Homeಜಿಲ್ಲೆಒಳಚರಂಡಿ-ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಕಾಯಂ ಮಾಡಲಾಗುತ್ತದೆ: ಮಾಯಣ್ಣ

ಒಳಚರಂಡಿ-ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಕಾಯಂ ಮಾಡಲಾಗುತ್ತದೆ: ಮಾಯಣ್ಣ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.14

ಒಳಚರಂಡಿ ಸಿಬ್ಬಂದಿ‌ ಜತೆಗೆ ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಕಾಯಂ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರಾದ ಕೆ.‌ಮಾಯಣ್ಣ ಗೌಡ ಹೇಳಿದರು.

ಅವರು ಮಂಗಳವಾರ ನಮಸ್ತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೌರ ಕಾರ್ಮಿಕರ ಹಿತಾ ರಕ್ಷಣೆಗೆ ಮಹಾನಗರ ಪಾಲಿಕೆ ಎಲ್ಲಾ ರೀತಿಯಲ್ಲೂ ಬದ್ದವಾಗಿದೆ. ಪೌರ ಕಾರ್ಮಿಕರಆರೋಗ್ಯದ ದೃಷ್ಟಿಯಿಂದ ಎಲ್ಲಾ ರೀತಿಯ‌ಪರಿಕರಗಳನ್ನು ಕೂಡ ಒದಗಿಸಲಾಗಿದೆ.

ಆರೋಗ್ಯದ ಸಲುವಾಗಿ ಆಯುಷ್ಮಾನ್ ಕಾರ್ಡ್ ಮಾಡುವಂತದ್ದು, ಆಧುನಿಕ ಪರಿಕರಗಳನ್ನು ಕೊಟ್ಟು,ಅದಕ್ಕೆ ತಕ್ಕಂತೆ ಟ್ರೈನಿಂಗ್ ಕೊಡೋದು,  ಆರೋಗ್ಯ ತಪಾಸಣೆ ಮಾಡುವುದು, ಇದರ ಜತೆಗೆ ಬಹಳ ಮುಖ್ಯವಾಗಿ, ಬಹಳಮುಖ್ಯವಾಗಿ, ನೌಕರರನ್ನು ಪರ್ಮನೆಂಟ್ ಮಾಡುವಂತಹ ಕೆಲಸವನ್ನು ಕೂಡ ನಮ್ಮ ಸರ್ಕಾರಕ್ಕೆಮಾಡುತ್ತಿದೆ. ಈಗಾಗಲೇ ಅದಕ್ಕೂ ಕೂಡ ಒಂದು ಆದೇಶವನ್ನು ಕೂಡ ಹೊರಡಿಸಿದೆ ಎಂದರು.

ನಮಸ್ತೆ ಕಾರ್ಯಕ್ರಮ ಎನ್ನುವುದು ಪೌರ ಕಾರ್ಮಿಕರಿಗೆ  ಮಾತ್ರವಲ್ಲ. ಈ ಕಾರ್ಯಕ್ರಮ ಶಾಲು ಹಾಕಿ  ನೆನಪಿನ ಕಾಣಿಕೆ ನೀಡಿ ಸನ್ಮಾನಕ್ಕೆ ಮಾತ್ರ ಸಿಮೀತ ಮಾಡುವುದಲ್ಲ, ಪೌರ ಕಾರ್ಮಿಕರು, ಚಿಂದಿ ಆಯುವವರು ಸೇರಿ ನಗರವನ್ನು ಸ್ವಚ್ಛ ಗೊಳಿಸುವವರ ಆರೋಗ್ಯ ಕಾಪಾಡುವುದು ಈ‌ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನಮಸ್ತೆ  ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಸ್ಕ್ಯಾಂವೆಜರ್ಸ್ ಪುನರ್ವಸತಿ ಗಾಗಿ ಸ್ವಯಂ ಉದ್ಯೋಗ  ಯೋಜನೆಯಲ್ಲಿ ಅನೇಕ‌ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಒಟ್ಟಾರೆ ನೈರ್ಮಲ್ಯ ಕಾರ್ಮಿಕ ಬದುಕು ಹಸನುಗೊಳಿಸಲು ಯೋಜನೆಯನ್ನು ರೂಪಿಸಲಾಗಿದ್ದು, ಅವರ ಆಭ್ಯುದಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

ಸಂದರ್ಭದಲ್ಲಿ ನೈರ್ಮಲ್ಯ ಕೆಲಸದಲ್ಲಿ ತೊಡಗಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಹಾಗೆಯೇ ಹಲವರಿಗೆ ಆರೋಗ್ಯ ಸುರಕ್ಷತೆಯ ಕಿಟ್ ಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಉಪ ಆಯುಕ್ತರಾದ( ಅಭಿವೃದ್ಧಿ) ತೇಜು ಪ್ರಸಾದ್,  ನಮಸ್ತೆ ನೋಡಲ್ ಅಧಿಕಾರಿಯೂ ಆದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುಷ್ಪಾವತಿ, ಕಾರ್ಯ ಪಾಲಕ ಅಭಿಯಂತರರಾದ ಪ್ರಿಯಾ ಪಿ ,ಇದ್ದರು. ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ( ಪರಿಸರ) ಪ್ರಭಾಕರ್ ಅವರ ಎಲ್ಲರನ್ನುಸ್ವಾಗತಿಸಿದರು. ಕಾರ್ಯ ಕ್ರಮದ ನಂತರ ರಂಗ ಕಲಾವಿದ ಅಪರಂಜಿ ಶಿವರಾಜು ಅವರು ಸ್ಬಚ್ವತ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments