Homeಜಿಲ್ಲೆಒಪಿಡಿಗೆ ಇಎಸ್‌ಐ ಸೇವೆಯನ್ನು ಪುನಾರಂಭಿಸಿ: ಕಾರ್ಮಿಕರ ಕ್ಷೇಮಾಭೀವೃದ್ದಿ ಸಂಘ ಆಗ್ರಹ

ಒಪಿಡಿಗೆ ಇಎಸ್‌ಐ ಸೇವೆಯನ್ನು ಪುನಾರಂಭಿಸಿ: ಕಾರ್ಮಿಕರ ಕ್ಷೇಮಾಭೀವೃದ್ದಿ ಸಂಘ ಆಗ್ರಹ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.5

ಕಳೆದ ಎರಡು ತಿಂಗಳಿನಿಂದ ಇಎಸ್‌ಐ ಒಪಿಡಿ ಸೇವೆ ಸ್ಥಗಿತಗೊಂಡಿದ್ದು, ಕೂಡಲೇ ಪುನಾರಂಭ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷ ರಾಜಾಸಾಬ್.ಹೆಚ್ ನಂದಿಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಎಸ್‌ಐ ಯೋಜನೆ ಎನ್ನುವುದು ದೇಶದ ಕಾರ್ಮಿಕರಿಗೆ ವೈದ್ಯಕೀಯ ಭದ್ರತೆ ಒದಗಿಸುವ ಉದ್ದೇಶದಿಂದ 1950 ರಲ್ಲಿ ಸ್ಥಾಪನೆಯಾದ ಒಂದು ಮಹತ್ವದ ಸಾಮಾಜಿಕ ಭದ್ರತೆಯಾಗಿದೆ. ಈ ಯೋಜನೆಗೆ ಕಾರ್ಮಿಕರು ಹಾಗೂ ಉದ್ಯೋಗದಾತರು ನಿಯಮಿತವಾಗಿ ಹಣವನ್ನು ಪಾವತಿಸುತ್ತಾರೆ. ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯುವುದು ಕಾರ್ಮಿಕ ಹಕ್ಕಾಗಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಒಪಿಡಿ ಸೇವೆ ನಿಲ್ಲಿಸಿ ವಿಮಾದಾರರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಗಮನಿಸಿ: ಕೆಪಿಎಸ್‌ಸಿ ಈಗ “ಕ್ಯಾಶ್ ಪೋಸ್ಟ್ ಸೆಂಟರ್ ಕಾಂಗ್ರೆಸ್ ಪಾರ್ಟಿ” ಆಗಿದೆ: ಧನಂಜಯ್ ಸರ್ಜಿ

ಒಪಿಡಿ ಸೇವೆ ಸ್ಥಗಿತದಿಂದ ಸಾವಿರಾರು ಕಾರ್ಮಿಕರು ಹಾಗೂ ಕುಟುಂಬದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನನಿತ್ಯ ಔಷಧಿಯನ್ನು ಪಡೆಯಬೇಕಾದ ರೋಗಿಗಳು ಚಿಕಿತ್ಸೆಯಿಂದಲೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಅನೇಕರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಹಲವು ಬಾರಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಯಾವುದೇ ಅಡಚಣೆ ಇಲ್ಲದೆ ಔಷಧಿ ಹಾಗೂ ಚಿಕಿತ್ಸೆ ಒದಗಿಸಬೇಕು. ಒಪಿಡಿ ಅಥವಾ ಇತರೆ ಚಿಕಿತ್ಸೆ ನಿಲ್ಲುವಂತಹ ಸಮಸ್ಯೆಗಳು ಮರು ಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಇಎಸ್‌ಐ ಚಿಕಿತ್ಸಾಲಯಗಳಲ್ಲಿ ಲ್ಯಾಬ್ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಅನಿವಾರ್ಯ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಮಹೇಶ್ವರಪ್ಪ, ಕಾರ್ಯದರ್ಶಿ ಅಜ್ಜಯ್ಯ.ಎಸ್, ಪ್ರಮುಖರಾದ ರಾಘವೇಂದ್ರ, ರವೀಂದ್ರ, ರಘುನಾಥ್ ಇನ್ನಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments