Homeಜಿಲ್ಲೆನೀಟ್ ಪರೀಕ್ಷೆ ಅಕ್ರಮಗಳ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ನೀಟ್ ಪರೀಕ್ಷೆ ಅಕ್ರಮಗಳ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.20

ನೀಟ್ ಪರೀಕ್ಷೆ ಅಕ್ರಮಗಳ ತನಿಖೆಗೆ ಆಗ್ರಹಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸಾಮಾಜಿಕ ಹೋರಾಟ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದು, ಅವರನ್ನು ಬೆಂಬಲಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಶೇಖರ್ ಗೌಳೇರ್, ಪ್ರೊ.ಮೇಟಿ ಮಲ್ಲಿಕಾರ್ಜುನ್, ಪ್ರೊ.ಪ್ರಕಾಶ್ ಮರ್ಗನಳ್ಳಿ, ಎಂ.ಗುರುಮೂರ್ತಿ, ರಾಘವೇಂದ್ರ, ಬಿ.ಚಂದ್ರೇಗೌಡ, ಹೆಚ್.ಟಿ.ಕೃಷ್ಣಮೂರ್ತಿ, ಕೆ.ಎಲ್.ಅಶೋಕ್, ಅಕ್ಷತಾ ಹುಂಚದಕಟ್ಟೆ, ಪ್ರೊ.ರಾಚಪ್ಪ, ಜಿ.ಡಿ.ಮಂಜುನಾಥ್ ಸೇರಿದಂತೆ ಹಲವರು ಮಾತನಾಡಿ ಬೆಂಬಲ ಘೋಷಿಸಿದರು.

ಕೇಂದ್ರ ಸರ್ಕಾರ ಹೋರಾಟಗಳನ್ನು ಹತ್ತಿಕ್ಕೂವ ಕೆಲಸವನ್ನ ಮಾಡುತ್ತಿದೆ. ಕಳೆದ 21 ದಿನಗಳಿಂದ ಜಂತರ್‌ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತ ಬಂದಿರುವ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿದ್ದರು ಕೂಡ ಯಾವ ಭಯವು ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿದೆ. ಹೋರಾಟಗಾರರ ಜೀವಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲದಂತಾಗಿದೆ. ದೇಶದ ಆತ್ಮಶಕ್ತಿಯೇ ವಿನಾಶದತ್ತ ಸಾಗುತ್ತಿದೆ. ನೀಟ್ ಪರೀಕ್ಷೆಯಲ್ಲಿ ಅದೆಷ್ಟು ಅಕ್ರಮಗಳಾಗುತ್ತಿವೆ. ಪ್ರತಿ ವರ್ಷ ಇದೇ ಗೋಳಾಗಿದೆ. ಇದು ಈ ವರ್ಷ ಮಿತಿ ಮೀರಿ ಅನೇಕ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು ಕೂಡ ಸತ್ಯಾಗ್ರಹದಿಂದ ಬಳಲಿ ಹೋಗಿದ್ದಾರೆಂದು ದೂರಿದರು.

ಈ ಕೇಂದ್ರ ಸರ್ಕಾರ ಮಾನ ಮರ್ಯಾದೆ ಏನು ಇಲ್ಲ. ಪತ್ರಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕನಿಷ್ಟ ಪಕ್ಷ ವಿದ್ಯಾರ್ಥಿಗಳ ಭಾವನೆಗಳನ್ನು ಕೇಳಲು ಕೂಡ ಅವರಿಗೆ ಪುರುಸೋತ್ತಿಲ್ಲ.

ವಾಂಗ್ಚುಕ್ ಅವೆರ ನಡೆಸಿಕೊಂಡ ಕ್ರಮ ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಇಂದಿನನಿಂದ ಚಳಿಗಾಲ ಅಧಿವೇಶನದಲ್ಲೂ ಪ್ರಾರಂಭವಾಗಲಿದ್ದು, ಈ ಬಗ್ಗೆ ಪ್ರಸ್ತಾಪವಾಗಬೇಕು. ಇದಕ್ಕೆ ಸಿಜೆಪಿ ಪಕ್ಷ ಒತ್ತಾಯ ಕೂಡ ಮಾಡಿದೆ. ಇದು ಕೇವಲ ಸಿಜೆಪಿ ಅವರ ಒತ್ತಾಯ ಅಲ್ಲ. ಅದು ಇಡೀ ದೇಶದ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರ ಬೇಡಿಕೆ ಆಗಿದೆ ಎಂದು ತಿಳಿಸಿದರು.

ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸೋನಮ್ ವಾಂಗ್ಚುಕ್ ಅವರ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಶಿಕ್ಷಣ ಇಲಾಖೆಗಳಲ್ಲಿನ ಆರೋಪ, ಆಕ್ರಮಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯಾಗಿ ಕೇಂದ್ರ ಶಿಕ್ಷಣ ಸಚಿವ ಕೂಡಲೇ ರಾಜೀನಾಮೆ ಕೊಡಲೆ ಬೇಕು ಮತ್ತು ಹೋರಾಟ ನಿರತರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯ ಕೂಡಲೇ ನಿಲ್ಲಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪತ್ರಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಡಿ.ಮಂಜುನಾಥ್, ಸಬಿತಾ ಬನ್ನಾಡಿ, ಕೇಶವಶರ್ಮ, ಸವಿತಾ ನಾಗಭೂಷಣ್, ದೇವೇಂದ್ರಪ್ಪ, ಶೃಂಗಶ್ರೀ, ಜಿ.ಕೆ.ಪ್ರೇಮ, ಲವ.ಜಿ.ಆರ್, ದೇವು, ಜಾರ್ಜ್ ಸಲ್ಡಾನ, ಸುರೇಶ್, ಅಶೋಕ್ ಕುಮಾರ್, ಗಿತೇಂದ್ರ ಗೌಡ, ನವೀನ್ ತಲಾರಿ ಸಂಗೀತ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments