Homeಜಿಲ್ಲೆಅಣುಸ್ಥಾವರ ಯೋಜನೆ ಸ್ಥಗಿತ- ಜನರಿಗೆ ಬೇಳೂರು ತಪ್ಪು ಮಾಹಿತಿ; ಹಾಲಪ್ಪ

ಅಣುಸ್ಥಾವರ ಯೋಜನೆ ಸ್ಥಗಿತ- ಜನರಿಗೆ ಬೇಳೂರು ತಪ್ಪು ಮಾಹಿತಿ; ಹಾಲಪ್ಪ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.13

ಸರ್ಕಾರದ ಯಾವುದೇ ಅಧೀಕೃತ ಆದೇಶ ಬಂದಿಲ್ಲ. ಅದಾಗಲೇ ಶಾಸಕ ಬೇಳೂರು ಗೋಪಾಲಕೃಷ್ಣ ಬೇಸೂರು ಅಣು ವಿದ್ಯುತ್ ಸ್ಥಾವರದ ಯೋಜನೆಯ ಸ್ಥಗಿತದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿಕಾರಿದರು.

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬೇಸೂರು ಅಣು ವಿದ್ಯುತ್ ಸ್ಥಾವರ ಆಗಲ್ಲ. ಸರ್ಕಾರಕ್ಕೂ ಈ ಯೋಜನೆಯ ವಿರುದ್ದ ಇದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಈ ಯೋಜನೆ ನಡೆಯುವುದಿಲ್ಲವೆಂದು ಆದೇಶ ನೀಡಿದೆ ಎಂದಿದ್ದಾರೆ. ಬೇಳೂರು ಹೇಳುವುದು ನಿಜವಾಗಿದ್ದರೆ ನಮ್ಮೆಲ್ಲರಿಗೂ ಸಂತೋಷವೇ ಆದರೆ ಈ ಬಗ್ಗೆ ಅಧಿಕೃತವಾಗಿ ಆದೇಶವನ್ನು ಹೊರಡಿಸುವ ಸರ್ಕಾರವೇ ಮೌನವಾಗಿದ್ದು, ಶಾಸಕರು ಜನರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.

ಗಮನಿಸಿ: ಈಶ್ವರಪ್ಪರ ಬಗ್ಗೆ ಮಾತನಾಡಲು ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ನೈತಿಕತೆ ಇಲ್ಲ

ಬೇಸೂರು ಅಣುಸ್ಥಾವರ ಮಾತ್ರವಲ್ಲ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ವಿರೋಧವಿದೆ. 78 ರಿಂದ 100 ಎಕರೆ ಭೂಮಿ ಮಾತ್ರ ಹೋಗುತ್ತದೆ ಎನ್ನುವ ಶಾಸಕರ ಹೇಳಿಕೆ ಶುದ್ಧ ಸುಳ್ಳು. ಅದು ಅಭಯಾರಣ್ಯವಾಗಿದೆ. ಆ ಯೋಜನೆಯ ಮುಗಿಯುವ ಹೊತ್ತಿಗೆ 21,000 ಕೋಟಿಗಿಂತಲೂ ಹೆಚ್ಚಿನ ಹಣ ಖರ್ಚಾಗುತ್ತದೆ. ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆ ಪ್ರದೇಶವೇ ಮುಚ್ಚಿ ಹೋಗಬಹುದು. ಎರಡು ಸಾವಿರ ಮೇಗಾವ್ಯಾಟ್ ವಿದ್ಯುತ್ ಟ್ರಾನ್ಸ್ಫರ್ ಮಾಡಲು 8000 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ ಎಂದರು.

ಶಾಸಕರ ಇಂತಹ ಅಸಂಬದ್ಧ ಹೇಳಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹೈವೇಗೆ ಮರ ಹೋಗುವುದಿಲ್ಲವಾ ಎಂದಿದ್ದಾರೆ. ಆದರೆ ಹೈವೇಗೂ ಇದಕ್ಕೂ ವ್ಯತ್ಯಾಸವಿದೆ. ಈ ಯೋಜನೆಗೆ ಪರ್ಯಾಯವಾಗಿ ವಿದ್ಯುತ್ ಉತ್ಪಾದನೆ ಮಾಡಲು ಅನೇಕ ಮಾರ್ಗಗಳಿವೆ. ಶಾಸಕರಿಗೆ ಅದರ ಅರಿವಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಈ ಯೋಜನೆಯನ್ನು ವಿರೋಧಿಸಿದ್ದಾರೆ ಮತ್ತು ಕೇಂದ್ರದ ಗಮನ ಸೆಳೆಯುವುದಾಗಿ ಹೇಳಿದ್ದಾರೆ.

ಮಲೆನಾಡಿನಲ್ಲಿ ಬರಗಾಲ ಬಂದಿದೆ. ಅನೇಕ ಕಡೆ ಗುಡ್ಡ ಕುಸಿಯುತ್ತಿದೆ. ಪರಿಸರ ನಾಶವಾಗಿದೆ. ಇದು ವನ್ಯಜೀವಿ ಸಿಂಘಳೀಕ ಅಭಯಾರಣ್ಯವಾಗಿದ್ದು, ಈ ಯೋಜನೆಗೆ ಅನುಮತಿ ನೀಡಲು ಸಾಧ್ಯವೇ ಇಲ್ಲ. ಮಲೆನಾಡಲ್ಲಿ ಈಗಾಗಲೇ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ನಿಂತ್ತಿದೆ. ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲ. ಸರ್ಕಾರ ಅತೀವೃಷ್ಟಿಗೆ ಇನ್ನೂ ಪರಿಹಾರ ನೀಡಿಲ್ಲ. ಅನಾವೃಷ್ಟಿಕ್ಕೆ ಸಮಾರೋಪಾದಿಯಲ್ಲಿ ಕಾರ್ಯಕ್ರಮ ಹಾಕಿಕೊಂಡು ರೈತರ ಬೆನ್ನೆಲುಬಾಗಿ ನಿಲ್ಲಬೇಕು. ಮಧುಸೂದನ್ ನಾಯಕ್ ವರದಿ ಬಗ್ಗೆ ಸರ್ಕಾರ ಈಗ ಮೌನವಹಿಸಿದೆ. ಈ ವರದಿಯ ಅಧ್ಯಯನ ಮಾಡಿ, ರಾಜ್ಯದ ಜನತೆಗೆ ತಿಳಿಸಲು ಬಿಜೆಪಿ ವಿಶೇಷ ಸಮಿತಿ ಮಾಡಲಿದೆ. ಈ ಸಮಿತಿಯ ಮೂಲಕ ವಾಸ್ತವಾಂಶವನ್ನು ಜನರಿಗೆ ತಿಳಿಸಲಾಗುವುದು. ಕೋಟ್ಯಾಂತರ ರೂ. ಹಣ ಖರ್ಚುಮಾಡಿ, ಈ ವರದಿ ಮುಚ್ಚಿಡುವುದೇಕೆ ಇದರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತೆ ಆಗಿದೆ ಎಂದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments