Homeಜಿಲ್ಲೆಎಸ್‌ಐಆರ್ ಉದ್ದೇಶವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ; ಎನ್.ಕೆ.ಜಗದೀಶ್

ಎಸ್‌ಐಆರ್ ಉದ್ದೇಶವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ; ಎನ್.ಕೆ.ಜಗದೀಶ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.11

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಸ್‌ಐಆರ್ ನಲ್ಲಿ ಗೊಂದಲ ಸೃಷ್ಟಿ ಮಾಡಲು ಮುಂದಾಗಿದ್ದು, ಈ ಎಸ್‌ಐಆರ್ ನ ಮೂಲ ಉದ್ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಆರೋಪಿಸಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದದ್ಯಾಂತ ಎಸ್‌ಐಆರ್ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದರ ಬಗ್ಗೆ ಗೊಂದಲ ಸೃಷ್ಟಿ ಆಗುತ್ತಿದೆ. ಅದು ರಾಜ್ಯ ಸರ್ಕಾರದಿಂದಲೆ ನಡೆಯುತ್ತಿದೆ ಎಂದು ಕುಟುಕಿದರು.

ಗಮನಿಸಿ: ಮುಗಿಲ ಬೆಳಕಿಗೆ ತೆರೆದುಕೊಂಡ “ಕಾಲಡಿಯ ಕಣ್ಣು” – ದಲಿತ ಚಳವಳಿಯ ಕುದಿಕುಲುಮೆಯಲ್ಲಿ ಎದ್ದು ಬಂದ  ಸಿ.ಎಂ.ಮುನಿಯಪ್ಪ ಆತ್ಮಚರಿತ್ರೆ

ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್ ಆರಂಭ ಮಾಡಿದ ಸಂದರ್ಭದಿಂದ ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವು ರೀತಿ ನಡೆದುಕೊಳ್ಳುತ್ತಿದೆಯೆಂದು ರಾಜ್ಯ ಜನರು ನೋಡುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ಮತದಾರರಿಗೆ ಎಸ್‌ಐಆರ್ ಫಾರಂ ಅನ್ನು 2002 ರ ಮತಪಟ್ಟಿಯ ಮೂಲಕ ಯಾವ ರೀತಿ ತುಂಬಬೇಕೆಂಬುದನ್ನು ಸಹ ತಿಳಿಸಿದೆ. ಆದರೆ ಈಗ ಕಾಂಗ್ರೆಸ್ ಹೊಸ ನಿಯಮವನ್ನು ಮಾಡಲು ಹೊರಟ್ಟಿದ್ದು, ಇದು ಸುಗಮವಾಗಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ದಾರಿ ತಪ್ಪಿಸುವ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿರುವ ನಿವಾಸಿಗಳಿಗೆ ಖಾಯಂ ವಾಸ ದೃಢಿಕರಣ ಪತ್ರ ಕೊಡಲು ಕಾಂಗ್ರೆಸ್ ಮುಂದಾಗಿದ್ದು, ಇದರ ಹಿಂದೆ ಎಸ್‌ಐಆರ್ ಪ್ರಕ್ರಿಯೆಯನ್ನು ದುರ್ಬಲ ಮಾಡಲು ಹುನ್ನಾರ ಇದೆ. ಬೇರೆ ದೇಶದ ನಾಗರೀಕರು ಮದುವೆಯಾಗಿ ಇಲ್ಲಿ ವಾಸಿಸುತ್ತಿದ್ದರೆ ಅವರಿಗೂ ಖಾಯಂ ವಾಸಿ ದೃಢೀಕರಣ ಪತ್ರ ಕೊಡುತ್ತಿರುವುದು ಅಕ್ರಮವಾಗಿದೆ ಎಂದರು.

ಮಾಜಿ ವಿಧಾನನ ಪರಿಷತ್ ಸದಸ್ಯ ಆರ್.ಕೆ. ಸಿದ್ರಾಮಣ್ಣ ಮಾತನಾಡಿ, ಕೇಂದ್ರ ಚುನಾವಣಾ ಆಯೋಗವು ಪಡೆಯಿಂದ ಎಸ್‌ಐಆರ್ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ. ಆದೆ ರಾಜ್ಯ ಸರ್ಕಾರದ ಈ ನಿರ್ಣಯ ಇದಕ್ಕೆ ಅಡ್ಡಿ ಮಾಡುತ್ತಿದೆ. ಪರಿಶೀಲನೆ ಮಾಡದೆ ಕೆಳದವರಿಗೆಲ್ಲಾ ಖಾಯಂ ವಾಸಿ ದೃಢೀಕರಣ ಪತ್ರ ಕೊಡ್ತಾ ಇದಾರೆ. ಬೇರೆ ದೇಶದಲ್ಲಿ ಇಲ್ಲಿ ವಾಸ ಮಾಡುತ್ತಿರುವವರೆಗು ಕೊಡ್ತಾ ಇದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಇಲಾಖೆಗೆ ಪತ್ರವನ್ನು ಬರೆದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ದತ್ತಾತ್ರೆ, ಹರಿಕೃಷ್ಣ, ಚಂದ್ರಶೇಖರ್ ಇನ್ನಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments