Homeಜಿಲ್ಲೆಪಿ.ಲಂಕೇಶ್ ಇಂದಿಗೂ ಪತ್ರಿಕೋದ್ಯಮದ ದಾರಿದೀಪ: ಡಾ.ಸರ್ಫರಾಜ್ ಚಂದ್ರಗುತ್ತಿ

ಪಿ.ಲಂಕೇಶ್ ಇಂದಿಗೂ ಪತ್ರಿಕೋದ್ಯಮದ ದಾರಿದೀಪ: ಡಾ.ಸರ್ಫರಾಜ್ ಚಂದ್ರಗುತ್ತಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.17

“ಪತ್ರಿಕಾರಂಗವೇ ಪ್ರಜಾಪ್ರಭುತ್ವದ ನಿಜವಾದ ವಿರೋಧ ಪಕ್ಷ” ಎಂಬ ಪಿ. ಲಂಕೇಶ್ ಅವರ ನಿಲುವು ಇಂದಿಗೂ ಪತ್ರಿಕೋದ್ಯಮಕ್ಕೆ ದಾರಿದೀಪವಾಗಿದೆ ಎಂದು ಲೇಖಕ ಡಾ.ಸರ್ಫರಾಜ್ ಚಂದ್ರಗುತ್ತಿ ಹೇಳಿದರು.

ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೊರಬ ತಾಲೂಕು ಘಟಕದಿಂದ ಶುಕ್ರವಾರ ಪಟ್ಟಣದ ಶ್ರೀ ರಂಗ ಕನ್ವೆನ್ಶನ್ ಹಾಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕರ್ನಾಟಕದ ಹಿರಿಯ ಪತ್ರಕರ್ತ ಪಿ.ಲಂಕೇಶ್ ಅವರ ಕೊಡುಗೆಯನ್ನು ಸ್ಮರಿಸಿದ ವಕ್ತಾರರು, ಸಾಮಾನ್ಯ ಜನರಿಗೆ ಸಾಹಿತ್ಯ, ರಾಜಕೀಯ ಮತ್ತು ಸಾಮಾಜಿಕ ಅರಿವು ಮೂಡಿಸುವಲ್ಲಿ ಅವರ ಪತ್ರಿಕೆ ಮಹತ್ತರ ಪಾತ್ರ ವಹಿಸಿತು ಎಂದರು.

ಗಮನಿಸಿ: ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಾಲಯದ ಅನುಭವ ಸಿಗಬೇಕು: ಬಿವೈಆರ್

ಪತ್ರಿಕೋದ್ಯಮವು ಸತ್ಯ, ನಿಷ್ಪಕ್ಷಪಾತತೆ ಮತ್ತು ಜನಪರ ಧೋರಣೆಯೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠವಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕೆಗಳ ಪಾತ್ರ ಅಮೂಲ್ಯ ಎನ್ನುವ ಮೂಲಕ ಪತ್ರಿಕೋದ್ಯಮದ ಇತಿಹಾಸ, ಹೋರಾಟ ಮತ್ತು ಹೊಣೆಗಾರಿಕೆ ಕುರಿತು ವಿಶ್ಲೇಷಣೆ ಮಾಡಿದರು. ಪತ್ರಿಕೋದ್ಯಮವು ಕೇವಲ ಸುದ್ದಿ ಪ್ರಸಾರದ ಮಾಧ್ಯಮವಲ್ಲ; ಅದು ಸಮಾಜದ ಧ್ವನಿ, ಅಧಿಕಾರವನ್ನು ಪ್ರಶ್ನಿಸುವ ಶಕ್ತಿ ಮತ್ತು ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ  ಮಾತನಾಡಿ, ತಾಲೂಕಿನ ಪ್ರಗತಿಯಲ್ಲಿ ಮೊದಲಿನಿಂದಲೂ ಮಾಧ್ಯಮಗಳ ಪಾತ್ರ ದೊಡ್ಡದು. ಜನಪ್ರತಿನಿಧಿಗಳು ಹಾಗೂ ಜನರ ನಡುವಿನ ಕೊಂಡಿಯಾಗಿ ಅವರು ಕೆಲಸ ಮಾಡಿದ ಪರಿಣಾಮ ಅನೇಕ ಸಂಗತಿಗಳಿಗೆ ಪರಿಹಾರ ಸಿಕ್ಕಿದೆ. ಇದೇ ಸಹಕಾರ ಮುಂದೆಯೂ ಇರಲಿ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ ಮಾತನಾಡಿ, ಭಾಷಣಗಳಿಗಿಂತ ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರುವ ಚರ್ಚೆಗಳೇ ಪತ್ರಿಕಾ ದಿನಾಚರಣೆಯ ನಿಜವಾದ ಉದ್ದೇಶ. ಸ್ಥಳೀಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ, ಪರಿಹಾರದ ದಿಕ್ಕಿನಲ್ಲಿ ಸಮಾಜವನ್ನು ಮುನ್ನಡೆಸುವುದು ಪತ್ರಿಕೋದ್ಯಮದ ನೈತಿಕ ಹೊಣೆಗಾರಿಕೆ ಎಂದರು.

ಇದೇ ವೇಳೆ ಸಾಧಕರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಸಾಮಾಜಿಕ ಹೋರಾಟಗಾರ ರಾಜಪ್ಪ ಮಾಸ್ತರ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ವೈದ್ಯನಾಥ್, ಉಪಾಧ್ಯಕ್ಷರಾದ ಹುಚ್ಚರಾಯಪ್ಪ, ದೇಶಾದ್ರಿ ಹೊಸ್ಮನೆ, ಸಂಘದ ಜಿಲ್ಲಾ ನಿರ್ದೇಶಕರು ಹಾಗೂ ನಾವಿಕ ಪತ್ರಿಕೆ ಸುದ್ದಿ ಸಂಪಾದಕ ಎಸ್.ಆರ್. ರಂಜಿತ್, ಪತ್ರಕರ್ತರಾದ ನಾಗರಾಜ್ ಜೈನ್, ರಾಘವೇಂದ್ರ ಬಾಪಟ್ ಇದ್ದರು. ತಾಲೂಕು ಘಟಕದ ಅಧ್ಯಕ್ಚ ಜಿ.ಎಂ. ತೋಟಪ್ಪ ಅಧ್ಯಕ್ಷತೆ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments