ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.20
ಎಳನೀರು ವ್ಯಾಪಾರಿ ಮಗಳನ್ನ ಶಾಲೆಗೆ ದಾಖಲಿಸಿಕೊಳ್ಳಲು ಪ್ರಾಂಶುಪಾಲ ಆಕೆಯ ತಂದೆಯ ಬಳಿ 20 ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, ಶಾಲೆ ಕೊಠಡಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾನೆ.
ಭದ್ರಾವತಿಯ ತಿಪ್ಲಾಪುರ ಕ್ಯಾಂಪ್ ನಿವಾಸಿಯ ಎಳನೀರು ವ್ಯಾಪಾರಿ ಮೇಘರಾಜ.ಸಿ ತಮ್ಮ ಮಗಳು ಕು. ದೀಕ್ಷಾಳನ್ನು ಭದ್ರಾವತಿಯ ಹುಣಸೆಕಟ್ಟೆ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 7 ನೇ ತರಗತಿಗೆ ಸೇರಿಸಲು ಹೋದಾಗ ಪ್ರಾಂಶುಪಾಲ ಶಾಲೆಗೆ ಡ್ರಮ್ ಸೆಟ್ ಕೊಳ್ಳುವ ನೆಪದಲ್ಲಿ 20 ಸಾವಿರ ಲಂಚ ಬೇಡಿಕೆ ಇಟ್ಟಿದ್ದಾನೆ.
ಮೇಘರಾಜನಿಗೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ಜು.18 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ 10 ಸಾವಿರ ಹಣದೊಂದಿಗೆ ಅಪಾದಿತ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರ ನೀಡಿದ್ದಾನೆ. ಈ ದೂರಿನ ಮೇರೆಗೆ ಕಲಂ7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988( ತಿದ್ದುಪಡಿ ಕಾಯಿದೆ-2018) ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜು.20 ರಂದು ಮಧ್ಯಾಹ್ನ 12.20 ಕ್ಕೆ ಶಾಲೆಯ ಪ್ರಾಂಶುಪಾಲ ನಾಮದೇವ್ ಮೇಘರಾಜನಿಂದ ಶಾಲೆಯ ಕೊಠಡಿಯಲ್ಲಿ 10 ಸಾವಿರ ಲಂಚ ಪಡೆದುಕೊಳ್ಳುತ್ತಿದ್ದು, ಆ ಸಮಯದಲ್ಲಿ ಲೋಕಾಯುಕ್ತರು ಆತನನ್ನು ಟ್ರ್ಯಾಪ್ ಮಾಡಿದ್ದಾರೆ ಹಾಗೂ ಲಂಚದ ಹಣವನ್ನು ಜಪ್ತಿ ಮಾಡಿ ಪ್ರಾಂಶುಪಾಲನನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರುದ್ರೇಶ್.ಕೆ.ಪಿ. ರವರು ಕೈಗೊಂಡಿದ್ದಾರೆ. ಟ್ರ‍್ಯಾಪ್ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರಾದ ರುದ್ರೇಶ್ ಕೆ.ಪಿ.ಟ್ರ‍್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್‌ಗಳಾದ ವೀರಬಸಪ್ಪ ಎಲ್ ಕುಸಲಾಪುರ ಹಾಗೂ ಸಿಬ್ಬಂದಿಯವರುಗಳು ಹಾಜರಿರುತ್ತಾರೆ
