Homeಜಿಲ್ಲೆಹುಲಿಕಲ್ ಘಾಟ್ ಕಾಮಗಾರಿ ಇಲಾಖೆಗೆ ಸವಾಲಾಗಿದೆ: ಸತೀಶ್ ಜಾರಕಿಹೊಳಿ

ಹುಲಿಕಲ್ ಘಾಟ್ ಕಾಮಗಾರಿ ಇಲಾಖೆಗೆ ಸವಾಲಾಗಿದೆ: ಸತೀಶ್ ಜಾರಕಿಹೊಳಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.14

ಹುಲಿಕಾಲ್ ಘಾಟ್ ದುರಸ್ಥಿ ಕಾಮಗಾರಿ ನಮ್ಮ ಇಲಾಖೆಗೆ ಸವಾಲಾಗಿದ್ದು, ಅದಷ್ಟು ಬೇಗ ಈ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಬೇಕೆಂದು ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಮಂಗಳವಾರ ಹುಲಿಕಲ್ ಘಾಟ್ ನ ಕಾಮಗಾರಿ ಸ್ಥಳವನ್ನು ಪರಿಶೀಲಿಸಿ ಮಾಧ್ಯಮಗಾರರೊಂದಿಗೆ ಮಾತನಾಡಿದರು.

ಮಳೆಗಾಲ ಇರುವುದರಿಂದ ಕಾಮಗಾರಿ ತಡವಾಗುತ್ತಿದೆ. ಮಳೆಗಾಲದ ನಂತರ ಪೂರ್ಣವಾಗಿ ಮುಗಿಸಲಾಗುತ್ತದೆ. ಘಾಟ್ ಕಾಮಗಾರಿ ಸಂಬಂಧಪಟ್ಟಂತೆ ಸಾರ್ವಜನಿಕರು ಸಲಹೆ ನೀಡಿದರೆ ಅದನ್ನು ಗಣನೆಗೆ ತೆಗೆದುಕೊಂಡು ಇಲಾಖೆ ಕೆಲಸ ಮಾಡುತ್ತದೆ ಎಂದರು.

ಗಮನಿಸಿ:ಹೊಸನಗರ ಶಾಲೆಗೆ ಸತೀಶ್ ಜಾರಕಿಹೊಳಿ ದಿಢೀರ್ ಭೇಟಿ.. ಕಾರಣವೇನು?

ರಾಜ್ಯದ ಯಾವ ಭಾಗದಲ್ಲು ಇಂತಹ ಸಮಸ್ಯೆ ಕಂಡು ಬಂದರೆ ನಮ್ಮ ಇಲಾಖೆ ಆದನ್ನು ಸವಾಲಾಗಿ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು.

ಹಸಿರು ಮಕ್ಕಿ ಸೇತುವೆಗೂ ಭೇಟಿ ನೀಡಿದ್ದು, ಆದಷ್ಟು ಬೇಗ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ಪಿಬ್ಲ್ಯೂಡಿ ಇಲಾಖೆಯಲ್ಲಿ ತಾತ್ಕಲಿಕ ನೌಕರರ ಸಂಬಳ ಕುರಿತು ಮಾತನಾಡಿ, ಗುತ್ತಿದಾರರು ಸಂಬಳದ ಬಿಲ್ ಮಾಡಲು ತಡ ಮಾಡಿದ್ದಾರೆ. ಹಾಗಾಗಿ ಸರಿಯಾದ ಸಮಯಕ್ಕೆ ಸಂಬಳ ಆಗಿಲ್ಲ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಗುತ್ತಿಗೆ ಆಧಾರ ಮೇಲೆ ಅವರನ್ನು ಕೆಲಸಕ್ಕೆ ತೆಗೆದುಕೊಂಡು ನೇರವಾಗಿ ಸಂಬಳ ನೀಡಲಾಗುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments