Homeಜಿಲ್ಲೆಕಲಿತ ವಿದ್ಯೆ ಸಮುದಾಯದ ತಲ್ಲಣಗಳಿಗೆ ಸ್ಪಂದಿಸುವ ಗುಣವಿರಬೇಕು: ಕೆ.ಪ್ರಭಾಕರ್

ಕಲಿತ ವಿದ್ಯೆ ಸಮುದಾಯದ ತಲ್ಲಣಗಳಿಗೆ ಸ್ಪಂದಿಸುವ ಗುಣವಿರಬೇಕು: ಕೆ.ಪ್ರಭಾಕರ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.17

ತಾವು ಕಲಿತ ವಿದ್ಯೆಯನ್ನು ಸಮುದಾಯದ ತಲ್ಲಣಗಳಿಗೆ ಸ್ಪಂದಿಸುವ ಗುಣಗಳನ್ನಾಗಿ ಬೆಳೆಸಿಕೊಳ್ಳಿ ಎಂದು ಸಾಗರದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಶುಕ್ರವಾರ ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ಕಲಾ ಪರಿಷತ್, ಐಕ್ಯೂಎಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್ಸ್ , ಎನ್‌ಸಿಸಿ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಆಗಮನದ `ನವಯಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಮನಿಸಿ: ಪಿ.ಲಂಕೇಶ್ ಇಂದಿಗೂ ಪತ್ರಿಕೋದ್ಯಮದ ದಾರಿದೀಪ: ಡಾ.ಸರ್ಫರಾಜ್ ಚಂದ್ರಗುತ್ತಿ

ಹೊಸದಾಗಿ ಪದವಿ ತರಗತಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಸಹ್ಯಾದ್ರಿ ಕುಟುಂಬದ ಸದಸ್ಯರಾಗಿದ್ದಾರೆ. ಕೇವಲ ತರಗತಿಯ ಕಲಿಕೆಗೆ ಮಾತ್ರ ಸೀಮಿತವಾಗದೆ ಅದರಾಚೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಈಗ ಕೇವಲ ಅಂಕಗಳ ಕಾಲವಲ್ಲ, ಅದು ಕೌಶಲ್ಯದ ಕಾಲವಾಗಿದೆ. ಹೊಸ ಆಲೋಚನೆ, ಶಿಸ್ತು, ಸಮಾಜಮುಖಿ ಕೆಲಸಗಳಿಂದ ಯುವಕರು ಭವಿಷತ್ತನ್ನು ರೂಪಿಸಿಕೊಳ್ಳಬೇಕು. ಮತ್ತು ತಾವು ಪಡೆದ ಜ್ಞಾನವನ್ನು, ಆಲೋಚನೆಗಳನ್ನು ಸಮುದಾಯದ ಹಿತವನ್ನು ಕಾಪಾಡುವಂತೆ ಇರಬೇಕು. ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯ ಅಂಶಗಳನ್ನು ಮಾತ್ರ ಪಡೆದುಕೊಳ್ಳಿ, ವಿದ್ಯಾರ್ಥಿಗಳು ಬೀಗ ತೆಗೆಯುವ ಕೀಲಿಗಳಾಗಬೇಕೇ ಹೊರತು ಒಡೆಯುವ ಸುತ್ತಿಗೆ ಆಗಬಾರದು ಎಂದರು.

ಕೆಎಸ್‌ಆರ್‌ಪಿಯ ಕಮಾಡೆಂಟ್ ಎಸ್.ಯುವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಬೇಕು. ಯುವಶಕ್ತಿಯೇ ರಾಷ್ಟ್ರದ ಬೆನ್ನೆಲುಬು. ಯಾವುದೇ ಸವಾಲನ್ನು ಸ್ವೀಕರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಕಣ್ಣು ತೆರೆಸುವ ಕಾರ್ಯಕ್ರಮವೇ ಈ ನವಯಾನ. ಆ ಮೂಲಕ ಸಮುದಾಯದ ಪ್ರಜೆಯನ್ನು ಬೆಳೆಸಿ ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಮಾತ್ರವಲ್ಲ, ಬೇರೆಯವರಿಂದ ಮೋಸಕ್ಕೆ ಒಳಗಾಗಬಾರದು ಎಂಬುದನ್ನು ಕಲಿತುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಿರಾಜ್‌ಅಹ್ಮದ್ ಮಾತನಾಡಿ, ನವಯಾನ ಎಂದರೆ ಹೊಸ ಪಯಣ. ಈ ಕಾಲೇಜು ನಿಮಗೆ ಜ್ಞಾನದ ಜೊತೆಗೆ ಮೌಲ್ಯವನ್ನು ಕಲಿಸುತ್ತದೆ. ಎನ್‌ಎಸ್‌ಎಸ್, ಎನ್‌ಸಿಸಿ, ರೋರ‍್ಸ್ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದರು.

ಶಿಕ್ಷಣ ವ್ಯವಸ್ಥೆ, ಕಾರ್ಮಿಕರನ್ನಾಗಿ ರೂಪಿಸಬಾರದು. ಅದು ಮಾಲೀಕನನ್ನಾಗಿ ಮಾಡಬೇಕಾಗಿದೆ. ವ್ಯಕ್ತಿತ್ವದ ಶಿಕ್ಷಣ ನಮಗೆ ಬೇಕಾಗಿದೆ. ವ್ಯಕ್ತಿ ಗೌರವ, ಸಮಾನತೆ, ಸಹಕಾರದ ಮೂಲಕ ಯಾನ ಮಾಡುವುದೇ ನವಯಾನ. ವಿದ್ಯಾರ್ಥಿಗಳು ಈ ದಾರಿಯಲ್ಲೇ ಸಾಗಬೇಕಾಗಿದೆ. ಇತ್ತೀಚೆಗೆ ಮಾನವಿಕ ವಿಷಯಗಳಿಗೆ ಆದ್ಯತೆ ಸಿಗುತ್ತಿರುವುದು ಸಂತೋಷದ ವಿಷಯವಾಗಿದೆ. ಕಲಾ ಕಾಲೇಜಿನಲ್ಲಿ ಈ ಭಾರಿ ದಾಖಲೆಯ ಪ್ರವೇಶಾತಿಯಾಗಿದೆ ಎಂದರು.

ಸಹ್ಯಾದ್ರಿ ಕಲಾ ಪರಿಷತ್ತಿನ ಸಂಚಾಲಕ ಡಾ.ಎಂ.ಹೆಚ್.ಪ್ರಹ್ಲಾದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಂಜುನಾಥ್ ಕೆ.ಎನ್, ಡಾ.ಮಂಜುನಾಥ್ ಹೆಚ್.ಪಿ, ಡಾ.ಚಂದ್ರಪ್ಪ ಕೆ, ಡಾ.ಬಿ.ಎನ್.ಚಂದ್ರಶೇಖರ್, ಡಾ.ಹಾಲಮ್ಮ ಎಂ, ಡಾ.ಗಿರಿಜಮ್ಮ ಬೆಳಕೇರಿ, ಸಂತೋಷ್ ಬಿ.ಜೆ, ಶ್ವೇತಶ್ರೀ ಸೇರಿದಂತೆ ಹಲವರಿದ್ದರು. ಉಪನ್ಯಾಸಕಿ ಸಂಗೀತ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments