ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.11
ಮತದಾನ ವಿಚಾರದಲ್ಲಿ ಪಶ್ಚಿಮ ಬಂಗಾಳ ಮತ್ತು ಇನ್ನಿತರ ರಾಜ್ಯಗಳಿಗೆ ಬಂದಂತಹ ಪರಿಸ್ಥಿತಿಯನ್ನು ಕರ್ನಾಟಕಕ್ಕೆ ಬರಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಶನಿವಾರ ಮಾಧ್ಯಮಗಾರೊಂದಿಗೆ ಮಾತನಾಡಿ, ಎಸ್‌ಐಆರ್‌ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಎಸ್‌ಐಆರ್ ಏನಿದ್ದರೂ ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು. ಆದರೆ ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯ ಜನ ಸಾಮಾನ್ಯರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಲ್ಲರಿಗೂ ಮತದಾನ ಹಕ್ಕು ಸಿಗಬೇಕು ಎಂಬ ಉದ್ದೇಶ ಹೊಂದಿದೆ ಎಂದರು.
ಗಮನಿಸಿ: ಎಸ್‌ಐಆರ್ ಉದ್ದೇಶವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ; ಎನ್.ಕೆ.ಜಗದೀಶ್
ಮತದಾರರ ಪರವಾಗಿ ಖಾಯಂ ವಾಸಿ ದೃಢೀಕರಣ ಪತ್ರ ನೀಡುತ್ತಿರುವುದು ತಪ್ಪಾ. ಮತದಾರರಿಗೆ ಅನುಕೂಲವಾಗಲೆಂದು ಈ ಕೆಲಸ ಮಾಡಲಾಗುತ್ತಿದೆ. ಪ್ರತಿಪಕ್ಷ ಮೆಚ್ಚಬೇಕೆಂದು ನಮಗೆನಿಲ್ಲಾ. ಬಡವರಿಗೆ ಮತದಾತನ ಹಕ್ಕು ಸಿಗಬೇಕು ಆ ಉದ್ದೇಶದಿಂದ ಸರ್ಕಾರವೇ ಮುಂದೆ ನಿಂತು ಈ ಕೆಲಸ ಮಾಡುತ್ತಿದೆ. ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಮಾಡಲಿ, ಟೀಕೆ ಮಾಡದಿದ್ದರೆ ರಾಜಕೀಯದಲ್ಲಿ ಅವರಿಗೆ ಬದ್ದತೆ ಇರುವುದಿಲ್ಲ. ನಮ್ಮ ಕಾರ್ಯ ಜನ ನೋಡುತ್ತಿದ್ದಾರೆ. ಅವರೇ ನಮ್ಮನ್ನು ಮೆಚ್ಚುತ್ತಾರೆ, ಬೆಂಬಲಿಸುತ್ತಾರೆ ಎಂದರು.
