿ ವರ್ಷ ಕರ್ನಾಟಕ ಪತ್ರಕರ್ತೆಯರ ಸಂಘವು ನೀಡುವ ವಾರ್ಷಿಕ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ 2025-2026 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ಹಿರಿಯ ಪತ್ರಕರ್ತೆ, ಇಂಡಿಯನ್ ಎಕ್ಸ್ ಪ್ರೆಸ್ ನಿವೃತ್ತ ಸುದ್ದಿ ಸಂಪಾದಕಿ ಉತ್ತರಾಕುಮಾರಿ ಹಾಗೂ ಸಂಯಕ್ತ ಕರ್ನಾಟಕ, ಹುಬ್ಬಳ್ಳಿ  ಬ್ಯುರೋದಲ್ಲಿ ಹಿರಿಯ ಉಪ ಸಂಪಾದಕಿ ಆಗಿರುವ ತನುಜಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನೂ ಪತ್ರಿಕೋದ್ಯಮ ಕ್ಷೇತ್ರದ ಹೊರತಾಗಿ ವಿಶಿಷ್ಟ ಸಾಧಕಿಯರಿಗೆ ನೀಡುವ ಪ್ರಶಸ್ತಿಗಾಗಿ ಮಹಿಳಾ ವಲಸೆ ಕಾರ್ಮಿಕರ ಹಕ್ಕು ಮತ್ತು ಸಂಘಟನೆಗಾಗಿ ದುಡಿಯುತ್ತಿರುವ ಇಂಡಿ ಮೂಲದ ಡಾ. ಭುವನೇಶ್ವರಿ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

 

ಜುಲೈ ಎರಡನೇ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಆರ್. ಪೂರ್ಣಿಮಾ ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments