ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.13
ಸಮಸ್ಯೆಗಳ ಕುರಿತು ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ “ಪಬ್ಲಿಕ್ ಐ” ಎಂಬ ನೂತನ ಶಿವಮೊಗ್ಗ ಸಂಚಾರ ಪೊಲೀಸ್ ಸಹಾಯವಾಣಿ ಹಾಗೂ ಪೊಲೀಸ್ ತುರ್ತು ಸಹಾಯವಾಣಿ (112) ಜಾಗೃತಿ ಪೋಸ್ಟರ್‌ಗಳನ್ನು ಸಿಟಿ ಬಸ್‌ಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಭಾನುವಾರ ಜಿಲ್ಲಾ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಸಿಖಿಲ್ ರವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಸಿಟಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಭೆ ನಡೆಸಿ ಈ ಕುರಿತು ಮಾಹಿತಿ ನೀಡಿದರು.
ಗಮನಿಸಿ: RSS ನೋಂದಣಿಯನ್ನು ಪ್ರಶ್ನಿಸುವವರು “ಅಹಿಂದ” ನೋಂದಣಿಯನ್ನು ಪ್ರಶ್ನಿಸಲಿ
ಜಿಲ್ಲೆಯ ಎಲ್ಲಾ ಸಿಟಿ ಬಸ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು. ಪ್ರಯಾಣಿಕರು ಕೈತೋರಿಸಿದ ಸ್ಥಳಗಳಲ್ಲಿ ಬಸ್ ನಿಲ್ಲಿಸದೆ, ನಿಗದಿಪಡಿಸಿರುವ ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವಂತೆ ಸೂಚಿಸಿದರು.

ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಸ್ ಚಾಲಕರು ಅಥವಾ ನಿರ್ವಾಹಕರು ಅನುಚಿತವಾಗಿ ವರ್ತಿಸಿದರೆ, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಸಿದರೆ, ಜೋರಾಗಿ ಅಸಭ್ಯ ಹಾಡುಗಳನ್ನು ಪ್ರಸಾರ ಮಾಡಿದರೆ ಅಥವಾ ಇತರೆ ಯಾವುದೇ ಸಮಸ್ಯೆಗಳ ಕುರಿತು ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಈ “ಪಬ್ಲಿಕ್ ಐ” ಸಂಚಾರಿ ಸಹಾಯವಾಣಿ ಅಳವಡಿಸಲಾಗಿದೆ ಎಂದರು.

ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ಅವರು ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಲಿಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಹತ್ವದ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಿವಮೊಗ್ಗ ಸಂಚಾರ ವೃತ್ತ ನೀರಿಕ್ಷಕ ದೇವರಾಜ್, ಪಿಎಸ್‌ಐ ಸ್ವಪ್ನ ಅಕ್ಬರ್ ಹಾಗೂ ಸಿಟಿ ಬಸ್ ಮಾಲೀಕರು ಡ್ರೈವರ್ಸ್ ಚಾಲಕರು ಭಾಗವಹಿಸಿದ್ದರು.
