Homeಜಿಲ್ಲೆಅಂತ್ಯ ಸಂಸ್ಕಾರ ಯೋಜನೆ ಮರು ಜಾರಿ ಮಾಡಿ; ಕಲ್ಲೂರು ಮೇಘರಾಜ್

ಅಂತ್ಯ ಸಂಸ್ಕಾರ ಯೋಜನೆ ಮರು ಜಾರಿ ಮಾಡಿ; ಕಲ್ಲೂರು ಮೇಘರಾಜ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.30

ರಾಜ್ಯ ಸರ್ಕಾರವು ಅಂತ್ಯ ಸಂಸ್ಕಾರ ಯೋಜನೆಯನ್ನು ರದ್ದುಪಡಿಸಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಇದನ್ನು ಮರು ಜಾರಿಗೊಳಿಸಿಸಬೇಕು. ಈ ಯೋಜನೆಯಿಂದ ರಾಜ್ಯದ ಬಡ ಕುಟುಂಬಗಳಿಗೆ ಸಹಾಯವಾಗುತ್ತದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಆಗೀನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು 2006 ರಲ್ಲಿ ಜಾರಿಯಲ್ಲಿದ್ದ ಅಂತ್ಯ ಸಂಸ್ಕಾರ ಯೋಜನೆಯನ್ನು ರದ್ದು ಮಾಡುವ ಮೂಲಕ ಬಡ ಕುಟಂಬದ ಮೇಲೆ ಗದಾಪ್ರಹಾರ ನಡೆಸಿದೆ ಎಂದರು.

ಗಮನಿಸಿ: ಎಸ್‌ಐಆರ್ ನಿಂದ ಕಾಂಗ್ರೆಸ್‌ಗೆ ಓಟ್ ಬ್ಯಾಂಕ್ ಕೈ ತಪ್ಪುವ ಆತಂಕ:ಕೆ ಎಸ್ ಈಶ್ವರಪ್ಪ

ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಬಡ ಕುಟುಂಬದ ಯಾವುದೇ ಸದಸ್ಯರು ಮರಣ ಹೊಂದಿದರೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸುವ ವಾರಸುದಾರರು/ಅಂತ್ಯಕ್ರಿಯೆ ನೆರವೇರಿಸುವ ಜವಾಬ್ದಾರಿ ಹೊತ್ತ ಸದಸ್ಯರಿಗೆ 5 ಸಾವಿರ ರೂಪಾಯಿಗಳ ಆರ್ಥಿಕ ಸಹಾಯ ನೀಡಲಾಗುತ್ತಿತ್ತು. ಆದರೆ ಈ ಯೋಜನೆಯು ಆರ್ಥಿಕವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆಂದು ಸೆ.1 2021 ಕ್ಕೆ ಅನ್ವಯವಾಗುವಂತೆ ಏಕಾಏಕಿ ಬಿಜೆಪಿ ಸರ್ಕಾರ ರದ್ದುಗೊಳಿತು.

ರಾಜ್ಯದಲ್ಲಿ ಕಂದಾಯ ಇಲಾಖೆಯಿಂದ ಜಾರಿಗೊಳಿಸಲಾಗಿದ್ದ ಈ ಅಂತ್ಯ ಸಂಸ್ಕಾರ ಯೋಜನೆ ಪ್ರಯೋಜನ ಪಡೆಯಲು ಫಲಾನುಭವಿಗಳು ಮೃತರ ಮರಣ ದೃಢೀಕರಣಪತ್ರ, ಬಿಪಿಎಲ್ ಕಾರ್ಡ್ ಅಂತ್ಯ ಸಂಸ್ಕಾರ ನೆರವೇರಿಸುವ ವಾರಸುದಾರರ ಬ್ಯಾಂಕ್ ಪಾಸ್‌ಬುಕ್, ಮೃತರ ಆಧಾರ್ ಕಾರ್ಡ್ ಹಾಗೂ ಮೃತರ ಅಂತ್ಯ ಸಂಸ್ಕಾರ ನೆರವೇರಿಸುವ ಫಲಾನುಭವಿಗೂ ಹಾಗೂ ಮೃತರಿಗೂ ಇರುವ ಸಂಬಂಧದ ಬಗ್ಗೆ ವಂಶವೃಕ್ಷ ದಾಖಲೆಗಳನ್ನು ನೀಡಿ, ಮೂರು ತಿಂಗಳೊಳಗೆ ಅರ್ಜಿ ಹಾಕಿದರೆ ಸಂಬಂಧಪಟ್ಟ ತಹಶೀಲ್ದಾರರು ಈ ಯೋಜನೆಯ ಅಡಿಯಲ್ಲಿ 5 ಸಾವಿರ ಸಹಾಯಧನ ಮಂಜೂರು ಮಾಡುತ್ತಿದ್ದರು. ಈಗ ಅದನ್ನು ರದ್ದುಗೊಳಿಸಲಾಗಿದ್ದು, ಇದನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಪರಿಗಣಿಸಿ ಮಾನವೀಯ ನೆಲೆಯಲಿ ರಾಜ್ಯದ 31 ಜಿಲ್ಲೆಗಳಲ್ಲೂ ಈ ಯೋಜನೆಯನ್ನು ಮರುಜಾರಿಗೊಳಿಸಿ ಬಡ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಹೆಚ್.ಎಂ.ಸAಗಯ್ಯ, ಶಿವಣ್ಣ ಎಸ್., ಸಂಕ್ರಾನಾಯ್ಕ, ಆಲೀಂಖಾನ್, ಬಸವರಾಜ್ ಕೆ., ಚಂದ್ರಪ್ಪ, ಎಲ್. ಆದಿಶೇಷ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments