Homeಜಿಲ್ಲೆಈಶ್ವರಪ್ಪರ ಬಗ್ಗೆ ಮಾತನಾಡಲು ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ನೈತಿಕತೆ ಇಲ್ಲ

ಈಶ್ವರಪ್ಪರ ಬಗ್ಗೆ ಮಾತನಾಡಲು ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ನೈತಿಕತೆ ಇಲ್ಲ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.13

ಈಶ್ವರಪ್ಪನವರು ಇಂದಿಗೂ ಬಿಜೆಪಿ ಪಕ್ಷದ ನಿಷ್ಠಾವಂತ ನಾಯಕರಾಗಿದ್ದು, ಅವರ ರಾಷ್ಟ್ರಭಕ್ತಿ, ಹಿಂದೂತ್ವ ಮತ್ತು ರಾಜಕೀಯ ಹೋರಾಟದ ಹಾದಿಯ ಬಗ್ಗೆ ಮಾತನಾಡಲು ಶಾಸಕ ಬೇಳೂರು ಗೋಪಾಕೃಷ್ಣರಿಗೆ ಯಾವ ನೈತಿಕತೆ ಇಲ್ಲ ಎಂದು ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್ ಕಿಡಿಕಾರಿದರು.

ಅವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ರಾಷ್ಟ್ರಭಕ್ತ ಬಳಗವು ತೀವ್ರವಾಗಿ ಖಂಡಿಸಿದೆ. ಕೂಡಲೇ ಬೇಳೂರು ಗೋಪಾಲಕೃಷ್ಣ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗಮನಿಸಿ: ಅಣುಸ್ಥಾವರ ಯೋಜನೆ ಸ್ಥಗಿತ- ಜನರಿಗೆ ಬೇಳೂರು ತಪ್ಪು ಮಾಹಿತಿ; ಹಾಲಪ್ಪ

ಈಶ್ವರಪ್ಪನವರ ರಾಜಕೀಯ ಜೀವನವೇ ನೆಲೆಗಟ್ಟಿನಲ್ಲಿ ಬೆಳೆದು ಬಂದಿದೆ. ರಾಷ್ಟ್ರ ಪ್ರೇಮಿ ಮುಸ್ಲಿಮರನ್ನು ಅವರು ಎಂದಿಗೂ ವಿರೋಧಿಸುವುದಿಲ್ಲ. ಆದರೆ ಧರ್ಮವಿರೋಧಿಗಳು ಯಾರೇ ಆದರೂ ಅವರನ್ನು ವಿರೋಧಿಸದೆ ಬಿಡುವುದಿಲ್ಲ. ಬಹುಶಃ ಹಿಂದೂತ್ವವಾದಿಗಳನ್ನು ಟಾರ್ಗೆಟ್ ಮಾಡಿ ಮಾತನಾಡಿದರೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಕನಸಿನಿಂದ ಬೇಳೂರು ಅವರು ಈಶ್ವರಪ್ಪನವರ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಮಾತನಾಡಿರಬಹುದು ಎಂದು ಅವರು ಆರೋಪಿಸಿದರು.

ಈಶ್ವರಪ್ಪನವರು ರಾಜ್ಯದಲ್ಲೇ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಅವರು ಸಾವಿರಾರು ಕಾರ್ಯಕರ್ತರನ್ನು ಬೆಳೆಸಿ. ನಾಯಕರನ್ನಾಗಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕರ್ತರಿಗೆ ಟಿಕೇಟ್ ನೀಡಿ ಗೆಲ್ಲಿಸಿದ್ದಾರೆ. ಜಿ.ಪಂ. ಸದಸ್ಯರನ್ನಾಗಿ, ಮೇಯರ್, ಉಪ ಮೇಯರ್, ನಿಗಮಗಳ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬೇಳೂರು ಯಾರನ್ನು ಬೆಳೆಸಿದ್ದಾರೆ. ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಇದೇ ವೇಳೆ ಶರಾವತಿ ಪಂಪ್ ಹೌಸ್ ಯೋಜನೆಯನ್ನು ಈಶ್ವರಪ್ಪನವರು ಯಾವುದೇ ರಾಜಕೀಯ ಲಾಭಕ್ಕಾಗಿ ವಿರೋಧಿಸಿಲ್ಲ. ಈ ಯೋಜನೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಮನಗಂಡು ಹೋರಾಟದ ಹಾದಿ ತುಳಿದಿದ್ದಾರೆ. ಮತ್ತು ಈ ಯೋಜನೆಗೆ ಸಾಗರ ಕ್ಷೇತ್ರದ ಜನತೆಯೂ ಬೆಂಬಲ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಶ್ವಾಸ್ ಮಾತನಾಡಿ, ಗೋಪಾಲಕೃಷ್ಣ ಅವರು ತಮ್ಮ ಕ್ಷೇತ್ರದ ಜನರ ಜೊತೆ ನಿಲ್ಲುತ್ತಾರೋ ಅಥವಾ ಯೋಜನೆಯ ಪರವಾಗಿ ನಿಲ್ಲುತ್ತಾರೋ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಸಾವಿರಾರು ಕೋಟಿ ವೆಚ್ಚದ ಈ ಯೋಜನೆಯಿಂದ ತಮಗೆ ಏನಾದರೂ ಲಾಭದ ನಿರೀಕ್ಷೆ ಇರಬಹುದೇನೋ ಎಂಬ ಅನುಮಾನವನ್ನು ಸಾಗರದ ಜನತೆಯೇ ವ್ಯಕ್ತಪಡಿಸಿದ್ದಾರೆ ಎಂದರು.

ಇಂತಹ ಹೋರಾಟಗಳಲ್ಲಿ ಈಶ್ವರಪ್ಪನವರೇ ಯಾವಾಗಲು ಮುಂಚೂಣಿಯಲ್ಲಿ ಇರುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದಂತಹ ನಾಯಕರ ರಾಜಕೀಯ ನೆರಳಿನಲ್ಲಿ ಬೆಳೆದು ಬಂದಿರುವ ಬೇಳೂರು ಅವರು ಇನ್ನು ಮುಂದಾದರೂ ದುರುದ್ದೇಶದಿಂದ ಮಾತನಾಡದೆ ಸಮಚಿತ್ತದಿಂದ ಹೇಳಿಕೆ ನೀಡಬೇಕೆಂದು ಈ ಮೂಲಕ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗ ಭಕ್ತ ಬಳಗದ ಪ್ರಮುಖರಾದ, ಲಕ್ಷೀ ಶಂಕರ್ ನಾಯ್ಕ್,ರಾಜು,ಶಂಕರ್ ನಾಯ್ಕ್, ಕೆಂಪಮ್ಮ ಸುರೇಶ್ ಪ್ರಮೋದ್, ಮತ್ತು ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments